ಈಗ ಚುನಾವಣೆ ನಡೆದ್ರೆ ಕೇವಲ 80 ಸೀಟು ಮಾತ್ರ ಗೆಲ್ಲೋದು: ಅಮಿತ್ ಶಾ

ಬೆಂಗಳೂರು, ಭಾನುವಾರ, 13 ಆಗಸ್ಟ್ 2017 (13:22 IST)

ವಿಧಾನಸಭೆ ಚುನಾವಣೆ ಅವಧಿಗಿಂತ ಮುಂಚೆ ನಡೆದಲ್ಲಿ ಬಿಜೆಪಿ ಪಕ್ಷಕ್ಕೆ ಕೇವಲ 80 ಸೀಟುಗಳು ಮಾತ್ರ ಲಭಿಸಲಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗುಡುಗಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಬಿ.ಎಸ್.ಮತ್ತು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ನಡುವಿನ ವೈಮನಸ್ಸು ಪರಸ್ಪರ ಆರೋಪ ಪ್ರತ್ಯಾರೋಪಗಳು ಪಕ್ಷದ ಮೇಲೆ ನೇರ ಪರಿಣಾಮ ಬೀರಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಉಭಯ ನಾಯಕರು ಕೂಡಲೇ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ತೊರೆದು ಪಕ್ಷವನ್ನು ಬೇರು ಮಟ್ಟದಿಂದ, ಬೂತ್ ಮಟ್ಟದಿಂದ ಸಂಘಟಿಸಲು ಮುಂದಾಗಬೇಕು. ಭಿನ್ನಾಭಿಪ್ರಾಯಗಳನ್ನು ಹೈಕಮಾಂಡ್ ಬಗೆಹರಿಸಲಿದೆ. ಹೈಕಮಾಂಡ್ ಯಾವತ್ತೂ ಅಶಿಸ್ತು ಸಹಿಸುವುದಿಲ್ಲ. ಅಶಿಸ್ತು ತೋರುವವರ ವಿರುದ್ಧ ಕಠಿಣ ಕ್ರಮ ಖಚಿತ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.
 
ನಾಯಕರಲ್ಲಿನ ಭಿನ್ನಾಭಿಪ್ರಾಯಗಳು ಪಕ್ಷದ ಸೋಲಿಗೆ ಕಾರಣವಾಗುತ್ತವೆ. ಬಿಜೆಪಿಯ ಪ್ರತಿಯೊಬ್ಬ ನಾಯಕರು ಮತ್ತು ಕಾರ್ಯಕರ್ತರು ಒಂದಾಗಿ ಮುಂಬರುವ ವಿಧಾನಸಭೆ ಚುನಾವಣೆಗಾಗಿ ಸಿದ್ದತೆ ನಡೆಸಬೇಕು ಎಂದು ಕರೆ ನೀಡಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಬಿಜೆಪಿ ಅಮಿತ್ ಶಾ ಯಡಿಯೂರಪ್ಪ ಈಶ್ವರಪ್ಪ Bjp Yeddyurappa Eashwarappa Amit Sha

ಸುದ್ದಿಗಳು

news

ಪ್ರಚೋದನೆ ಮಾಡಲು ಅಮಿತ್ ಶಾ ಕರ್ನಾಟಕಕ್ಕೆ : ದಿನೇಶ್ ಗುಂಡೂರಾವ್

ಬೆಂಗಳೂರು: ವಿಸ್ತಾರಕರಿಂದ ಮನೆ ಮನೆಗೆ ಸುಳ್ಳು ವದಂತಿಗಳನ್ನು ಮುಟ್ಟಿಸಿ, ಜನರಿಗೆ ಪ್ರಚೋದನೆ ಮಾಡಲು ...

news

ಅಮಿತ್ ಶಾ ರಾಜ್ಯದಲ್ಲಿಯೇ ಠಿಕಾಣಿ ಹೂಡಲಿ, ನಷ್ಟವಿಲ್ಲ: ಸಿಎಂ ವಾಗ್ದಾಳಿ

ಕಲಬುರಗಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೇಕಿದ್ದಲ್ಲಿ ಕರ್ನಾಟಕದಲ್ಲಿಯೇ ಠಿಕಾಣಿ ಹೂಡಲಿ. ...

news

ಆದಿಚುಂಚನಗಿರಿಮಠಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ

ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ...

news

ಪಾರ್ಕ್ ಅವಘಡ: ಬಾಲಕಿ ತಲೆಯ ಮೇಲೆ ರಾಡ್ ಬಿದ್ದು ಸಾವು ......

ಬೆಂಗಳೂರು: ಪ್ರಿಯಾ ಎನ್ನುವ ಬಾಲಕಿಯೊಬ್ಬಳು ಪಾರ್ಕ್‌ನಲ್ಲಿ ಆಟವಾಡುತ್ತಿದ್ದಾಗ ಆಕೆಯ ತಲೆಯ ಮೇಲೆ ರಾಡ್ ...

Widgets Magazine