ಬಿಜೆಪಿ ಡೈರಿ ಬಿಡುಗಡೆಗೆ ನಾನು ಸಿದ್ಧ: ಕುಮಾರಸ್ವಾಮಿ

ಕೊಡಗು, ಭಾನುವಾರ, 26 ಫೆಬ್ರವರಿ 2017 (17:23 IST)

ರಾಜ್ಯದ ಬಿಜೆಪಿ ನಾಯಕರು ಬಿಜೆಪಿ ಹೈಕಮಾಂಡ್‌ಗೆ ಚೆಕ್ ಮೂಲಕ ಕಪ್ಪ ಸಲ್ಲಿಸಿರುವ ದಾಖಲೆಗಳು ನನ್ನ ಬಳಿಯಿದ್ದು, ಅಂತಹ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತವಾದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
 
ಬಿಜೆಪಿ ನಾಯಕರು ಕ್ರಮ ಕೈಗೊಂಡರೆ ಮಾತ್ರ ದಾಖಲೆಗಳನ್ನು ಬಿಡುಗಡೆ ಮಾಡ್ತೇನೆ. ಕೇವಲ ಪ್ರಚಾರಕ್ಕಾಗಿ ದಾಖಲೆಗಳನ್ನು ಬಿಡುಗಡೆ ಮಾಡ್ತಿಲ್ಲ ಎಂದು ಸ್ಪಷ್ಟಪಡಿಸಿದರು.
 
ಎರಡು ರಾಜಕೀಯ ಪಕ್ಷಗಳ ನಾಯಕರು ದರೋಡೆಕೋರರೇ ಆಗಿದ್ದಾರೆ. ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಹೈಕಮಾಂಡ್‌ಗೆ ರವಾನಿಸುತ್ತಿದ್ದಾರೆ. ಇಂತಹ ಪಕ್ಷಗಳಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದರು. 
 
ಬಿಜೆಪಿ ಹೈಕಮಾಂಡ್‌, ರಾಜ್ಯ ಘಟಕದ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಡೈರಿ ಬಿಡುಗಡೆ ಮಾಡಿ ಏನು ಪ್ರಯೋಜನ?ಬಿಜೆಪಿ ಹೈಕಮಾಂಡ್ ಕ್ರಮ ಕೈಗೊಳ್ಳುವ ಭರವಸೆ ನೀಡಿದಲ್ಲಿ ಬಿಜೆಪಿ ಡೈರಿ ಬಿಡುಗಡೆ ಮಾಡಲು ನಾನು ಸಿದ್ದ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಕುಮಾರಸ್ವಾಮಿ ಬಿಜೆಪಿ ಡೈರಿ ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯ Kumarswamy Yeddyurappa Bjp Dairy Cm Siddaramayya

ಸುದ್ದಿಗಳು

news

ಸರಕಾರದ ಕೆಲಸಕ್ಕೂ ಸಿದ್ದ, ಪಕ್ಷದ ಕೆಲಸಕ್ಕೂ ಬದ್ಧ : ಸಚಿವ ಅಂಜನೇಯ

ಬೆಂಗಳೂರು: ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇನೆ. ಸಚಿವರನ್ನು ತೆಗೆಯುವುದು ಬಿಡುವುದು ...

news

ಸಹಾರಾ-ಬಿರ್ಲಾ ಡೈರಿ ಬಗ್ಗೆ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ: ದಿಗ್ವಿಜಯ್ ಸಿಂಗ್

ಬೆಂಗಳೂರು: ಆಧಾರವಿಲ್ಲದ ಡೈರಿ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ತೇಜೋವಧೆ ಮಾಡುತ್ತಿರುವ ಬಿಜೆಪಿ ...

news

ಕಾಂಗ್ರೆಸ್ ವಿರುದ್ಧ ಬಿಜೆಪಿಯಿಂದ ಷಡ್ಯಂತ್ರ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಡೈರಿ ಆರೋಪ ಸಂಬಂಧ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ...

news

ನಕಲಿ ಡೈರಿ ಬಗ್ಗೆ ಸಿಬಿಐ ತನಿಖೆಯಾಗಲಿ: ಲೆಹರ್ ಸಿಂಗ್

ಬೆಂಗಳೂರು: ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಬಹಿರಂಗವಾದ ಡೈರಿಯ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದು ಬಿಜೆಪಿ ...

Widgets Magazine