ಅವರಿಲ್ಲ,..ಒಳಗೆ ಬಾ ಅಂದ್ಳು.. ನಂತ್ರ ಪತಿ ಬಂದ...!!

ಬೆಂಗಳೂರು, ಸೋಮವಾರ, 13 ನವೆಂಬರ್ 2017 (13:35 IST)

ಪತಿ ಮನೆಯಿಂದ ಕಚೇರಿಗೆ ತೆರಳಿದ ನಂತರ ಮತ್ತೊಬ್ಬನೊಂದಿಗೆ ಲೈಂಗಿಕ ಸುಖ ತೀರಿಸಿಕೊಳ್ಳುತ್ತಿದ್ದ ಪತ್ನಿಯ ಚಟದಿಂದ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ ಹೇಯ ಘಟನೆ ವರದಿಯಾಗಿದೆ.

ನಗರದ ಎಚ್‌ಎಎಲ್ ಬಡಾವಣೆಯಲ್ಲಿ ವಾಸವಾಗಿದ್ದ ಪತಿ ಅಂಥೋಣಿ ಮತ್ತು ಪತ್ನಿ ಪ್ರಭಾ ಅನ್ಯೋನ್ಯವಾಗಿದ್ದರು. ನಂತರ ಮೂರನೇ ವ್ಯಕ್ತಿಯ ಪ್ರವೇಶದ ನಂತರ ದಂಪತಿಗಳ ಜೀವನದಲ್ಲಿ ನೆಮ್ಮದಿ ಅಂತ್ಯವಾಗಿದೆ.
 
ಪತಿ ಅಂಥೋಣಿ ಉದ್ಯೋಗದ ನಿಮಿತ್ಯ ಕಚೇರಿಗೆ ತೆರಳಿದ ಕೂಡಲೇ ಪಕ್ಕದ ಮನೆಯ ವ್ಯಕ್ತಿಯೊಂದಿಗೆ ಪತ್ನಿ ಪ್ರಭಾ ರಾಸಲೀಲೆಯಲ್ಲಿ ತೊಡಗುತ್ತಿದ್ದಳು. ಇದು ನಿರಂತರವಾಗಿ ಮುಂದುವರಿದಿದೆ. ಆದರೆ, ಅಂದು ಪತಿಗೆ ಯಾಕೋ ಅನುಮಾನ ಬಂದು ಕಚೇರಿಗೆ ಹೋಗುತ್ತೇನೆ ಎಂದು ಹೇಳಿ ಒಂದು ಗಂಟೆಯ ನಂತರ ಮನೆಗೆ ವಾಪಸ್ ಮರಳಿದ್ದಾನೆ. ಮನೆಗೆ ಬಂದು ನೋಡಿದಾಗ ಪತ್ನಿ ಮತ್ತು ನೆರೆಮನೆಯಾತ ರಾಸಲೀಲೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಪತ್ನಿಯ ದ್ರೋಹ ಕಂಡು ಕೋಪದ ಭರದಲ್ಲಿ ಆಕೆಯನ್ನು ಮನಂಬಂದಂತೆ ಥಳಿಸಿದ್ದಾನೆ.
 
ಪತ್ನಿಯ ಅನೈತಿಕ ಸಂಬಂಧಗಳಿಂದ ಬೇಸತ್ತ ಪತಿ ಅಂಥೋಣಿ, ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರೋಪಿ ಪತ್ನಿ ಪ್ರಭಾ ವಿರುದ್ಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

20 ವರ್ಷದ ಮಾನಸಿಕ ಅಸ್ವಸ್ಥೆ ಪುತ್ರಿಯ ಮೇಲೆ ತಂದೆಯಿಂದಲೇ ರೇಪ್

ವಾರಂಗಲ್: 20 ವರ್ಷದ ಮಾನಸಿಕ ಅಸ್ವಸ್ಥೆ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ ಪಾಪಿತಂದೆಯನ್ನು ...

news

‘ಸೆಗಣಿ ತುಂಬಿದ ಸಿಎಂ ರಾಜ್ಯದಲ್ಲಿರುವುದೇ ನಮಗೆ ಅವಮಾನ’

ಬೆಳಗಾವಿ: ತಮಗೆ ಮೆದುಳೇ ಇಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ...

news

ಬೆಳಗಾವಿ ಅಧಿವೇಶನದ ಹೊರಗೂ ಒಳಗೂ ಸರ್ಕಾರಕ್ಕೆ ಪ್ರತಿಭಟನೆ ಬಿಸಿ

ಬೆಳಗಾವಿ: ಇಂದಿನಿಂದ ಉತ್ತರಕರ್ನಾಟಕದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಬೆಳಗಾವಿ ಸುವರ್ಣ ಸೌಧದಲ್ಲಿ ವಿಶೇಷ ...

news

ಆನ್ ಲೈನ್ ನಲ್ಲಿ ಕಾಂಡೋಮ್ ದಾಖಲೆಯ ಮಾರಾಟ!

ನವದೆಹಲಿ: ಆನ್ ಲೈನ್ ವ್ಯಾಪಾರ ಈ ದಿನಗಳಲ್ಲಿ ಭಾರೀ ಜನಪ್ರಿಯವಾಗಿದೆ ಎನ್ನುವುದಕ್ಕೆ ಇದು ಸಾಕ್ಷಿ. ಆನ್ ...

Widgets Magazine
Widgets Magazine