ಸದನದಿಂದ ಶಿವನಗೌಡ, ರೇಣುಕಾಚಾರ್ಯ ಎದ್ದು ಹೊರ ನಡೆದದ್ಯಾಕೆ?

ಬೆಂಗಳೂರು, ಸೋಮವಾರ, 11 ಫೆಬ್ರವರಿ 2019 (12:59 IST)

ಮೈತ್ರಿ ಸರಕಾರದ ಪಕ್ಷಗಳು ಹಾಗೂ ಬಿಜೆಪಿ ಮುಖಂಡರು ಆಡಿಯೋ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆಸುತ್ತಿದ್ದರೆ, ಚರ್ಚೆ ನಡುವೆಯೇ ಆಡಿಯೋದಲ್ಲಿ ಮಾತನಾಡಿರುವ ಬಿಜೆಪಿ ಶಿವನಗೌಡ ನಾಯಕ್ ಎದ್ದು ಹೊರನಡೆದಿದ್ದಾರೆ.

ಸದನದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಶಾಸಕ ಶಿವನಗೌಡ ನಾಯಕ್ ಜತೆ ರೇಣುಕಾಚಾರ್ಯ ಹೊರ ನಡೆದಿದ್ದಾರೆ.

ಆಡಿಯೋದಲ್ಲಿ ಶಿವನಗೌಡ ನಾಯಕ್ ಹಾಗೂ ಶರಣಗೌಡ ಮಾತನಾಡಿದ್ದರು. ಈ ಆಡಿಯೋವನ್ನು ಸಿಎಂ ಬಿಡುಗಡೆಗೊಳಿಸಿದ್ದರು. ಇದು ಭಾರಿ ಚರ್ಚೆಗೆ ಸದನದಲ್ಲಿ ಕಾರಣವಾಗುತ್ತಿದೆ. ಆಡಿಯೋದಲ್ಲಿ ಸ್ಪೀಕರ್ ರನ್ನು ಬುಕ್ ಮಾಡಿದ್ದೇವೆ ಹೀಗಂತ ಶಿವನಗೌಡ ನಾಯಕ್, ಶರಣಗೌಡಗೆ ಹೇಳಿದ್ದರು.

ಏತನ್ಮಧ್ಯೆ, ಶಿವನಗೌಡ ನಾಯಕ್-ಶರಣಗೌಡ ನಡುವಿನ ಈ ಆಡಿಯೋ ಸತ್ಯವೋ, ಸುಳ್ಳೋ ಎನ್ನುವುದು ತನಿಖೆಯಾಗಬೇಕು ಎಂದು ಕೆ.ಎಸ್.ಈಶ್ವರಪ್ಪ ಒತ್ತಾಯ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆಪರೇಷನ್ ಕಮಲ ಒಪ್ಪಿಕೊಂಡ ಸಿ.ಟಿ.ರವಿ?

ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಮಾತನಾಡಿದ್ದು ನಾನೇ ಎಂದು ಬಿ.ಎಸ್.ಯಡಿಯೂರಪ್ಪ ...

news

ಕೈ ಅತೃಪ್ತರ ನಡೆ ಇನ್ನೂ ನಿಗೂಢ!

ಕಾಂಗ್ರೆಸ್ ನ ಅತೃಪ್ತ ಶಾಸಕರ ನಡೆ ಈಗಲೂ ನಿಗೂಢತೆಯನ್ನು ಕಾಯ್ದುಕೊಂಡಿದೆ.

news

ಪ್ರಧಾನಿ ಮೋದಿಯವರು ಬರೀ ಸುಳ್ಳು ಹೇಳುತ್ತಾರೆ- ಸಿದ್ಧರಾಮಯ್ಯ ಆರೋಪ

ಹುಬ್ಬಳ್ಳಿ : ‘ಪ್ರಧಾನಿ ಮೋದಿಯವರು ಬರೀ ಸುಳ್ಳು ಹೇಳುತ್ತಾರೆ. ಅವರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೇನು ...

news

ಅತೃಪ್ತ ಶಾಸಕರನ್ನ ಅನರ್ಹಗೊಳಿಸುವಂತೆ ಸ್ಪೀಕರ್ ಗೆ ದೂರು ನೀಡಿದ ಸಿದ್ಧರಾಮಯ್ಯ

ಬೆಂಗಳೂರು : ಕಾಂಗ್ರೆಸ್ ನ ಅತೃಪ್ತ ಶಾಸಕರನ್ನ ಅನರ್ಹಗೊಳಿಸುವಂತೆ CLP ನಾಯಕ ಸಿದ್ಧರಾಮಯ್ಯ ಅವರು ಸ್ಪೀಕರ್ ...

Widgets Magazine