ಪ್ರಾಣವನ್ನೇ ಪಣವಾಗಿಟ್ಟು ಕ್ಷೇತ್ರದ ಅಭಿವೃದ್ಧಿ ಮಾಡುವೆ: ಗೀತಾ ಮಹಾದೇವ್ ಪ್ರಸಾದ್

ಗುಂಡ್ಲುಪೇಟೆ, ಗುರುವಾರ, 13 ಏಪ್ರಿಲ್ 2017 (15:48 IST)

Widgets Magazine

ಕಳೆದ 25 ವರ್ಷಗಳಿಂದ ಪತಿ ಮಹಾದೇವ್ ಪ್ರಸಾದ್ ಮಾಡಿದ ಕ್ಷೇತ್ರದ ಅಭಿವೃದ್ಧಿ, ಜನತೆಯ ಅನುಕಂಪ ನನ್ನ ಗೆಲುವಿಗೆ ಕಾರಣವಾಗಿದೆ ಎಂದು ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಮಹಾದೇವ್ ಪ್ರಸಾದ್ ಹೇಳಿದ್ದಾರೆ. 
  
ಉಪಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್, ಯು.ಟಿ.ಖಾದರ್ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದ ಧೃವನಾರಾಯಣ್ ವ್ಯಾಪಕ ಪ್ರಚಾರ ಮಾಡಿರುವುದು ಗೆಲುವಿಗೆ ಮುನ್ನುಡಿ ಬರೆಯಿತು ಎಂದು ತಿಳಿಸಿದ್ದಾರೆ.  
 
ಬಿಜೆಪಿ ಸಂಸದ ಪ್ರತಾಪ್ ಸಿಂಹ ನನ್ನ ಬಗ್ಗೆ ಹೇಳಿಕೆ ನೀಡಿ ಮಹಿಳೆಯರನ್ನು ಅಪಮಾನ ಮಾಡಿರುವುದು ಕೂಡಾ ಮಹಿಳೆಯರು ಕಾಂಗ್ರೆಸ್ ಪಕ್ಷದತ್ತ ವಾಲುವಂತೆ ಮಾಡಿತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
 
ಜನತೆ ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸವನ್ನು ಉಳಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಣವನ್ನೇ ಪಣವಾಗಿಡುತ್ತೇನೆ. ನೀರಿನ ತೊಂದರೆಯನ್ನು ಮುಕ್ತಗೊಳಿಸಲು ಎಲ್ಲಾ ಕೆರೆಗಳಿಗೆ ನೀರು ತುಂಬುವ ಯೋಜನೆ ಹಮ್ಮಿಕೊಳ್ಳುವುದಕ್ಕೆ ಆದ್ಯತೆ ನೀಡುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹಾದೇವ್ ಪ್ರಸಾದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯರ ಜನಪರ ಅಡಳಿತವೇ ಗೆಲುವಿಗೆ ಕಾರಣ: ಕಳಲೆ ಕೇಶವಮೂರ್ತಿ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿವೃದ್ಧಿ ಪರ ಕಾರ್ಯಗಳು, ಜನಪರ ಯೋಜನೆಗಳು ನನ್ನ ಗೆಲುವಿಗೆ ...

news

ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಕ್ಕಾಗಿ ಎಸ್‌ಎಂಕೆಗೆ ಅಭಿನಂದನೆ: ದಿನೇಶ್ ಗುಂಡೂರಾವ್

ಬೆಂಗಳೂರು: ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ...

news

ನಾನು ವೈಯಕ್ತಿಕ ಟೀಕೆ ಮಾಡಲಿಲ್ಲ, ಕರ್ನಾಟಕದಲ್ಲಿ ಮೋದಿ ಅಲೆ ವರ್ಕೌಟ್ ಅಗಲ್ಲ: ಸಿಎಂ ಸಿದ್ದರಾಮಯ್ಯ

ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಮತದಾರರಿಗೆ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ. ಉಪಚುನಾವಣೆಗಳು ...

news

ಜಾತಿ ಧರ್ಮವನ್ನು ಒಡೆದು ಮತ ಗಿಟ್ಟಿಸಿಲ್ಲ: ಜಿ.ಪರಮೇಶ್ವರ್

ತುಮಕೂರು: ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಜಾತಿ ಧರ್ಮವನ್ನು ಒಡೆದು ಮತ ಗಿಟ್ಟಿಸಿಲ್ಲ ಎಂದು ...