ಸಚಿವ ಸ್ಥಾನದಿಂದ ತೆಗೆದ್ರೆ ರಾಜಕೀಯಕ್ಕೆ ಗುಡ್‌ಬೈ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಭಾನುವಾರ, 26 ಫೆಬ್ರವರಿ 2017 (11:16 IST)

Widgets Magazine

ಸಚಿವರಾಗಿ ನಾಲ್ಕು ವರ್ಷ ಪೂರೈಸಿದವರಿಗೆ ಕೊಕ್ ನೀಡಲಾಗುತ್ತಿದೆ ಎನ್ನುವ ವರದಿಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ, ನನ್ನನ್ನು ಸಚಿವ ಸ್ಥಾನದಿಂದ ತೆಗೆದಲ್ಲಿ ನಿವೃತ್ತಿ ಘೋಷಿಸುತ್ತೇನೆ ಎಂದು ಗುಡುಗಿದ್ದಾರೆ. 
 
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಚಿವನಾಗಿ ಭ್ರಷ್ಟಾಚಾರರಹಿತ ಸೇವೆ ಮಾಡಿದ್ದೇನೆ. ನನ್ನ ಮೇಲೆ ಯಾವುದೇ ಆರೋಪಗಳಿಲ್ಲ. ಆದ್ದರಿಂದ, ಸಚಿವ ಸ್ಥಾನದಿಂದ ನನ್ನನ್ನು ತೆಗೆಯುವುದು ಸರಿಯಲ್ಲ ಎಂದರು. 
 
ಸಚಿವರಾಗಿದ್ದುಕೊಂಡು ಪಕ್ಷದ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಮಾಡಬಹುದು.ಆದರೆ, ಸಚಿವ ಸ್ಥಾನದಿಂದ ತೆಗೆದುಹಾಕಿದಲ್ಲಿ ಮನೆಗೆ ಹೋಗುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಕಾಂಗ್ರೆಸ್ ಹೈಕಮಾಂಡ್ ಗೆ ಸಾವಿರ ಕೋಟಿ ಕಪ್ಪ ಕೊಟ್ಟಿರುವ ವಿಚಾರ ಒಂದೆಡೆ ಆದ್ರೆ, ಇದೀಗ ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ ತರಲು ಸಮನ್ವಯ ಸಮಿತಿ ಸಜ್ಜಾಗಿದೆ. ಭಾನುವಾರದಂದು ನಡೆಯಲಿರುವ 20 ಜನ ಸದಸ್ಯರಿರುವ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಹಿರಿಯ ಸಚಿವರಿಗೆ ಗೇಟ್ ಪಾಸ್ ನೀಡಲು ಮಹತ್ವದ ಚರ್ಚೆ ನಡೆಯಲಿದೆ.
 
ಡೈರಿ ವಿವಾದ ಭುಗಿಲೆದ್ದಿರುವ ಮಧ್ಯೆ ಇದೀಗ ಸಚಿವರನ್ನು ಕೈ ಬಿಡುವ ಪ್ರಸ್ತಾಪ ಕಾಂಗ್ರೆಸ್ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಹಾರಾ-ಬಿರ್ಲಾ ಡೈರಿ ಬಗ್ಗೆ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ: ದಿಗ್ವಿಜಯ್ ಸಿಂಗ್

ಬೆಂಗಳೂರು: ಆಧಾರವಿಲ್ಲದ ಡೈರಿ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ತೇಜೋವಧೆ ಮಾಡುತ್ತಿರುವ ಬಿಜೆಪಿ ...

news

ಕಾಂಗ್ರೆಸ್ ವಿರುದ್ಧ ಬಿಜೆಪಿಯಿಂದ ಷಡ್ಯಂತ್ರ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಡೈರಿ ಆರೋಪ ಸಂಬಂಧ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ...

news

ನಕಲಿ ಡೈರಿ ಬಗ್ಗೆ ಸಿಬಿಐ ತನಿಖೆಯಾಗಲಿ: ಲೆಹರ್ ಸಿಂಗ್

ಬೆಂಗಳೂರು: ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಬಹಿರಂಗವಾದ ಡೈರಿಯ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದು ಬಿಜೆಪಿ ...

news

ಇನ್ನೂ ಸಿಎಂ ಸಿದ್ದರಾಮಯ್ಯ ಮೌನವಾಗಿರುವುದು ಸರಿಯಲ್ಲ: ಈಶ್ವರಪ್ಪ

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ನೀಡಿದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ...

Widgets Magazine Widgets Magazine