ಕಪ್ಪದ ಡೈರಿ ಎಸ್ಐಟಿ ತನಿಖೆಗೆ ಹೈಕೋರ್ಟ್ ನಕಾರ

ಬೆಂಗಳೂರು, ಸೋಮವಾರ, 6 ಮಾರ್ಚ್ 2017 (16:23 IST)

Widgets Magazine

ಬೆಂಗಳೂರು(ಮಾ.06): ಕಾಂಗ್ರೆಸ್ ಹೈಕಮಾಂಡ್`ಗೆ ಕಪ್ಪ ನೀಡಿದ ಮಾಹಿತಿ ಇದೆ ಎನ್ನಲಾದ ಡೈರಿ ಇಡೀ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಸೀಕ್ರೆಟ್ ಡೈರಿ ಕುರಿತು ಎಸ್`ಐಟಿ ತನಿಖೆಗೆ ಕೋರಿ ಪತ್ರಕರ್ತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ.


ಐಟಿ ಮತ್ತು ಜಾರಿನಿರ್ದೇಶನಾಲಯದ ಅಧಿಕಾರಿಗಳು ಎಂಎಲ್`ಸಿ ಗೋವಿಂದರಾಜು ಮನೆ ಮೇಲೆ ದಾಳಿ ನಡೆಸಿದ ಸಂದರ್ಭ ಸಿಕ್ಕಿದೆ ಎನ್ನಲಾದ ಡೈರಿ ರಾಷ್ಟ್ರೀಯ ಮಾಧ್ಯಮದಲ್ಲಿ ಬಹಿರಂಗಗೊಂಡಿತ್ತು. ಡೈರಿಯಲ್ಲಿ ಸ್ಟೀಲ್ ಫ್ಲೈಓವರ್ ಮತ್ತು ಇನ್ಷಿಯಲ್`ಗಳ ಮೂಲಕ ಹೆಸರುಗಳನ್ನ ಸೂಚಿಸಿ ಹಣ ಕೊಟ್ಟ ಮತ್ತು ಪಡೆದ ರೀತಿ ಬರೆಯಲಾಗಿತ್ತು. ಇನ್ಷಿಯಲ್`ಗಳ ಮುಂದೆ ಕೋಟಿ ಕೋಟಿ ಹಣವನ್ನೂ ಸೂಚಿಸಿದ್ದರಿಂದ ಪ್ರಕರಣ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.

ಈ ಕುರಿತಂತೆ ಎಸ್`ಐಟಿ ತನಿಖೆಗೆ ಕೋರಿ ಪತ್ರಕರ್ತ ಹಮೀದ್ ಪಾಳ್ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ಐಟಿ ತನಿಖೆ ನಡೆಯುತ್ತಿರುವುದರಿಂದ ಎಸ್`ಐಟಿ ತನಿಖೆಗೆ ಕೋರ್ಟ್ ನಿರಾಕರಿಸಿದೆ.
 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್‌ವೈ ನಿರ್ಧಾರದಿಂದ ನಮಗೆ ನೋವಾಗಿದೆ: ಈಶ್ವರಪ್ಪ ಬಣ

ಬೆಂಗಳೂರು: ಜಿಲ್ಲಾಧ್ಯಕ್ಷರ ಮತ್ತು ಇತರ ಪದಾಧಿಕಾರಿಗಳ ನೇಮಕದಲ್ಲಿ ಯಡಿಯೂರಪ್ಪ ಏಕಪಕ್ಷೀಯವಾಗಿ ನಿರ್ಧಾರ ...

news

ಪಾಕ್‌ನಲ್ಲೂ ಗೋಚರಿಸಲಿದೆ ನಮ್ಮ ತ್ರಿವರ್ಣ ಧ್ವಜದ ಹಾರಾಟ

ಪಂಜಾಬಿನ ಅಟ್ಟಾರಿ-ವಾಘಾ ಗಡಿಯಲ್ಲಿ ಭಾನುವಾರ ದೇಶದ ಅತೀ ಎತ್ತರದ ತ್ರಿವರ್ಣ ಧ್ವಜವನ್ನು ...

news

ಬಿಎಸ್‌ವೈ ವಿರುದ್ಧ ಕೆಲ ಬಿಜೆಪಿ ಮುಖಂಡರ ಅಸಮಾಧಾನ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರ್ಯವೈಖರಿಯ ವಿರುದ್ಧ ಅಸಮಾಧಾನಗೊಂಡಿರುವ ಬಿಜೆಪಿ ...

news

ಬಜೆಟ್‌ಗೆ ಮುನ್ನ ಸಚಿವರ ಅಭಿಪ್ರಾಯ ಸಂಗ್ರಹಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಾಮಾನ್ಯ ಬಜೆಟ್ ಮಂಡನೆಗೆ ಮುನ್ನ ಸಚಿವರ ಅಭಿಪ್ರಾಯ ಪಡೆಯುವ ಮೂಲಕ ಸಿಎಂ ಸಿದ್ದರಾಮಯ್ಯ ಹೊಸ ...

Widgets Magazine Widgets Magazine