ಸಿಎಂ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಕೇಸ್: ಯಡಿಯೂರಪ್ಪ ಎಚ್ಚರಿಕೆ

ಬೆಂಗಳೂರು, ಗುರುವಾರ, 2 ಮಾರ್ಚ್ 2017 (13:10 IST)

ಹೋದಲ್ಲಿ ಬಂದಲ್ಲಿ ನನ್ನನ್ನು ಮಹಾನ್ ಭ್ರಷ್ಟ ಎಂದು ಟೀಕಿಸುತ್ತಿದ್ದಾರೆ. ಇದನ್ನೇ ಮುಂದುವರಿಸಿದಲ್ಲಿ ಅವರ ವಿರುದ್ಧ ಮಾನನಷ್ಟ ಕೇಸ್ ದಾಖಲಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಎಚ್ಚರಿಕೆ ನೀಡಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಮಿತಿ ಮಿರಿ ತಮ್ಮ ವರ್ತನೆ ಮುಂದುವರಿಸಿದಲ್ಲಿ ಕಾನೂನು ಸಲಹೆಗಾರರನ್ನು ಸಂಪರ್ಕಿಸಿದ ನಂತರ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಕಿಡಿಕಾರಿದ್ದಾರೆ.
 
ನನ್ನ ಎಲ್ಲಾ ಪ್ರಕರಣಗಳ ಬಗ್ಗೆ ಕೋರ್ಟ್ ತೀರ್ಪು ನೀಡಿದ್ದು,ನಿರಪರಾಧಿ ಎಂದು ಘೋಷಿಸಿದೆ. ನ್ಯಾಯಾಲಯದ ಮೂಲಕವೇ ನಾನು ದೋಷಮುಕ್ತನಾಗಿದ್ದೇನೆ. ಆದಾಗ್ಯೂ, ಸಿಎಂ ಸಿದ್ದರಾಮಯ್ಯ ಪದೇ ಪದೇ ಮಹಾನ್ ಭ್ರಷ್ಟ ಎಂದು ಆರೋಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಕಾಂಗ್ರೆ,ಸ್ ಸರಕಾರದ ಇಂತಹ ಬೆದರಿಕೆಗಳಿಗೆ ನಾನು ಜಗ್ಗಲ್ಲ, ಬಗ್ಗಲ್ಲ, ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ 65 ಕೋಟಿ ರೂಪಾಯಿ ಸಂದಾಯವಾಗಿರುವುದು ಡೈರಿಯಲ್ಲಿ ನಮೂದಾಗಿದೆ. ಸಿಎಂಗೆ ತಾಕತ್ತಿದ್ರೆ ಡೈರಿ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದರು.
 
ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಹದ್ಯೋಗಿಗಳು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಸಾವಿರ ಕೋಟಿ ರೂಪಾಯಿ ಕಪ್ಪ ಸಲ್ಲಿಸಿರುವುದು ಡೈರಿಯಲ್ಲಿ ದಾಖಲಾಗಿದೆ. ಡೈರಿ ಸತ್ಯಾಸತ್ಯತೆ ಅರಿಯಲು ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯರ ಬೆದರಿಕೆಗಳಿಗೆ ನಾನು ಜಗ್ಗಲ್ಲ, ಬಗ್ಗಲ್ಲ: ಯಡ್ಡಿ ಗುಡುಗು

ಬೆಂಗಳೂರು: ನನ್ನ ವಿರುದ್ದದ ಹಳೆಯ ಕೇಸ್‌ಗಳಿಗೆ ಮತ್ತೆ ಜೀವ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ...

news

ಸ್ಟೀಲ್ ಬ್ರಿಡ್ಜ್‌ನಲ್ಲಿ ಒಂದೇ ಒಂದು ರೂ ಲಂಚ ಪಡೆದಿದ್ರೆ ದಾಖಲೆ ಕೊಡಿ: ಜಾರ್ಜ್ ಸವಾಲ್

ಬೆಂಗಳೂರು: ಸ್ಟೀಲ್ ಬ್ರಿಡ್ಜ್‌ ಯೋಜನೆಯಲ್ಲಿ ಒಂದೇ ಒಂದು ರೂ ಪಡೆದಿದ್ರೆ ದಾಖಲೆ ಕೊಡಿ ಎಂದು ವಿಪಕ್ಷಗಳಿಗೆ ...

news

ಸ್ಟೀಲ್ ಬ್ರಿಡ್ಜ್ ಯೋಜನೆ ರದ್ದುಗೊಳಿಸಿದ ಸರ್ಕಾರ!

ಬೆಂಗಳೂರು: ಕಳೆದ ಕೆಲವು ದಿನಗಳಿಂದ ವಿವಿಧ ಸಂಘಟನೆಗಳ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಸ್ಟೀಲ್ ...

news

ಸೊಸೆಯನ್ನೇ ಮಂಚಕ್ಕೆ ಕರೆದ ಮಾವ!

ಬೆಂಗಳೂರು: ಮಾವನ ಲೈಂಗಿಕ ಕಿರುಕುಳದಿಂದ ಬೇಸತ್ತ ಸೊಸೆ ಪತಿಯ ಮನೆಯವರ ವಿರುದ್ಧ ಬಸವನಗುಡಿ ಮಹಿಳಾ ಠಾಣೆ ...

Widgets Magazine
Widgets Magazine