Widgets Magazine
Widgets Magazine

ತಾರಾ ಪ್ರಚಾರಕರ ಪಟ್ಟಿಯಲ್ಲಿ ಹೆಗಡೆಗೆ ಆರನೇ ಸ್ಥಾನ- ಬಿಜೆಪಿಯಲ್ಲಿ ಅಸಮಾಧಾನ

ಬೆಂಗಳೂರು, ಮಂಗಳವಾರ, 30 ಜನವರಿ 2018 (07:31 IST)

Widgets Magazine

ಕರ್ನಾಟಕದ ವಿಧಾನಸಭೆ ಚುನಾವಣೆಗೆ ಬಿಜೆಪಿ ವರಿಷ್ಠರು ಸಿದ್ಧಪಡಿಸಿರುವ ತಾರಾ ಪ್ರಚಾರಕರ ಪಟ್ಟಿಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆಗೆ ಆರನೇ ಸ್ಥಾನ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಧಾನಮಂತ್ರಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ ಹಾಗೂ ಅನಂತಕುಮಾರ ಹೆಗಡೆ ಅವರಿಗೆ ಕ್ರಮವಾಗಿ ಮೊದಲಿನ ಆರು ಸ್ಥಾನಗಳನ್ನು ನೀಡಿ ಒಟ್ಟು 75 ಜನರ ತಾರಾ ಪ್ರಚಾರಕರ ಪಟ್ಟಿ ತಯಾರಿಸಲಾಗಿದೆ.

ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ರಮೇಶ ಜಿಗಜಿಣಗಿ, ಸುಷ್ಮಾ ಸ್ವರಾಜ್, ನಿರ್ಮಲಾ ಸೀತಾರಾಮನ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹಾಗೂ ಕೆ.ಎಸ್.ಈಶ್ವರಪ್ಪ ಅವರಿಗೆ ಹೆಗಡೆ ನಂತರದ ಸ್ಥಾನ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ತಾರಾ ಪ್ರಚಾರಕರ ಪಟ್ಟಿ ತಯಾರಿಸುವಾಗ ಶಿಷ್ಠಾಚಾರ ಪಾಲನೆ ಮಾಡಿಲ್ಲ ಎಂದು ಹೇಳಲಾಗಿದ್ದು, ಪ್ರಚೋದನಕಾರಿ ಹೇಳಿಕೆ ನೀಡಿ ವಿವಾದ ಹುಟ್ಟುಹಾಕುವ ಅನಂತಕುಮಾರ ಹೆಗಡೆ ಅವರಿಂದ ಪಕ್ಷಕ್ಕೆ ಅನುಕೂಲ ಕಡಿಮೆ. ಆದರೂ ಅವರಿಗೆ ಆರನೇ ಸ್ಥಾನ ನೀಡಿರುವುದು ಸಮಂಜಸವಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಜೆಡಿಎಸ್ ಬಂಡಾಯ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಖಚಿತ

ಜೆಡಿಎಸ್ ಬಂಡಾಯ ಶಾಸಕರಿಗೆ ಹೈಕಮಾಂಡ್ ತೀರ್ಮಾನದಂತೆ ಟಿಕೆಟ್ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ...

news

ಮದುವೆಗೆ ಒತ್ತಾಯಿಸುತ್ತಿರುವ ಮಹಿಳಾ ಎಸ್ಐ- ಪತ್ರಕರ್ತನ ಪತ್ನಿ ದೂರು

ಪತಿಯನ್ನು ಮತಾಂತರ ಮಾಡಿ ಮದುವೆಯಾಗಲು ಮಹಿಳಾ ಎಸ್ಐ ಪ್ರಯತ್ನಿಸಿದ್ದಾರೆ ಎಂದು ಆರೋಪ ಮೈಸೂರಿನಲ್ಲಿ ...

news

ಗೌರಿ ಹತ್ಯೆ ಸಿಬಿಐ ತನಿಖೆಗಾಗಿ ಕೋರ್ಟಿಗೆ- ಇಂದ್ರಜಿತ್

ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್ ...

news

ಸಿದ್ದರಾಮಯ್ಯರನ್ನು ಮುಂದಿನ ಅವಧಿಗೂ ಸಿಎಂ ಮಾಡಿ ಋಣ ಸಂದಾಯ- ಎಚ್.ಆಂಜನೇಯ

ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಋಣ ತೀರುಸುವ ಕೆಲಸ ಮಾಡಬೇಕಿದೆ ಎಂದು ...

Widgets Magazine Widgets Magazine Widgets Magazine