ಹಣಬಲ, ಅಧಿಕಾರಬಲದಿಂದ ಕಾಂಗ್ರೆಸ್ ಗೆಲುವು: ಶ್ರೀನಿವಾಸ್ ಪ್ರಸಾದ್

ಮೈಸೂರು, ಗುರುವಾರ, 13 ಏಪ್ರಿಲ್ 2017 (14:24 IST)

Widgets Magazine

ಹಣಬಲ, ಅಧಿಕಾರದ ಬಲದಿಂದ ಕಾಂಗ್ರೆಸ್ ಚುನಾವಣೆ ಗೆದ್ದಿದೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. 
 
ಚುನಾವಣೆಗೆ ಎರಡು ದಿನ ಮುಂಚೆ ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಪೊಲೀಸ್ ಬಲವನ್ನು ಬಳಸಿಕೊಂಡು 1.25 ಲಕ್ಷ ಜನರಿಗೆ ಮನೆ ಮನೆಗೆ ಹಣ ಹಂಚುವಲ್ಲಿ ನೆರವಾಗಿರುವುದು ವರದಿಯಾಗಿದೆ ಎಂದು ಆರೋಪಿಸಿದ್ದಾರೆ. 
 
ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ. ಆದರೆ, ಚುನಾವಣೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. 13 ಚುನಾವಣೆಗಳನ್ನು ಎದುರಿಸಿದ್ದೇನೆ ಇನ್ನಷ್ಟು ಚುನಾವಣೆ ಎದುರಿಸುವ ಇಚ್ಚೆ ಹೊಂದಿಲ್ಲ ಎಂದು ಶ್ರಿನಿವಾಸ್ ಪ್ರಸಾದ್ ತಿಳಿಸಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅವರ ಸಂಪುಟದ ಸದಸ್ಯರು ತಮ್ಮ ಅಧಿಕಾರ ಬಲವನ್ನು ಬಳಸಿಕೊಂಡು ಮತದಾರರನ್ನು ವಂಚಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಜೆಪಿ ಅಹಂಗೆ ಗರ್ವಭಂಗವಾಗಿದೆ: ಮಲ್ಲಿಕಾರ್ಜುನ್ ಖರ್ಗೆ

ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ಅಹಂಗೆ ಗರ್ವಭಂಗವಾಗಿದೆ ಎಂದು ...

news

ಡಿ.ಕೆ.ಶಿವಕುಮಾರ್‌ರಿಂದ ಬಿಎಸ್‌ವೈ, ಶೋಭಾ ಕರಂದ್ಲಾಜೆ ರಕ್ಷಣೆ: ಕುಮಾರಸ್ವಾಮಿ

ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ...

news

ಇನ್ಮುಂದೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ: ಶ್ರೀನಿವಾಸ ಪ್ರಸಾದ್ ಘೋಷಣೆ

ನಂಜನಗೂಡು ಉಪಚುನಾವಣೆಯಲ್ಲಿ ಸೋಲನುಭವಿಸಿರುವ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಇನ್ಮುಂದೆ ಚುನಾವಣೆಗಳಲ್ಲಿ ...

news

ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಅಭಿನಂದನೆ

ಬೆಂಗಳೂರು: ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದ್ದರಿಂದ ಎಐಸಿಸಿ ...

Widgets Magazine