ಮತ್ತೆ ಮದುವೆಯಾದ ಎಚ್.ಡಿ.ರೇವಣ್ಣ, ಕಾರಣ ಗೊತ್ತಾ?

ಹಾಸನ, ಭಾನುವಾರ, 24 ಡಿಸೆಂಬರ್ 2017 (14:33 IST)


ಮಾಜಿ ಸಚಿವ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ಅವರು ಮತ್ತೆ ಮದುವೆ ಮಾಡಿಕೊಂಡಿದ್ದಾರೆ. ಇದಕ್ಕೆ ರೇವಣ್ಣ ಅವರ ತಂದೆಯಾಗಿರುವ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಹಾಗೂ ತಾಯಿ ಚನ್ನಮ್ಮ ಸಾಕ್ಷಿಯಾಗಿದ್ದಾರೆ.
 
ಮದುವೆ ಎಂದ ತಕ್ಷಣ ಮತ್ತೊಂದು ಮದುವೆಯಾಗಿದ್ದಾರೆ ಎಂದು ತಿಳಿದುಕೊಳ್ಳಬೇಡಿ. 60ನೇ ವಸಂತಕ್ಕೆ ಕಾಲಿರಿಸಿದ ಹಿನ್ನೆಲೆಯಲ್ಲಿ ರೇವಣ್ಣ  ಅವರು ಷಷ್ಠಿಪೂರ್ತಿ ಕಾರ್ಯಕ್ರಮವನ್ನು ಆಚರಣೆ ಮಾಡಿಕೊಂಡಿದ್ದು, ಆದ್ದರಿಂದ ಮತ್ತೊಮ್ಮೆ ಭವಾನಿ ರೇವಣ್ಣನವರಿಗೆ ತಾಳಿ ಕಟ್ಟುವುದರ ಮೂಲಕ ಸಂಭ್ರಮ ಹಂಚಿಕೊಂಡರು.
 
ಆದಿಚುಂಚನಗಿರಿಮಠದ ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ಮಾಡಿದ್ದಾರೆ. ಮಕ್ಕಳಾದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ, ಸೂರಜ್ ಅವರ ಭಾವಿ ಪತ್ನಿ ಸಾಕ್ಷಿಯಾದ್ರು. ಇವರಷ್ಟೇ ಅಲ್ಲದೇ ಕುಟುಂಬ ಸದಸ್ಯರು, ಅಪಾರ ಅಭಿಮಾನಿಗಳು ಹಾಗೂ ಹಿತೈಷಿಗಳು ಆಗಮಿಸಿ ಶುಭಕೋರಿದ್ರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭ್ರಷ್ಟಾಚಾರ ನಿಭಾಯಿಸಲು ಮೋದಿ ವಿಫಲ– ಅಣ್ಣಾ ಹಜಾರೆ

ದೇಶದ ಗಂಭೀರ ಸಮಸ್ಯೆಗಳನ್ನು ಹಾಗೂ ಭ್ರಷ್ಟಾಚಾರ ಹಾವಳಿ ನಿಭಾಯಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ...

news

ಬಿಜೆಪಿಯ ಪತ್ರ ರಾಜಕೀಯದಿಂದ ಏಕತೆಗೆ ಧಕ್ಕೆ– ದಿನೇಶ ಗುಂಡೂರಾವ್

ಮಹಾದಾಯಿ ವಿಚಾರದಲ್ಲಿ ಬಿಜೆಪಿಯ ಪತ್ರ ರಾಜಕೀಯದಿಂದ ಎರಡು ರಾಜ್ಯಗಳ ಏಕತೆಗೆ ಧಕ್ಕೆ ಉಂಟಾಗುತ್ತಿದೆ. ಈ ...

news

ಹುಟ್ಟಿದ ಮೂರೇ ದಿನಕ್ಕೆ ಮಗುವನ್ನು ಬಿಟ್ಟುಹೋದ ತಾಯಿ!

ಮೂರು ದಿನಗಳ ಹಿಂದೆ ಜನಿಸಿರುವ ಹೆಣ್ಣು ಶಿಶುವನ್ನು ನಿರ್ದಯಿ ತಾಯಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿರುವ ಘಟನೆ ...

news

ಮಹಾದಾಯಿ ವಿಚಾರದಲ್ಲಿ ಬಿಎಸ್‌ವೈ, ಪರಿಕ್ಕರ್‌ರಿಂದ ನಾಟಕ– ಸಿದ್ದರಾಮಯ್ಯ

ಮಹಾದಾಯಿ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಗೋವಾ ಮುಖ್ಯಮಂತ್ರಿ ಮನೋಹರ್ ...

Widgets Magazine