Widgets Magazine

ಎಟಿಎಂಗೆ ಹಣ ತುಂಬಿಸುತ್ತಿದ್ದಾಗ ದರೋಡೆ: 18.5ಲಕ್ಷ ಹಣ ದೋಚಿದ ಕಳ್ಳರು

ಬೆಂಗಳೂರು, ಸೋಮವಾರ, 30 ಅಕ್ಟೋಬರ್ 2017 (15:46 IST)

Widgets Magazine

ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಎಟಿಎಂ ಮಷೀನ್ ನಲ್ಲಿರುವ ಹಣ ದರೋಡೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚು ನಡೆಯುತ್ತಿವೆ. ಇಂದು ಸಹ ಎಟಿಎಂಗೆ ಹಣ ತುಂಬಿಸುತ್ತಿದ್ದ ವೇಳೆ ದುಷ್ಕರ್ಮಿಗಳು ದಾಳಿ ಮಾಡಿ ದರೋಡೆ ಮಾಡಿರುವ ಘಟನೆ ಜಾಲಹಳ್ಳಿ ಕ್ರಾಸ್‌ ನಲ್ಲಿ ನಡೆದಿದೆ.


ಜಾಲಹಳ್ಳಿ ಕ್ರಾಸ್‌ ಬಳಿಯ ಶಾಖೆ ಎಟಿಎಂಗೆ ಬ್ಯಾಂಕ್ ಸಿಬ್ಬಂದಿ ಹಣ ತುಂಬಿಸುತ್ತಿದ್ದ ವೇಳೆ ಬೈಕ್‌ ನಲ್ಲಿ ಬಂದ ದರೋಡೆಕೋರರು ಹಣ ತುಂಬಿಸುತ್ತಿದ್ದ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾರೆ. ಪ್ರತಿ ದಾಳಿಗೆ ಮುಂದಾದ ಕಸ್ಟೋಡಿಯನ್‌ ಗೆ ಚಾಕುವಿನಿಂದ ಇರಿದು 18.5 ಲಕ್ಷ ರೂ. ಹಣ ದೋಚಿದ್ದಾರೆ ಎನ್ನಲಾಗಿದೆ.

ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಾಗರ್‌ ಹಾಗೂ ಮೋಹನ್‌ ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹಿಂದುಗಳಿಗೆ ಭಾರತ ಏಕಮಾತ್ರ ದೇಶವಾಗಿದೆ, ಮುಸ್ಲಿಮರಿಗೆ 50 ಕ್ಕೂ ಹೆಚ್ಚು ದೇಶಗಳಿವೆ: ಶಿವಸೇನೆ

ಮುಂಬೈ: ಕೇಂದ್ರದಲ್ಲಿ ಹಿಂದುತ್ವದ ಪರ ಸರಕಾರವಿದ್ದರೂ ಅಯೋಧ್ಯೆಯ ರಾಮಮಂದಿರ ಮತ್ತು ಕಾಶ್ಮಿರಿ ಪಂಡಿತರ ...

news

ಮಗುವಿಗೆ ವಿಷಪೂರಿತ ಚಿಪ್ಸ್ ನೀಡಿ ಕೊಂದ ಆಶಾ ಕಾರ್ಯಕರ್ತೆ

ಆಂಧ್ರ ಪ್ರದೇಶ: ಆಶಾ ಕಾರ್ಯಕರ್ತೆ ನೀಡಿದ ಚಿಪ್ಸ್ ಸೇವಿಸಿ 4 ವರ್ಷದ ಮಗು ಮೃತಪಟ್ಟಿರುವ ಘಟನೆ ಪ್ರಕಾಶಂ ...

news

ಪತ್ರಕರ್ತರ ಪ್ರಶ್ನೆಗೆ ಸಿಟ್ಟಾಗಿ ಕೈಮುಗಿದು ಹೊರ ನಡೆದ ಅನುಪಮಾ ಶೆಣೈ

ಬಳ್ಳಾರಿ: ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಟ್ಟಾದ ಮಾಜಿ ಡಿವೈಎಸ್ಪಿ ಅನುಪಮಾ ಶೇಣೈ ಕೈ ಮುಗಿದು ಅರ್ಧಕ್ಕೆ ...

news

ಬಾಯ್‌ಫ್ರೆಂಡ್‌ನನ್ನು ಪತ್ತೆ ಹಚ್ಚಲು ಗ್ಯಾಂಗ್‌ರೇಪ್ ಕೇಸ್ ದಾಖಲಿಸಿದ ಯುವತಿ

ಪುಣೆ: ಫೋನ್ ಕರೆಗಳನ್ನು ಸ್ವೀಕರಿಸದೇ ನಾಪತ್ತೆಯಾಗಿದ್ದ ಬಾಯ್‌ಫ್ರೆಂಡ್‌ ವಂಚನೆಯಿಂದ ಆಕ್ರೋಶಗೊಂಡ 24 ...

Widgets Magazine Widgets Magazine