Widgets Magazine
Widgets Magazine

ಆರೋಪ ಸಾಬೀತಾದ್ರೆ ರಾಜೀನಾಮೆ: ಯಡಿಯೂರಪ್ಪಗೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲ್

ಬೆಂಗಳೂರು, ಶುಕ್ರವಾರ, 27 ಜನವರಿ 2017 (12:35 IST)

Widgets Magazine

ಐಟಿ ದಾಳಿ ವೇಳೆ ಅಕ್ರಮ ಸಂಪತ್ತು ಪತ್ತೆಯಾಗಿರುವ ಕುರಿತು ಮಾಡಿರುವ ಆರೋಪ ಸಾಬೀತಾದರೆ ನನ್ನ ಹುದ್ದೆಗೆ ರಾಜೀನಾಮೆ ನೀಡುವೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬಾಳ್ಕರ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಸವಾಲ್ ಎಸೆದಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌರ ವಿದ್ಯುತ್ ಯೋಜನೆ ನ್ಯಾಯಯುತವಾಗಿದೆ. ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಆರೋಪ ಸಾಬೀತಾದರೇ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದರು. 
 
ಐಟಿ ಅಧಿಕಾರಿಗಳು ದಾಳಿ ನಡೆಸಿರುವುದು ನಿಜ. ಅವರು ಕೇಳಿದ ದಾಖಲೆಗಳನ್ನು ಒದಗಿಸಲಾಗಿದೆ. ನಾನಾಗಲೀ, ನಮ್ಮ ಕುಟುಂಬ ವರ್ಗದವರಾಗಲಿ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ವಿಚಾರಣೆಯ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹೇಳಿದರು. 
 
ಬೆಳಗಾವಿ ನಗರದಲ್ಲಿರುವ ಲಕ್ಷ್ಮೀ ಹೆಬಾಳ್ಕರ್, ಗೋಕಾಕ್ ಪಟ್ಟಣದಲ್ಲಿರುವ ಸಚಿವ ರಮೇಶ್ ಜಾರಕಿಹೊಳಿ, ಸಹೋದರ ಲಖನ್ ಜಾರಕಿಹೊಳಿ, ಆಪ್ತ ಅಲಿ ಅತ್ತಾರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವೇದ್ ಮುಲ್ಲಾ ನಿವಾಸದ ಮೇಲೆ ದಾಳಿ ನಡೆದಿತ್ತು. 
 
ಕಾರ್ಖಾನೆಗಳ ವ್ಯವಹಾರ ಹಾಗೂ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು ಎಂದು ಹೇಳಲಾಗುತ್ತಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಜೆಡಿಎಸ್ ಪಕ್ಷ ಸೇರ್ಪಡೆಯಾಗುವುದು ವದಂತಿ: ಸತೀಶ್ ಜಾರಕಿಹೊಳಿ ಸ್ಪಷ್ಟನೆ

ನಾನು ಜೆಡಿಎಸ್ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ ಎನ್ನುವುದು ವದಂತಿ ಅಷ್ಟೇ ಎಂದು ಮಾಜಿ ಸಚಿವ ಸತೀಶ್ ...

news

ಫೇಸ್‌ಬುಕ್ ಲೈವ್ ಗ್ಯಾಂಗ್ ರೇಪ್: ಮೂವರ ಬಂಧನ

ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಮೂವರು ದುರುಳರು, ತಮ್ಮ ಕೀಚಕ ಕೃತ್ಯವನ್ನು ಫೇಸ್‌ಬುಕ್‌ ...

news

ಫ್ರೀ ಇದ್ರೆ ಸಿಗ್ತೀರಾ ಎಂದು ಉಪನ್ಯಾಸಕಿಯರಿಗೆ ಅಶ್ಲೀಲ ಮೆಸೇಜ್: ಕಾಮುಕ ಅರೆಸ್ಟ್

ನಾಲ್ವರು ಉಪನ್ಯಾಸಕಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಕಾಮುಕ ಸೆಕ್ಯೂರಿಟಿ ಗಾರ್ಡ್‌ನನ್ನು ಪೊಲೀಸರು ...

news

ಕುಮಾರಸ್ವಾಮಿ ಬಳಿ ಟಿಕೆಟ್ ಕೇಳಲ್ಲ: ಚೆಲುವರಾಯಸ್ವಾಮಿ

ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಳಿ ಟಿಕೆಟ್ ಕೇಳಲ್ಲ. ...

Widgets Magazine Widgets Magazine Widgets Magazine