ಸರಕಾರದ ಹಗರಣಗಳನ್ನು ಬಯಲು ಮಾಡ್ತೇನೆ: ಬಿಎಸ್‌ವೈ ಗುಡುಗು

ಬೆಂಗಳೂರು:, ಮಂಗಳವಾರ, 16 ಮೇ 2017 (12:52 IST)

Widgets Magazine

ಸರಕಾರದ ಹಗರಣಗಳನ್ನು ಬಯಲು ಮಾಡ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಗುಡುಗಿದ್ದಾರೆ.
 
ನಗರದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಸಮೀಕ್ಷಾ ಸಂಸ್ಥೆಯಿಂದ ಭ್ರಷ್ಟಾಚಾರದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ದೊರೆತಿದೆ. ಬರಪರಿಹಾರ ಕಾಮಗಾರಿ ನಿರ್ವಹಣೆಯಲ್ಲೂ ವಿಫಲವಾಗಿದೆ ಎಂದು ಆರೋಪಿಸಿದರು.
 
ಬಿಬಿಎಂಪಿ, ಲೋಕೋಪಯೋಗಿ ಇಲಾಖೆ, ಅರ್ಕಾವತಿ ಡಿನೋಟಿಫೈನಲ್ಲೂ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಗಳ ಸುರಿಮಳೆಗೈದರು.
 
ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದು ರಾಜ್ಯ ಪ್ರವಾಸಕ್ಕೆ ಹೊರಡುತ್ತೇನೆ. ಮೊದಲ ಹಂತದಲ್ಲಿ ಜಗದೀಶ್ ಶೆಟ್ಟರ್ ಮತ್ತು ಆರ್.ಅಶೋಕ್ ಅವರು ಸಾಥ್ ನೀಡಲಿದ್ದಾರೆ. ಪ್ರತಿದಿನ ಸಂಜೆ ಸಾರ್ವಜನಿಕ ಸಭೆ ನಡೆಸುತ್ತೇನೆ ಎಂದರು.  
 
ಒಂದೊಂದು ಕ್ಷೇತ್ರದಲ್ಲಿ ಮೂವರು ಆಕಾಂಕ್ಷಿಗಳಿದ್ದಾರೆ. ಮತ್ತೊಂದು ಬಾರಿ ಸಮೀಕ್ಷೆ ನಡೆಸಿ ಸೂಕ್ತ ಗೆಲ್ಲುವ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ಹೈಕಮಾಂಡ್ ಸೂಕ್ತ ಅಭ್ಯರ್ಥಿಗೆ ಮಾತ್ರ ಟಿಕೆಟ್ ನೀಡಲಿದೆ ಎಂದು ಹೇಳಿದ್ದಾರೆ.
 
ಗ್ರಾಮಾಭಿವೃದ್ಧಿ ಇಲಾಖೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳಿಗೆ ಲೆಕ್ಕವೇ ಇಲ್ಲ. ನೇತೃತ್ವದ ಸರಕಾರ ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.   
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಾಹನ ಸವಾರರಿಗೆ ಬಂಪರ್: ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಪ್ರಮಾಣದ ಇಳಿಕೆ

ವಾರದ ಆರಂಭದಲ್ಲೇ ವಾಹನ ಸವಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲ್ ಬೆಲೆಯಲ್ಲಿ 2.16 ರೂ. ಮತ್ತು ...

news

ಲಾಲೂ ಪ್ರಸಾದ್ ಯಾದವ್ ಗೆ ಐಟಿ ಶಾಕ್

ನವದೆಹಲಿ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ತೆರಿಗೆ ಇಲಾಖೆ ಶಾಕ್ ನೀಡಿದೆ. ಲಾಲೂಗೆ ಸೇರಿದ ...

news

ಮದುವೆಯಾದ ಐದೇ ದಿನಕ್ಕೆ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ!

ಮುಂಬೈ: ಬಲವಂತವಾಗಿ ಮದುವೆ ಮಾಡಿಸಿದರೆಂಬ ಕಾರಣಕ್ಕೆ ಕೈ ಹಿಡಿದ ಪತ್ನಿಯನ್ನೇ ಮದುವೆಯಾದ ಐದೇ ದಿನಕ್ಕೆ ಪತಿ ...

news

ಪಾಕ್ ಮೇಲೆ ಮತ್ತೊಂದು ದಾಳಿಯ ಸೂಚನೆ ಕೊಟ್ಟ ರಾಜನಾಥ್ ಸಿಂಗ್

ನವದೆಹಲಿ: ಭಾರತೀಯ ಸೈನಿಕರ ಮೇಲೆ ಪಾಕ್ ಬೆಂಬಲಿತ ಉಗ್ರರ ದಾಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಾತನಾಡಿರುವ ...

Widgets Magazine