ಮೆಡಿಕಲ್ ಸೀಟ್ ಸಿಗದಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪಾಪಿ ಪತಿ

ಹೈದರಾಬಾದ್, ಮಂಗಳವಾರ, 19 ಸೆಪ್ಟಂಬರ್ 2017 (14:45 IST)

ಹೈದರಾಬಾದ್: ಮೆಡಿಕಲ್ ಸೀಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನ ಕೊಂದು ಪತಿಯೇ ಬೆಂಕಿ ಹಚ್ಚಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ನಾಗೊಳೆಯಲ್ಲಿ ನಡೆದಿದೆ.


ಹಾರಿಕಾ(20) ಹತ್ಯೆಯಾದ ದುರ್ದೈವಿ. ಹಾರಿಕಾಳ ನಿರುದ್ಯೋಗಿ ಪತಿ ಕೆ.ಋಷಿಕುಮಾರ್ ಈ ಕೃತ್ಯವೆಸಗಿದ್ದಾನೆ. ಈ ಕುರಿತು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಋಷಿಕುಮಾರ್ ಮತ್ತು ಆತನ ಪೋಷಕರನ್ನು ಬಂಧಿಸಿದ್ದಾರೆ.

ಹಾರಿಕಾ ಮತ್ತು ಋಷಿಕುಮಾರ್ 2 ವರ್ಷದ ಹಿಂದೆ ವಿವಾಹವಾಗಿದ್ದರು. ಮೂಲತಃ ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯವರಾದ ದಂಪತಿ, ಮದುವೆಯಾದ ಬಳಿಕ ಹೈದರಾಬಾದ್ ನ ನಾಗೊಳೆಯ ರಾಕ್ ಟೌನ್ ಕಾಲೋನಿಯಲ್ಲಿ ನೆಲೆಸಿದ್ದರು.  ಹಾರಿಕಾ ವರ್ಷದಿಂದ ಮೆಡಿಕಲ್ ಎಂಟ್ರೆನ್ಸ್ ಪರೀಕ್ಷೆಗಾಗಿ ಓದುತ್ತಿದ್ದರು. ಪರೀಕ್ಷೆ ಬರೆದಿದ್ದ ಹಾರಿಕಾ ಪಾಸ್ ಆಗಿರಲಿಲ್ಲ. ಒಂದು ವೇಳೆ ಫೇಲ್ ಆದರೆ ಡಿವೋರ್ಸ್ ನೀಡುವುದಾಗಿ ಬೆದರಿಕೆ ಹಾಕಿದ್ದ ಎಂಬುದಾಗಿ ಆಕೆ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದನಂತೆ. ಇತ್ತೀಚೆಗೆ ಹಾರಿಕಾ ಕಾಮಿನೇನಿ ಮೆಡಿಕಲ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಕೋರ್ಸ್ ತೆಗೆದುಕೊಂಡಿದ್ದು, ಇದು ಆಕೆಯ ಪತಿಗೆ ಇಷ್ಟವಿರಲಿಲ್ಲವೆಂದು ಅಸಿಸ್ಟೆಂಟ್ ಕಮಿಷನರ್ ಪಿ.ವೇಣುಗೋಪಾಲ್ ರಾವ್ ತಿಳಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಸೇಲ್ಸ್ ಮನ್ ಆಗಿದ್ದ ಋಉಷಿಕುಮಾರ್ ಇತ್ತೀಚೆಗಷ್ಟೆ ಉದ್ಯೋಗ ಕಳೆದುಕೊಂಡಿದ್ದ. ಹೀಗಾಗಿ ಸ್ವಂತ ಉದ್ಯೋಗ ಮಾಡುವ ದೃಷ್ಟಿಯಿಂದ ಪತ್ನಿ ಬಳಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎಂದು ಪೊಲೀಸರಿಗೆ ಹಾರಿಕಾ ಪೋಷಕರು ದೂರು ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾನು ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿ ನಿಂತ್ರೂ ಗೆಲ್ಲುತ್ತೇನೆ: ಸಿಎಂ

ಬೆಂಗಳೂರು: ನಾನು ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿ ನಿಂತ್ರೂ ಗೆಲ್ಲುತ್ತೇನೆ. ನಾನು ಎಲ್ಲಿ ...

news

ಡಿಎಂಕೆ ಶಾಸಕರ ರಾಜೀನಾಮೆ: ತಮಿಳುನಾಡು ವಿಧಾನಸಭೆ ವಿಸರ್ಜನೆ ಸಾಧ್ಯತೆ

ಚೆನ್ನೈ: ತಮಿಳುನಾಡು ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳಿದ್ದು, ಡಿಎಂಕೆ ಶಾಸಕರಿಂದ ...

news

ಮೋದಿ ಸರ್ಕಾರದಿಂದ ರಾಜ್ಯದ ಸಚಿವ, ಶಾಸಕರ ಫೋನ್ ಕದ್ದಾಲಿಕೆ: ರಾಮಲಿಂಗಾರೆಡ್ಡಿ

ಬೆಂಗಳೂರು: ಕೇಂದ್ರ ಸರಕಾರದಿಂದ ರಾಜ್ಯದ ಸಚಿವರು ಮತ್ತು ಶಾಸಕರ ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂದು ...

news

ಸರ್ಕಾರಿ ಗೌರವದೊಂದಿಗೆ ಇಂದು ಖಮರುಲ್ ಇಸ್ಲಾಂ ಅಂತ್ಯಕ್ರಿಯೆ

ಕಲಬುರ್ಗಿ: ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಪಾರ್ಥಿವ ಶರೀರ ಇಲ್ಲಿನ ನೊಬೆಲ್ ಶಾಲೆಯ ಬಳಿ ಇರುವ ಖಮರುಲ್ ...

Widgets Magazine
Widgets Magazine