ಜನರಿಂದ ಪೊರಕೆ ಏಟು ತಿನ್ನುತ್ತೇನೆ- ಡಿಕೆಶಿ ಸಿ.ಪಿ.ಯೋಗೀಶ್ವರಗೆ ತಿರುಗೇಟು

ತುಮಕೂರು, ಶುಕ್ರವಾರ, 5 ಜನವರಿ 2018 (08:49 IST)

ಜನರು ಯಾವಾಗ ಬೇಕಾದರೂ ಪೊರಕೆಯಿಂದ ಹೊಡೆಯಲಿ, ನಾನು ಪೊರಕೆ ಏಟು ತಿನ್ನುತ್ತೇನೆ. ಇದು ರಾಜಕೀಯ ಬದ್ಧತೆ ಎಂದು ಇಂಧನ ಸಚಿವ ಶಾಸಕ ಸಿ.ಪಿ.ಯೋಗೀಶ್ವರ್ ಅವರಿಗೆ ತಿರುಗೇಟು ನೀಡಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಮಹಿಳೆಯ ಕೈಯಲ್ಲಿ ಪೊರಕೆಯಿಂದ ಡಿ.ಕೆ.ಶಿವಕುಮಾರ ಅವರನ್ನು ಹೊಡೆಸುತ್ತೇನೆ ಎಂದು ಸಿ.ಪಿ.ಯೋಗೀಶ್ವರ್ ಅವರು ನೀಡಿದ್ದ ಹೇಳಿಕೆಗೆ, ಈ ರೀತಿ ಹೇಳಿದ್ದಾರೆ.

ಚನ್ನಪಟ್ಟಣದ ಜನತೆ ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಅಲ್ಲಿಯ ಜನರೊಂದಿಗೆ ಉತ್ತಮ ಬಾಂಧವ್ಯವಿದೆ. ಹಾಗಾಗಿ ರಾಜಕೀಯವಾಗಿ ಮದುವೆಯಾಗಿದ್ದೇನೆ ಎಂದು ಹೇಳಿದ್ದೇನೆ. ಆದರೆ ಅವರ ಹಾಗೇ ಮದುವೆಯಲ್ಲ. ನನ್ನದು ರಾಜಕೀಯ ಬದ್ಧತೆ ಎಂದಿದ್ದಾರೆ.

ಚನ್ನಪಟ್ಟಣದಲ್ಲಿ ಸಾಮಾನ್ಯ ವ್ಯಕ್ತಿಯನ್ನು ಕಣಕ್ಕಿಳಿಸಿ ಡಿ.ಕೆ.ಶಿವಕುಮಾರ ಅವರ ವಿರುದ್ಧ ಗೆಲ್ಲಿಸುತ್ತೇನೆ. ಸ್ಪರ್ಧೆ ಮಾಡಲಿ ಎಂದು ಸಿ.ಪಿ.ಯೋಗೀಶ್ವರ್ ಹಾಕಿದ್ದ ಸವಾಲಿಗೆ ಪ್ರತಿಕ್ರಿಯೆ ನೀಡಿ, ಚನ್ನಪಟ್ಟಣದಲ್ಲಿ ಅವರು ಮೊದಲು ಗೆಲ್ಲಲಿ, ನಂತರ ನನ್ನ ವಿರುದ್ಧ ಸಾಮಾನ್ಯರನ್ನು ಕಣಕ್ಕಿಳಿಸಲಿ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೈಲಲ್ಲಿ ನೆಗಡಿಯಾಗ್ತಿದೆ ಎಂದು ದೂರಿದ ಲಾಲೂ ಪ್ರಸಾದ್ ಯಾದವ್ ಗೆ ನ್ಯಾಯಾಧೀಶರು ಕೊಟ್ಟ ಉತ್ತರವೇನು ಗೊತ್ತಾ?

ನವದೆಹಲಿ: ಬಹುಕೋಟಿ ಮೇವು ಹಗರಣದ ಆರೋಪದಲ್ಲಿ ಜೈಲು ಪಾಲಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ...

news

ಉತ್ತರ ಕೊರಿಯಾ ಸರ್ವಾಧಿಕಾರಿಯನ್ನು ಹೊಗಳಿ ವಿವಾದಕ್ಕೀಡಾದ ಕೇರಳ ಸಿಎಂ

ತಿರುವನಂತಪುರಂ: ಅಮೆರಿಕಾ ವಿರುದ್ಧ ಕತ್ತಿ ಮಸೆಯುತ್ತಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಂಗ್ ಉನ್ ...

news

6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

6ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮೈಸೂರಿನಲ್ಲಿ ವರದಿಯಾಗಿದೆ.

news

ದೀಪಕ್ ಹತ್ಯೆಗೆ ಟ್ವಿಟ್‌ನಲ್ಲಿ ಕಿಲ್ಲರ್ ಕಾಂಗ್ರೆಸ್ ಎಂದ ಅನಂತಕುಮಾರ್ ಹೆಗಡೆ

ಮಂಗಳೂರಿನಲ್ಲಿ ಕೊಲೆಯಾಗಿರುವ ದೀಪಕ್‌ ರಾವ್‌ ಹತ್ಯೆಗೆ ಕಿಡಿಕಾರಿರುವ ಕೇಂದ್ರ ಸಚಿವ ಅನಂತ್‌ ಕುಮಾರ್‌ ...

Widgets Magazine
Widgets Magazine