ನಾನೂ ಕೂಡ ಆರೆಸ್ಸೆಸ್ ವ್ಯಕ್ತಿಯೇ. ಗೌರಿ ಲಂಕೇಶ್'ರನ್ನ ಹತ್ಯೆ ಮಾಡಿದ್ದೀನಾ: ಈಶ್ವರಪ್ಪ ಕಿಡಿ

ಬೆಂಗಳೂರು, ಶನಿವಾರ, 9 ಸೆಪ್ಟಂಬರ್ 2017 (14:25 IST)

ಗೌರಿ ಲಂಕೇಶ್ ಹತ್ಯೆಯ ಹಿಂದೆ ಆರೆಸ್ಸೆಸ್ ಕೈವಾಡವಿದೆ ಎನ್ನುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ನಾನು ಕೂಡಾ ಆರೆಸ್ಸೆಸ್ ವ್ಯಕ್ತಿ,ಹಾಗಾದ್ರೆ ನಾನು ಗೌರಿ ಲಂಕೇಶ್ ಹತ್ಯೆ ಮಾಡಿದ್ದೀನಾ? ಎಂದು ಪ್ರಶ್ನಿಸಿದ್ದಾರೆ.
ಆರೆಸ್ಸೆಸ್ ಮತ್ತು ಬಿಜೆಪಿ ವಿಚಾರಧಾರೆಯನ್ನು ವಿರೋಧಿಸುವವರನ್ನು ಹತ್ಯೆ ಮಾಡಲಾಗುತ್ತಿದೆ. ಗೌರಿ ಲಂಕೇಶ್ ಹತ್ಯೆಯ ಹಿಂದೆ ಇಂತಹುದೆ ವಿಚಿದ್ರಕಾರಿ ಶಕ್ತಿಗಳ ಕೈವಾಡವಿದೆ ಎಂದು ರಾಹುಲ್ ಆರೋಪಿಸಿದ್ದರು.
 
ರಾಹುಲ್ ಗಾಂಧಿ ಅರೆಪ್ರಜ್ಞೆಯಲ್ಲಿ ಇಂತಹ ಹೇಳಿಕೆ ನೀಡಿರಬಹುದು. ಅವರ ಹೇಳಿಕೆಗೆ ಯಾವುದೇ ಬೆಲೆಯಿಲ್ಲ. ತಾಕತ್ತಿದ್ರೆ ಗೌರಿ ಪ್ರಕರಣನ್ನು ಸಿಬಿಐಗೆ ವಹಿಸಲಿ. ಯಾರು ಆರೋಪಿಗಳು ಎನ್ನುವುದು ಬಹಿರಂಗವಾಗುತ್ತಿದೆ. ಯಾಕೆ ಸರಕಾರ ಸಿಬಿಐ ತನಿಖೆಗೆ ವಹಿಸಲು ಹಿಂದೇಟು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.
 
ಆರೆಸ್ಸೆಸ್ ದೇಶಭಕ್ತ ಸಂಘಟನೆ. ಇಂತಹ ನೂರಾರು ಗಾಂಧಿಗಳು ಬಂದರೂ ಏನು ಮಾಡಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಗುಡುಗಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯಕಶ್ಚಿತ್ ಮಂತ್ರಿಗಿರಿಗೆ ಕಟ್ಟುಬೀಳಬೇಡಿ: ರಾಮಲಿಂಗಾರೆಡ್ಡಿಗೆ ಎಚ್‌ಡಿಕೆ ಸಲಹೆ

ಬೆಂಗಳೂರು: ಯಕಶ್ಚಿತ್ ಮಂತ್ರಿಗಿರಿಗೆ ಕಟ್ಟುಬೀಳಬೇಡಿ ಎಂದು ಗೃಹಸಚಿವ ರಾಮಲಿಂಗಾರೆಡ್ಡಿಯವರಿಗೆ ಸಲಹೆ ...

news

ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್

ಬೆಂಗಳೂರು: ಮೇಯರ್, ಉಪಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿರುವುದು ರಾಜಕೀಯ ಪಕ್ಷಗಳಲ್ಲಿ ಹೆಚ್ಚಿನ ...

news

ರಾಜಕಾರಣವೆಂದರೆ ಕೇವಲ ಜಾತಿ, ಹಣವಲ್ಲ: ಅನಂತ್‌ಕುಮಾರ್ ಹೆಗ್ಡೆ

ಮಂಗಳೂರು: ರಾಜಕಾರಣವೆಂದರೆ ಕೇವಲ ಜಾತಿ, ಹಣವಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

news

17 ಮಂದಿ ಹಿರಿಯ ಸಾಹಿತಿಗಳಿಗೆ ಜೀವ ಬೆದರಿಕೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: 17 ಮಂದಿ ಹಿರಿಯ ಸಾಹಿತಿಗಳಿಗೆ ಜೀವ ಬೆದರಿಕೆಯಿದ್ದು ಅವರಿಗೆ ಪೊಲೀಸ್ ಭದ್ರತೆ ನೀಡಲು ಸರಕಾರ ...

Widgets Magazine