ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗೆ ದಂಪತಿ ಬಲಿ..?

ಬೆಂಗಳೂರು, ಮಂಗಳವಾರ, 3 ಅಕ್ಟೋಬರ್ 2017 (13:22 IST)

ಬೆಂಗಳೂರಿನ ರಸ್ತೆಗಳಲ್ಲಿ ಬಾಯ್ತೆರೆದಿರುವ ಗುಂಡಿಗೆ ಮತ್ತೊಂದು ದಂಪತಿ ಬಲಿಯಾಗಿದೆ. ಮೈಸೂರು ರಸ್ತೆಯ ಫ್ಲೈಓವರ್`ನಲ್ಲಿ ಗುಂಡಿಯನ್ನ ತಪ್ಪಿಸಲು ಹೋದ ಬೈಕ್`ಗೆ ತಮಿಳುನಾಡಿನ ಬಸ್ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಅಸುನೀಗಿರುವ ಘಟನೆ ನಡೆದಿದೆ.


ಆಂಥೋನಿ ಜೋಸೆಫ್ ಮತ್ತು ಸಗಾಯಿ ಮೇರಿ ನಿನ್ನೆ ತಡರಾತ್ರಿ ಜೆ.ಜೆ. ನಗರಕ್ಕೆ ಸಂಚರಿಸುತ್ತಿದ್ದ ಸಂದರ್ಭ ಈ ಸಂಭವಿಸಿದೆ. ಗುಂಡಿಗಳಲ್ಲೇ ತುಂಬಿರುವ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭ ಗುಂಡಿ ತಪ್ಪಿಸಲು ಹಠಾತ್ ಬ್ರೇಕ್ ಹಾಕಿದ್ದಾರೆ. ಈ ಸಂದರ್ಭ ಹಿಂಬದಿ ಬರುತ್ತಿದ್ದ ತಮಿಳುನಾಡು ಬಸ್ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ದಂಪತಿ ಸಾವನ್ನಪ್ಪಿದ್ದು, ಜೊತೆಯಲ್ಲಿದ್ದ ಮೊಮ್ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕಪೇಟೆ ಪೊಲೀಸ್ ಟಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಬಿಎಂಪಿ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳಿಯರು ಆರೋಪಿಸಿದ್ದಾರೆ. ರಸ್ತೆಗಳ ಗುಂಡಿ ಮುಚ್ಚುವಂತೆ ಒತ್ತಾಯಿಸಿದ್ಧಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಅಪಘಾತ ಬೆಂಗಳೂರು ಬಿಬಿಎಂಪಿ Accident Bbmp Bengaluru

ಸುದ್ದಿಗಳು

news

ಭಾರತ ಉಗ್ರನನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದೆ: ಪಾಕ್ ವಿದೇಶಾಂಗ ಸಚಿವ

ಕರಾಚಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕಿಸ್ತಾನದ ರಾಜತಾಂತ್ರಿಕರ ನಡುವೆ ವಿಶ್ವಸಂಸ್ಥೆಯಲ್ಲಿ ...

news

ಪ್ರವಾಸಿ ತಾಣದ ಪಟ್ಟಿಯಿಂದ ತಾಜ್‌ಮಹಲ್‌ಗೆ ಕೊಕ್: ಸಿಎಂ ಯೋಗಿ ವಿರುದ್ಧ ರಾಹುಲ್ ವಾಗ್ದಾಳಿ

ಲಕ್ನೋ: ಶದ ಮಹತ್ವದ ಸ್ಮಾರಕವಾದ ತಾಜ್ ಮಹಲ್‌ನ್ನು ಪ್ರವಾಸೋದ್ಯಮ ಯೋಜನೆಗಳ ಪಟ್ಟಿಯಲ್ಲಿ ಸ್ಥಾನ ನೀಡದಿರುವ ...

news

ಸಿಗರೇಟು ಸೇದಬೇಡಿ ಎಂದಿದ್ದಕ್ಕೆ ಯುವಕನನ್ನು ಹತ್ಯೆಗೈದ ದುರುಳರು

ಬೆಂಗಳೂರು: ಮನೆಯ ಬಳಿ ಗಲಾಟೆ ಮಾಡುತ್ತಾ ಸಿಗರೇಟು ಸೇದುತ್ತಿರುವುದಕ್ಕೆ ಸಿಗರೇಟು ಸೇದಬೇಡಿ ಎಂದು ...

news

ಚಲಿಸುತ್ತಿದ್ದ ರೈಲಿನ ಮುಂದೆ ಸೆಲ್ಫಿ ಕ್ಲಿಕ್ಕಿಸಲು ಹೋದ ಮೂವರು ಯುವಕರ ದುರ್ಮರಣ

ಚಲಿಸುತ್ತಿರುವ ರೈಲಿನ ಮುಂದೆ ಸೆಲ್ಫಿ ಕ್ಲಿಕ್ಕಿಸಲು ಹೋದ ಮೂವರು ಯುವಕರು ರೈಲಿಗೆ ಸಿಲುಕಿ ಭೀಕರವಾಗಿ ...

Widgets Magazine