Widgets Magazine
Widgets Magazine

5 ಲಕ್ಷ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದ್ದರೂ ರಾಜೀನಾಮೆ: ಸಚಿವ ಜಾರಕಿಹೋಳಿ

ಬೆಂಗಳೂರು, ಬುಧವಾರ, 25 ಜನವರಿ 2017 (15:24 IST)

Widgets Magazine

ಐಟಿ ದಾಳಿ ವೇಳೆ ನನ್ನ ಮನೆಯಲ್ಲಿ 41 ಲಕ್ಷ ರೂಪಾಯಿ ಪತ್ತೆಯಾಗಿರುವ ಸಂಗತಿ ನಿಜವಾದರೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಕನಿಷ್ಠ 5 ಲಕ್ಷ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದ್ದರೂ ಸಹ ಸಚಿವ ಸ್ಥಾನ ಹಾಗೂ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಸವಾಲ್ ಎಸೆದಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಐಟಿ ದಾಳಿಯ ವೇಳೆ ಸಿಕ್ಕಿರುವುದು 41 ಸಾವಿರ ರೂಪಾಯಿ ಮಾತ್ರ. 41 ಲಕ್ಷ ಅಲ್ಲ.  ಒಂದು ವೇಳೆ 41 ಲಕ್ಷ ರೂಪಾಯಿ ಪತ್ತೆಯಾಗಿರುವ ಸಂಗತಿ ನಿಜವಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು. 
 
ಏಕಾಕಾಲಕ್ಕೆ ಬೆಳಗಾವಿಯ 16 ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಟಿ ಇಲಾಖೆಯ ಮೇಲೆ ವಿಶ್ವಾಸ ಇದೆ. ಆದರೂ, ಇಲ್ಲದ ಆಸ್ತಿ ಕುರಿತು ಏಕೆ ಪ್ರಚಾರವಾಗುತ್ತಿದೆ ಗೊತ್ತಿಲ್ಲವೆಂದು ಹೇಳಿದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನನ್ನ ರಾಜೀನಾಮೆ ಬಯಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ಆದರೆ, ಈವರೆಗೂ ರಾಜೀನಾಮೆ ಕೇಳಿಲ್ಲ, ಕೇಳುವುದು ಇಲ್ಲ ಎಂದು ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಐಟಿ ದಾಳಿ Resign Illigal Asset Ramesh Jarakiholi

Widgets Magazine

ಸುದ್ದಿಗಳು

news

ಸಂಸತ್ತಿನಲ್ಲಿ ಸಂಸದೆಗೆ ಲೈಂಗಿಕ ದೌರ್ಜನ್ಯ; ಆತ್ಮಹತ್ಯೆ ಬೆದರಿಕೆ

ಪಾಕಿಸ್ತಾನದ ಸಂಸದೆಯೋರ್ವರು ಸಂಸತ್ತಿನಲ್ಲಿಯೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ. ಇದರಿಂದ ಬೇಸತ್ತಿರುವ ...

news

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ನಿಲ್ಲುವುದಿಲ್ಲ: ವಿರೂಪಾಕ್ಷ

ಯಾವುದೇ ಕಾರಣಕ್ಕೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ನಿಲ್ಲುವುದಿಲ್ಲ ಎಂದು ಬ್ರಿಗೇಡ್ ರಾಜ್ಯಾಧ್ಯಕ್ಷ ...

news

ಪ್ರಿಯಾಂಕಾ ಹೇಳಿಕೊಳ್ಳುವಷ್ಟು ಸುಂದರಿಯೇನಲ್ಲ: ವಿನಯ್ ಕಟಿಯಾರ್

ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ಅವರನ್ನು ಸ್ಟಾರ್ ಪ್ರಚಾರಕಿಯಾಗಿ ಬಳಸಿಕೊಳ್ಳುತ್ತಿರುವ ಕುರಿತಂತೆ ...

news

ಕೆ.ಎಸ್.ಈಶ್ವರಪ್ಪ ವಿರುದ್ಧ ಸಹಿ ಸಂಗ್ರಹ ನಿಜ: ಬಿಜೆಪಿ ಶಾಸಕ

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಬಿಎಸ್‌ವೈ ಬೆಂಬಲಿಗರ ಸಹಿ ಸಂಗ್ರಹ ...

Widgets Magazine Widgets Magazine Widgets Magazine