ತನ್ನ ಎಟಿಎಂನಲ್ಲಿ ಹಣ ಕಳ್ಳತನ ಮಾಡಿದ ಕಳ್ಳನನ್ನು ಯುವತಿ ಪೊಲೀಸರಿಗೆ ಹಿಡಿದೊಪ್ಪಿಸಿದ್ದು ಹೇಗೆ ಗೊತ್ತಾ?

ಮುಂಬೈ, ಶನಿವಾರ, 12 ಜನವರಿ 2019 (07:04 IST)

ಮುಂಬೈ : ಮಹಿಳೆಯೊಬ್ಬಳು ತನ್ನ ಎಟಿಎಂನಲ್ಲಿ ಹಣ  ಕಳ್ಳತನ ಮಾಡಿದ ಕಳ್ಳನನ್ನು ಉಪಾಯದಿಂದ  ಪೊಲೀಸರಿಗೆ ಹಿಡಿದೊಪ್ಪಿಸಿದ ಘಟನೆ ಮುಂಬೈನ ಬಾಂದ್ರಾ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.

ಭೂಪೇಂದ್ರ ಮಿಶ್ರ (36) ಎಟಿಎಂನಲ್ಲಿ ಹಣ ಕಳ್ಳತನ ಮಾಡಿದ ಆರೋಪಿಯಾಗಿದ್ದು,  ರೆಹೆನಾ ಶೇಕ್ ಎಂಬಾಕೆ ಇಂತಹ ಸಾಹಸ ಮಾಡಿದ ಯುವತಿ. ಈಕೆ ಡಿ.18 ರಂದು ಎಟಿಎಂನಲ್ಲಿ ಹಣ ತೆಗೆಯಲು ಪಿನ್ ಕೋಡ್ ಹಾಕಿದ್ದಾಗ, ಭೂಪೇಂದ್ರ ಮಿಶ್ರ ಎಟಿಎಂನೊಳಗೆ ಬಂದು ಈ ಎಟಿಎಂ ಸರಿಯಿಲ್ಲ. ಆದ್ದರಿಂದ ಇನ್ನೊಂದು ಎಟಿಎಂ ಬಳಸಿ ಎಂದು ಆಕೆಯನ್ನು ಮೋಸದಿಂದ  ಕಳುಹಿಸಿ ಆಕೆಯ ಖಾತೆಯಿಂದ 10 ಸಾವಿರ ಹಣ ಕಳ್ಳತನ ಮಾಡಿದ್ದಾನೆ.

 

ಎಟಿಎಂನಲ್ಲಿ ಹಣ ಡ್ರಾ ಆದ ಸಂದೇಶ ನೋಡಿ ಯುವತಿಗೆ ಭೂಪೇಂದ್ರ ಮಿಶ್ರ ಮೇಲೆ ಅನುಮಾನಗೊಂಡಿದ್ದಾಳೆ. ನಂತರ ಆತ ಮತ್ತೊಮ್ಮೆ ಎಟಿಎಂಗೆ ಬರಬಹುದು ಎಂಬ ಖಾತ್ರಿಯಲ್ಲಿ ಸತತ 17 ದಿನಗಳ ಕಾಲ ಈ ಎಟಿಎಂನತ್ತ ಬಂದು ಕಾದು ಕುಳಿತು ಕೊನೆಗೆ ಆತನನ್ನು ಕಂಡು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾಳೆ.

 

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾಲ್ಕು ಮದುವೆಯಾಗಿದ್ದಲ್ಲದೇ ಮತ್ತೊಬ್ಬಳ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಂಡ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ?

ಬೆಂಗಳೂರು : ಈಗಾಗಲೇ ನಾಲ್ಕು ಮದುವೆ ಮಾಡಿಕೊಂಡಿದ್ದಲ್ಲದೇ ಮತ್ತೊಬ್ಬ ಮಹಿಳೆಯ ಜೊತೆ ಲವ್ವಿ ಡವ್ವಿ ಶುರು ...

news

ಹೆರಿಗೆ ವೇಳೆ ಪುರುಷ ನರ್ಸ್ ನಿಂದ ಎಡವಟ್ಟು; ಎರಡು ತುಂಡಾದ ಮಗು, ತಾಯಿ ಸ್ಥಿತಿ ಗಂಭೀರ

ಜೈಪುರ : ಹೆರಿಗೆ ಮಾಡಿಸುತ್ತಿದ್ದ ಸಮಯದಲ್ಲಿ ಪುರುಷ ನರ್ಸ್ ಮಾಡಿದ ಎಡವಟ್ಟಿನಿಂದ ಮಗು ಎರಡು ತುಂಡಾಗಿದ್ದು, ...

news

ಗ್ಯಾಸ್ ಲೈನ್ ಲೀಕೇಜ್ ಆಗಿದ್ದೆಲ್ಲಿ ಗೊತ್ತಾ?

ಮತ್ತೊಂದು ಗ್ಯಾಸ್ ಲೈನ್ ಲೀಕೇಜ್ ಆಗಿರುವ ಘಟನೆ ನಡೆದಿದ್ದು, ಸುತ್ತಲಿನ ಜನರಲ್ಲಿ ಕೆಲಕಾಲ ಆತಂಕ ...

news

ಡಿವೈಡರ್​ಗೆ ಕಾರು ಢಿಕ್ಕಿ: ತಂದೆ, ಮಗ ಸ್ಥಳದಲ್ಲೇ ಸಾವು

ಡಿವೈಡರ್​ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ತಂದೆ, ಮಗನ ಸಾವ್ನಪ್ಪಿರುವ ಘಟನೆ ಸಂಭವಿಸಿದೆ.