59 ವರ್ಷದವನಿಂದ 15ರ ಬಾಲೆಯ ಮೇಲೆ ರೇಪ್

ಕೊಡಗು, ಶುಕ್ರವಾರ, 17 ನವೆಂಬರ್ 2017 (15:29 IST)

59 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು 15 ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. 
 
ಬಂಧಿತ ಆರೋಪಿ ಪುಲ್ಲನಗಡಾ ಭೀಮಯ್ಯ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ
 
ಅತ್ಯಾಚಾರಕ್ಕೊಳಗಾದ ಬಾಲಕಿ ನ್ಯಾಯಾಲಯಕ್ಕೆ ಹೇಳಿಕೆಯೊಂದನ್ನು ನೀಡಿ, ಆರೋಪಿ ಭೀಮಯ್ಯ ತನ್ನ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಹೇಳಿಕೆಯನ್ನು ಕೋರ್ಟ್ ತೀವ್ರವಾಗಿ ಪರಿಗಣಿಸಿದೆ.   
 
ಏತನ್ಮಧ್ಯೆ, ಆರೋಪಿ ನ್ಯಾಯಾಲಯಕ್ಕೆ ಮತ್ತೊಂದು ಜಾಮೀನು ಅರ್ಜಿ ಸಲ್ಲಿಸಿ, ಇದೊಂದು ಒಮ್ಮತದ ಸೆಕ್ಸ್. ಬಾಲಕಿಯ ಗುಪ್ತಾಂಗದಲ್ಲಿ ಯಾವುದೇ ಗಾಯಗಳಾಗಿಲ್ಲ. ಆದ್ದರಿಂದ ಇದು ಖಂಡಿತ ರೇಪ್ ಅಲ್ಲ. ನಾಲ್ಕು ದಿನಗಳ ನಂತರ ನನ್ನ ಮೇಲೆ ದೂರು ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಿದ್ದಾನೆ.
 
ಆರೋಪಿಯ ಜಾಮೀನು ಅರ್ಜಿಯನ್ನು ತಳ್ಳಿಹಾಕಿದ ಕೋರ್ಟ್, ಇವೆಲ್ಲಾ ವಿಷಯಗಳು ಮುಂದೆ ವಿಚಾರಣೆಯಲ್ಲಿ ಬರಲಿವೆ. ಬಾಲಕಿ ನನ್ನ ಮೇಲೆ ಅತ್ಯಾಚಾರವಾಗಿರುವುದು ನಿಜ ಎಂದು ಸ್ಪಷ್ಟ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗದು ಎಂದು ಹೇಳಿದೆ.
 
ಆರೋಪಿ ಭೀಮಯ್ಯ ಬಾಲಕಿಗೆ ಜೀವ ಬೆದರಿಕೆ ಹಾಕಿದ್ದರಿಂದ ಬಾಲಕಿಯ ಪೋಷಕರು ದೂರು ದಾಖಲಿಸಲು ಹಿಂದೇಟು ಹಾಕಿರಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೆಕ್ಸ್ ಸುಖ ಕೊಟ್ರೆ ಮಾತ್ರ ವಿದೇಶಕ್ಕೆ ಕಳಿಸ್ತೇನೆ ಎಂದು ರೇಪ್ ಎಸಗಿದ ಟ್ರಾವೆಲ್ ಏಜೆಂಟ್

ಮೋಗಾ: ವಿದೇಶಕ್ಕೆ ಕಳುಹಿಸುವ ಆಮಿಷವೊಡ್ಡಿ 8 ತಿಂಗಳುಗಳ ಕಾಲ ನಿರಂತರವಾಗಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ...

news

ಬಿಜೆಪಿಗೆ ಮತಹಾಕದಿದ್ರೆ ಕಷ್ಟ ಎದುರಿಸಲು ಸಿದ್ದರಾಗಿ: ಮುಸ್ಲಿಮರಿಗೆ ಬಿಜೆಪಿ ನಾಯಕನ ಧಮ್ಕಿ

ಲಕ್ನೋ: ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ಹಾಕದಿದ್ರೆ ಕಷ್ಟ ಎದುರಿಸಲು ಸಿದ್ದರಾಗಿ ಎಂದು ...

news

ಪತಿಗೆ ಮೋಸ ಮಾಡಿ ಅಕ್ಕನ ಗಂಡನೊಂದಿಗೆ ಸೆಕ್ಸ್

ಬೆಂಗಳೂರು: ಸ್ವಂತ ಅಕ್ಕನಿಗೆ ಮೋಸ ಮಾಡಿ ಆಕೆಯ ಗಂಡನೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡ ಮಹಿಳೆಯೊಬ್ಬಳು ...

news

ಬಾಲಕಿಯ ಮೇಲೆ ಗ್ಯಾಂಗ್‌ರೇಪ್‌ಗೆ ನೆರವು ನೀಡಿದ ಮಹಿಳೆ ಅರೆಸ್ಟ್

ಜಹಾಂಗೀರಾಬಾದ್(ಉತ್ತರಪ್ರದೇಶ): ಬಾಲಕಿಯ ಮೇಲೆ ಗ್ಯಾಂಗ್‌ರೇಪ್‌ ಎಸಗಲು ಕಾಮುಕರಿಗೆ ನೆರವು ನೀಡಿದ ...

Widgets Magazine
Widgets Magazine