ಕಾಂಗ್ರೆಸ್ ಪಕ್ಷಕ್ಕೆ ದೊಡ್ಡದೊಂದು ಗುಡ್‌ಬೈ: ಎ.ಬಿ.ಮಲಕರೆಡ್ಡಿ

ಬೆಳಗಾವಿ, ಮಂಗಳವಾರ, 14 ನವೆಂಬರ್ 2017 (14:26 IST)

ನಾನು ಕಾಂಗ್ರೆಸ್ ಪಕ್ಷ ಬಿಡುತ್ತೇನೆ. ಆದರೆ, ಬೇರೆ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ ಎಂದು ಶಾಸಕ ಡಾ. ಎ.ಬಿ.ಮಲಕರೆಡ್ಡಿ ನೇರವಾಗಿ ಹೇಳಿರುವುದು ಕಂಡು ಸಿಎಂ ಕಕ್ಕಾಬಿಕ್ಕಿಯಾದರು ಎಂದು ಮೂಲಗಳು ತಿಳಿಸಿವೆ.
ಮಲಕರೆಡ್ಡಿ ಹೇಳಿಕೆಯಿಂದ ಆಘಾತಗೊಂಡ ಸಿಎಂ, ನಿಮ್ಮ ಆರೋಗ್ಯ ಚೆನ್ನಾಗಿದೆ ನೀವು ಇನ್ನು ಎರಡು ಬಾರಿ ಶಾಸಕರಾಗಬಹುದು ಎಂದು ಮನವೊಲಿಸುವ ಪ್ರಯತ್ನ ಮಾಡಿದರು ಎನ್ನಲಾಗಿದೆ.
 
ಆದರೆ, ತಮ್ಮ ತೀರ್ಮಾನಕ್ಕೆ ಬದ್ಧರಾಗಿರುವಂತೆ ಕಂಡು ಬಂದ ಶಾಸಕ ಮಲಕ ರೆಡ್ಡಿ, ಸರ್ ನಾನು 6 ಬಾರಿ ಶಾಸಕನಾಗಿದ್ದೇನೆ. ಎರಡು ಬಾರಿ ಸಚಿವನಾಗಿದ್ದೇನೆ. ಒಂದು ಅವಧಿಗೆ ಡೆಪ್ಯೂಟಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದೇನೆ. ಇನ್ನೇನಾಗಬೇಕು ಸರ್ ಎಂದು ತಿಳಿಸಿದ್ದಾರೆ.
 
ಚುನಾವಣಾ ರಾಜಕೀಯಕ್ಕೆ ಗುಡ್‌ಬೈ ಹೇಳಿ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.
 
ಬೆಳಗಾವಿಯ ಸುವರ್ಣಸೌಧದಲ್ಲಿ ಉಭಯ ನಾಯಕರು ಮಾತನಾಡಿದ ನಂತರ ಸಿಎಂ ಸಿದ್ದರಾಮಯ್ಯ, ಮತ್ತೆ ನಾನು ನಿಮ್ಮೊಂದಿಗೆ ಮಾತನಾಡುತ್ತೇನೆ ಎಂದು ಹೇಳಿ ಹೊರಟುಹೋದ ಘಟನೆ ವರದಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಕಾಂಗ್ರೆಸ್ ಎ.ಬಿ.ಮಲಕರೆಡ್ಡಿ ಸಿಎಂ ಸಿದ್ದರಾಮಯ್ಯ Congress Cm Siddaramaiah A.b.malakreddy

ಸುದ್ದಿಗಳು

news

ಬಿಜೆಪಿಗೆ ಡಿಕೆಶಿ ಸೆಳೆಯುವ ಪ್ರಯತ್ನ ಮಾಡಿಲ್ಲ: ಜಾವ್ಡೇಕರ್

ಬೆಂಗಳೂರು: ಬಿಜೆಪಿಗೆ ಹಿರಿಯ ಕಾಂಗ್ರೆಸ್ ಮುಖಂಡ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಸೆಳೆಯುವ ಪ್ರಯತ್ನ ...

news

ಕೊಲೆಗಡುಕನಾಗಿದ್ರೆ ಯಾರ ಕೊಲೆ ಮಾಡಿದ್ದೀನಿ ಹೇಳಿ: ಈಶ್ವರಪ್ಪಗೆ ಸಚಿವ ರಮೇಶ್ ಕುಮಾರ್ ಸವಾಲ್

ಬೆಳಗಾವಿ: ಕೊಲೆಗಡುಕನಾಗಿದ್ರೆ ಯಾರ ಕೊಲೆ ಮಾಡಿದ್ದೀನಿ ಹೇಳಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ...

news

ಶ್ರೀರಾಮನ ಆಶೀರ್ವಾದವಿಲ್ಲದೇ ಕಾರ್ಯಸಫಲತೆ ಅಸಾಧ್ಯ: ಸಿಎಂ ಯೋಗಿ

ರಾಯ್ಪುರ್: ಭಾರದಲ್ಲಿ ಶ್ರೀರಾಮನ ಆಶೀರ್ವಾದವಿಲ್ಲದೇ ಯಾವುದೇ ಕಾರ್ಯ ಸಾಧ್ಯವಾಗದು ಎಂದು ಉತ್ತರಪ್ರದೇಶ ...

news

ಶಶಿಕಲಾ ನಿವಾಸದಲ್ಲಿ 1430 ಕೋಟಿ ಮೌಲ್ಯದ ಚಿನ್ನ, ವಜ್ರ, ನಗದು ಹಣ ಪತ್ತೆ

ಚೆನ್ನೈ: ಜೈಲಿನಲ್ಲಿರುವ ಎಐಎಡಿಎಂಕೆ ನಾಯಕ ವಿ.ಕೆ. ಶಶಿಕಲಾ ಮತ್ತು ಜಯಾ ಟಿವಿ ಕುಟುಂಬದ ಒಡೆತನದ ಆವರಣದಲ್ಲಿ ...

Widgets Magazine