ಮಾನವೀಯತೆ ಮರೆತ ಅಧಿಕಾರಿಗಳು

ತುಮಕೂರು, ಶನಿವಾರ, 11 ಆಗಸ್ಟ್ 2018 (14:19 IST)

 


ತನ್ನ ಮಗುವಿನ ವೇತನಕ್ಕಾಗಿ ತಾಯಿಯೋರ್ವಳು ವಿಕಲಚೇತನ ಮಗುವನ್ನು ಕಚೇರಿ ಕೌಂಟರ್ ಕೆಳಗಡೆ ಮಲಗಿಸಿ ಪರಿಪರಿಯಾಗಿ ಕೇಳಿಕೊಂಡ ಘಟನೆ ನಡೆದಿದೆ. ಆದರೂ ಅಧಿಕಾರಿಗಳು ಮಾನವೀಯತೆ ಮರೆತು ತೋರಿದ್ದಾರೆ.


ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಾ ಕಚೇರಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತನ್ನ ಮಗುವಿನ ಅಂಗವಿಕಲ ವೇತನಕ್ಕಾಗಿ ತಾಯಿಯೋರ್ವಳು ವಿಕಲಚೇತನ ಮಗುವನ್ನು ಕಚೇರಿ ಕೌಂಟರ್ ಕೆಳಗಡೆ ಮಲಗಿಸಿ ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಆದರೂ ಅಲ್ಲಿಯ ಸಿಬ್ಬಂದಿ ಕಲ್ಲು ಮನಸ್ಸು ಕರಗಲೇ ಇಲ್ಲ. ಪಾವಸಂದ್ರ ಗ್ರಾಮದ ಮಹಿಳೆ ಕುಮಾರಿ, ತನ್ನ 7 ವರ್ಷದ ಅಂಗವಿಕಲ ಮಗ ಹರೀಶನ ಅಂಗವಿಕಲ ವೇತನಕ್ಕಾಗಿ ಅರ್ಜಿ ಹಾಕಲು ಬಂದಿದ್ರು. ಮಗುವನ್ನು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸೊಂಟದ ಮೇಲೆ ಎತ್ತಿಕೊಂಡು ಸಿಬ್ಬಂದಿ ಬಳಿ ಮಾಹಿತಿ ಕೇಳಿದ್ದಾಳೆ. ಆದರೂ ಯಾರೂ ಈ ಬಡ ಮಹಿಳೆ ಮಾತು ಕೇಳಿಲ್ಲ. ಸೊಂಟ‌ ಸೋತು ಬಂದಾಗ ಕಚೇರಿ ಕೌಂಟರ್ ಕೆಳಗೆ ಮಗುವನ್ನು ಮಲಗಿಸಿ ಪರಿಪರಿಯಾಗಿ ಕೇಳಿಕೊಂಡಿದ್ದಾಳೆ. ಆಗಲೂ ಸಿಬ್ಬಂದಿ ಅರೆಬರೆ ಮಾಹಿತಿ‌ ನೀಡಿದ್ದಾರೆ.

ಇದನ್ನು ಗಮನಿಸಿದ ಕರ್ನಾಟ ರಕ್ಷಣಾ ವೇದಿಕೆ ಕಾರ್ಯಕರ್ತ ಮಂಜುನಾಥ್, ಮಹಿಳೆ ಸಹಾಯಕ್ಕೆ ಧಾವಿಸಿದ್ದಾರೆ. ತಾಲೂಕಾ ಕಚೇರಿ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡು ಅಂಗವಿಕಲ ವೇತನದ ಅರ್ಜಿ ಹಾಕಲು ಸಹಾಯ ಮಾಡಿದ್ದಾರೆ. ಈ ನಡುವೆ ಒಂದೂವರೆ ವರ್ಷದ ಹಿಂದೆಯೇ ಮಧ್ಯವರ್ತಿ ಕೆಂಪಣ್ಣ‌ ಎನ್ನುವ ವ್ಯಕ್ತಿ ಅಂಗವಿಕಲ ಕೊಡಿಸುವುದಾಗಿ ಹೇಳಿ 1300 ರೂ. ವಸೂಲಿ ಮಾಡಿದ್ದಾನಂತೆ. ಆತನಿಂದ ಕೆಲಸ ಆಗದೇ ಇದ್ದಾಗ ವಿಕಲಚೇತನ ಮಗುವನ್ನೇ ಎತ್ತಿಕೊಂಡು ತಾಲೂಕು ಕಚೇರಿಗೆ ಬಂದಿದ್ದು ನೋಡುಗರ ಕರುಳು ಚುರ್ರ್ ಎನಿಸುತಿತ್ತು.


 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಾಲು ಕೊಡುತ್ತಿರುವ ಮರಿ ಯಾವುದು ಗೊತ್ತಾ?

ಕೇವಲ ಎರಡು ತಿಂಗಳ ಮರಿ ಹಾಲು ಕೊಡುತ್ತಿರುವ ವಿಚಿತ್ರ ಘಟನೆ ನಡೆದಿದೆ. ಪುಟ್ಟ ಮರಿ ಎಲ್ಲರ ಗಮನ ...

news

ದೇವಾಲಯ ಬೀಗ ಮುರಿದು ಹುಂಡಿ ಕಳ್ಳತನ

ದೇವಾಲಯದ ಬೀಗ ಮುರಿದು ಕಾಣಿಕೆ ಹುಂಡಿ ಕಳವು ಮಾಡಿದ ಘಟನೆ ನಡೆದಿದೆ.

news

ಕಬಿನಿಗೆ ಹೆಚ್ಚು ನೀರು: ಮುನ್ನೆಚ್ಚರಿಕೆ ವಹಿಸಲು ಸೂಚನೆ

ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು ಜಲಾಶಯವು ಗರಿಷ್ಠ ಮಟ್ಟ ತಲುಪುತ್ತಿರುವುದರಿಂದ ಯಾವುದೇ ...

news

ನೆರೆಮನೆಯವನಿಂದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ; ಮಗುವಿಗೆ ಜನ್ಮ ನೀಡಿದ ಬಾಲಕಿ

ಬಿಹಾರ : ಅತ್ಯಾಚಾರಕ್ಕೊಳಗಾದ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ...

Widgets Magazine