ನಾನು ಜೆಡಿಎಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದ ಮಾಜಿ ಶಾಸಕಿ

ಮಂಡ್ಯ, ಶನಿವಾರ, 13 ಅಕ್ಟೋಬರ್ 2018 (14:43 IST)

ಲೋಕಸಭೆ ಉಪ ಚುನಾವಣೆಯಲ್ಲಿ ನಾನು ಜೆಡಿಎಸ್ ನ ಟಿಕೆಟ್ ನ ಆಕಾಂಕ್ಷಿಯಾಗಿದ್ದೇನೆ. ಹೀಗಂತ ಮಾಜಿ ಶಾಸಕಿ ಹೇಳಿದ್ದಾರೆ.

ಮಂಡ್ಯದಲ್ಲಿ ಮಾಜಿ ಶಾಸಕಿ ಪ್ರಭಾವತಿ ಜಯರಾಂ ಹೇಳಿಕೆ ನೀಡಿದ್ದು, ನಾನು ಜೆಡಿಎಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ವರಿಷ್ಠರು ಟಿಕೆಟ್ ನೀಡುವ ಭರವಸೆ ಇದೆ ಎಂದಿದ್ದಾರೆ.

ಪತಿ ಎಸ್‌.ಡಿ.ಜಯರಾಂ ಮಾಡಿರುವ ಅಭಿವೃದ್ದಿ ಕಾರ್ಯಗಳು, ಅವರ ನಾಯಕತ್ವ ಇನ್ನೂ ಮನೆ ಮಾತಾಗಿವೆ.
ಉಪ ಚುನಾವಣೆಗಾಗಲಿ, ಸಾರ್ವತ್ರಿಕ ಚುನಾವಣೆಗಾಗಲಿ ಸ್ಪರ್ಧಿಸಲು ಸಿದ್ಧ ಎಂದಿದ್ದಾರೆ.

2003 ರಲ್ಲಿ ಎಸ್.ಎಂ.ಕೃಷ್ಣ ಸಹೋದರ ಶಂಕರ್ ವಿರುದ್ದ ಯಾರು ಎಂ.ಎಲ್.ಸಿ. ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಮಾಡಲಿಲ್ಲ.  ಅದ್ರೆ ನಾನು ಜೆಡಿಎಸ್ ನಾಯಕರ ಮಾತಿಗೆ ಬೆಲೆ ಕೊಟ್ಟು ಎಂ‌ಎಲ್‌ಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ.
ಪತಿ ಜಯರಾಂ ಸಾವಿನ ಬಳಿಕ ಈವರೆಗೂ ಪಕ್ಷದ ಅಭಿವೃದ್ದಿಗೆ ದುಡಿಯುತ್ತಿದ್ದೇವೆ ಎಂದರು.

ನನಗಾದರೂ ಸರಿ, ಇಲ್ಲವೆ ನನ್ನ ಮಗ ಅಶೋಕ್ ಜಯರಾಂಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದೇವೆ.
ನಾಳೆ ಅಂತಿಮವಾಗಿ ಟಿಕೆಟ್ ಹಂಚಿಕೆ ಫೈನಲ್ ಆಗಲಿದೆ ಎಂದರು. ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧ ಅಂತ ಮಾಜಿ ಶಾಸಕಿ ಹೇಳಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಾತ್ಯಾತೀತ ಪಕ್ಷಗಳ ರಾಜ್ಯ ಸರ್ಕಾರ ಸುಭದ್ರವಾಗಿದೆ ಎಂದ ಸಚಿವ

ಜಾತ್ಯಾತೀತ ಪಕ್ಷಗಳ ರಾಜ್ಯ ಸರ್ಕಾರ ಸುಭದ್ರವಾಗಿದೆ ಎಂದು ಸಚಿವ ಹೇಳಿದ್ದಾರೆ.

news

ನವರಾತ್ರಿಗಾಗಿ ನರ್ತಿಸಿದ ವಿದ್ಯಾರ್ಥಿನಿಯರು

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೂ ಸಡಗರ ಹಾಗೂ ಸಂಭ್ರಮದಿಂದ ನವರಾತ್ರಿ ಉತ್ಸವ ಆಚರಣೆ ಮಾಡಲಾಗುತ್ತಿದೆ.

news

ಮೀಟೂ ಅಭಿಯಾನಕ್ಕೆ ಕಾನೂನು ಬೆಂಬಲ ನೀಡಲು ಮುಂದಾದ ಕೇಂದ್ರ ಸರಕಾರ

ನವದೆಹಲಿ : ಮಹಿಳೆಯರು ತಮ್ಮ ಜೀವನದಲ್ಲಿ ನಡೆದ ಲೈಂಗಿಕ ಕಿರುಕುಳದ ಘಟನೆಗಳನ್ನು ಬಹಿರಂಗಪಡಿಸುವ ಸಲುವಾಗಿ ...

news

ಜನಕ ರಾಜನ ಪಾತ್ರದಲ್ಲಿ ನಟಿಸಿದ ಕೇಂದ್ರ ಸಚಿವರ ಕಾಲೆಳೆದ ನೆಟ್ಟಿಗರು

ನವದೆಹಲಿ : ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು ನಾಟಕವೊಂದರಲ್ಲಿ ಜನಕ ರಾಜನ ಪಾತ್ರದಲ್ಲಿ ನಟಿಸಿದ ವಿಡಿಯೋ ...

Widgets Magazine