ಗುಡ್ಡ ಕುಸಿತ: ರಾಜ್ಯದ ಯೋಧ ಹುತಾತ್ಮ

ಬೆಳಗಾವಿ, ಸೋಮವಾರ, 14 ಜನವರಿ 2019 (19:08 IST)

ಗುಡ್ಡ ಕುಸಿದು ರಾಜ್ಯದ ಯೋಧರೊಬ್ಬರು ಹುತಾತ್ಮರಾದ ದುರ್ಘಟನೆ ಸಂಭವಿಸಿದೆ.

ಸಿಕ್ಕಿಂನಲ್ಲಿ ಗುಡ್ಡ ಕುಸಿದು ಬೆಳಗಾವಿ ಮೂಲದ ಹುತಾತ್ಮರಾಗಿದ್ದಾರೆ. ಯೋಧ ರೋಹಿತ ದೇವರ್ಡೆ (26) ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಆಡಿ ಗ್ರಾಮದ ನಿವಾಸಿಯಾಗಿದ್ದ ರೋಹಿತ್, 517 ಎ ಎಸ್ ಸಿ ಬಟಲಿಯಾನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

2014 ರಲ್ಲಿ ಸೇನೆ ಸೇರಿದ್ದ ಯೋಧ ರೋಹಿತ್, ಸಿಕ್ಕಿಂ ರಾಜ್ಯದ ಘನ್ ಟೋಕ್ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ ಸಾವು ಕಂಡಿದ್ದಾರೆ.

ಬಟಾಲಿಯನ್ ನಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ರೋಹಿತ್, ಮಿಲ್ಟ್ರಿ ವಾಹನದ ಮೇಲೆಯೇ ಗುಡ್ಡ ಕುಸಿದ ಕಾರಣದಿಂದ ಹುತಾತ್ಮರಾಗಿದ್ದಾರೆ.

ನಾಳೆ ಅಥವಾ ನಾಡಿದ್ದು ಸ್ವ ಗ್ರಾಮಕ್ಕೆ ಪಾರ್ಥಿವ ಶರೀರ ತರುವ ಸಾಧ್ಯತೆಯಿದೆ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉರ್ದು ಬೋರ್ಡ ಉಳಿಸಿಕೊಳ್ಳಲು ಆಗ್ರಹಿಸಿ ಪ್ರತಿಭಟನೆ

ಕಲಬುರಗಿ ಮಹಾನಗರ ಪಾಲಿಕೆ ನೂತನ ಕಟ್ಟಡದ ಮೇಲೆ ಉರ್ದು ಬೋರ್ಡ್ ಉಳಿಸಿಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ...

news

ನಿಂತ ಜನರೇಟರ್ ವಾಹನಕ್ಕೆ ಕಂಟೈನರ್ ಢಿಕ್ಕಿ: ಓರ್ವ ಸಾವು, ಮೂವರಿಗೆ ಗಾಯ

ರಸ್ತೆ ಬದಿಯಲ್ಲಿ ನಿಂತಿದ್ದ ಜನರೇಟರ್ ವಾಹನಕ್ಕೆ ಕಂಟೈನರ್ ಲಾರಿ ಢಿಕ್ಕಿಹೊಡೆದ ಘಟನೆ ನಡೆದಿದೆ.

news

ಜಿಲ್ಲಾಡಳಿತ ನಿಷೇಧ ನಡುವೆಯೂ ಪಲ್ಲಕ್ಕಿಗೆ ಕುರಿ ಮರಿ ಎಸೆತ

ಜಿಲ್ಲಾಡಳಿತ ಹೇರಿರುವ ನಿಷೇಧದ ನಡುವೆಯೂ ಕುರಿಮರಿ ಎಸೆದು ಹರಕೆಯನ್ನು ಭಕ್ತ ಸಮೂಹ ತೀರಿಸಿದ ಘಟನೆ ನಡೆದಿದೆ.

news

ರಸ್ತೆಯಲ್ಲೇ ವೃದ್ಧೆಯ ಶವಯಿಟ್ಟು ಪ್ರತಿಭಟನೆ

ವೃದ್ಧೆಯೊಬ್ಬರ ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.