ರಾಜ್ಯ ಬಿಜೆಪಿ ನಾಯಕರಿಗೆ ಶಾಕ್ ಮೂಡಿಸಿದ ಹೈಕಮಾಂಡ್ ತಂತ್ರ!

ಬೆಂಗಳೂರು, ಭಾನುವಾರ, 3 ಡಿಸೆಂಬರ್ 2017 (13:35 IST)

ರಾಜ್ಯ ರಾಜಕಾರಣದಲ್ಲಿ ತಾವೇ ಸರ್ವಸ್ವ, ಸರ್ವೋಚ್ಚ ನಾಯಕ ಎಂದು ಬೀಗುತ್ತಿದ್ದ ಬಿಜೆಪಿ ನಾಯಕರಿಗೆ ಪಕ್ಷದ ಹೈಕಮಾಂಡ್ ಶಾಕ್ ನೀಡಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಸೇರಿದಂತೆ ಹಿರಿಯ ನಾಯಕರಿಗೆ ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಅಥವಾ ಶಿಫಾರಸ್ಸು ಮಾಡುವ ಅಧಿಕಾರದಿಂದ ವಂಚಿತಗೊಳಿಸಿದೆ
 
ರಾಜ್ಯದ 224 ಕ್ಷೇತ್ರಗಳಿಗೆ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ತಾನೇ ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಹೈಕಮಾಂಡ್‌ನ ಅಂತರಿಕ ಸರ್ವೆಯಿಂದ ಗೆಲ್ಲುವ ನಾಯಕರಿಗೆ ಮಾತ್ರ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಗುಜರಾತ್ ರಾಜ್ಯದಲ್ಲಿ ಮಾಡಿದ ಮಾಸ್ಚರ್ ಪ್ಲ್ಯಾನ್ ಯಶಸ್ವಿಯಾದಲ್ಲಿ ಅದೇ ರಣತಂತ್ರವನ್ನು ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅಳವಡಿಸಲು ರಣತಂತ್ರ ರೂಪಿಸಿದೆ ಎನ್ನಲಾಗುತ್ತದೆ. 
 
ಹೈಕಮಾಂಡ್‌ ನಡೆಯಿಂದಾಗಿ ಹಾಲಿ ಶಾಸಕರು ಮಾಜಿ ಶಾಸಕರ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳಿವೆ. ಪ್ರತಿಯೊಂದು ಕ್ಷೇತ್ರದ ಅಭ್ಯರ್ಥಿಯನ್ನು ತಾನೇ ಹುಡುಕುವುದಾಗಿ ಹೈಕಮಾಂಡ್ ರಾಜ್ಯ ಘಟಕಕ್ಕೆ ಸೂಚನೆ ರವಾನಿಸಿದೆ. 
 
ಚುನಾವಣೆಗೆ ಕೇವಲ ಕೆಲವೇ ತಿಂಗಳುಗಳಿರುವಾಗ ರಾಜ್ಯ ಬಿಜೆಪಿಯಲ್ಲಿ ನಾವೇ ಸುಪ್ರೀಂ ಅಂತಾ ಓಡಾಡುತ್ತಿದ್ದವರಿಗೆ ಹೈಕಮಾಂಡ್ ಶಾಕ್ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹನುಮ ಜಯಂತಿ ಮೆರವಣಿಗೆಗೆ ಅಡ್ಡಿ- ಸಂಸದ ಪ್ರತಾಪ ಸಿಂಹ ಸೇರಿ ಹಲವರ ಬಂಧನ

ಮೈಸೂರಿನ ಹುಣಸೂರಿನಲ್ಲಿ ಹನುಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆ ಅಡ್ಡಿ ಪಡಿಸಲಾಗಿದ್ದು, ...

news

ಹನುಮ ಮೆರವಣಿಗೆ: ಸಂಸದ ಪ್ರತಾಪ್ ಸಿಂಹ ಬಂಧನ

ಹುಣಸೂರು; ನಿಷೇಧಧ ನಡುವೆಯೂ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಿಜೆಪಿ ಸಂಸದ ಪ್ರತಾಪ್ ...

news

ರಾಜೀನಾಮೆ ನೀಡಿ ಸಿಬಿಐ ತನಿಖೆ ಎದುರಿಸಿ: ಸಚಿವ ಕುಲ್ಕರ್ಣಿಗೆ ಸ್ವಾಮಿಜಿ ಸಲಹೆ

ಬೆಂಗಳೂರು: ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ ಎದುರಿಸುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಖಾತೆ ...

news

ಓಖಿ ಚಂಡಮಾರುತ ಹೊಡೆತಕ್ಕೆ ಮದುವೆ ಮನೆ ಓಡಿದ ವಧು-ವರ, ಸಂಬಂಧಿಕರು!

ಕಡಲ ತೀರದಲ್ಲಿ ಚಂಡಮಾರುತ ಅಬ್ಬರ ಜೋರಾಗಿದ್ದು, ಓಖಿಯ ಹೊಡೆತಕ್ಕೆ ಮದುವೆ ಮನೆಯಿಂದ ವಧು-ವರ ಹಾಗೂ ...

Widgets Magazine
Widgets Magazine