ಗಣಪತಿ ಸಾವಿಗೆ ನ್ಯಾಯ ಮುಖ್ಯವೋ, ರಾಜೀನಾಮೆ ಮುಖ್ಯವೋ: ಬಿಎಸ್‌ವೈಗೆ ಚಾರ್ಜ್ ತರಾಟೆ

ಬೆಂಗಳೂರು, ಮಂಗಳವಾರ, 12 ಸೆಪ್ಟಂಬರ್ 2017 (15:32 IST)

ಡಿವೈಎಸ್‌ಪಿ ಎಂ.ಕೆ.ಗಣಪತಿ ಸಾವಿಗೆ ನ್ಯಾಯ ಮುಖ್ಯವೋ ರಾಜೀನಾಮೆ ಮುಖ್ಯವೋ ಎಂದು ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಪದೇ ಪದೇ ರಾಜೀನಾಮೆ ಕೇಳುತ್ತಿರುವುದು ಯಾವ ನ್ಯಾಯ? ಎಂ.ಕೆ.ಗಣಪತಿ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳ ಒತ್ತಡ ಹೇರಲಾಗುತ್ತದೆ ಎನ್ನುವ ಆರೋಪಿಗಳಿಂದಾಗಿ ಈಗಾಗಲೇ ನಾನು ಒಂದು ಬಾರಿ ರಾಜೀನಾಮೆ ನೀಡಿದ್ದೇನೆ. ಮತ್ತೆ ರಾಜೀನಾಮೆ ಕೇಳುವುದು ಯಾವ ನ್ಯಾಯ ಎಂದು ತಿರುಗೇಟು ನೀಡಿದ್ದಾರೆ.
 
ಕೇಂದ್ರದಲ್ಲಿ ಅನೇಕ ಬಿಜೆಪಿ ನಾಯಕರುಗಳ ಮೇಲೆ ಸಿಬಿಐ ತನಿಖೆ ನಡೆಯುತ್ತಿದೆ. ಬಿಜೆಪಿ ನಾಯಕರು ಮೊದಲು ಅವರ ರಾಜೀನಾಮೆ ಪಡೆಯಲಿ. ನಂತರ ನನ್ನ ರಾಜೀನಾಮೆ ಕೇಳಲಿ ಎಂದು ತಿರುಗೇಟು ನೀಡಿದ್ದಾರೆ.
 
ಸುಪ್ರೀಂಕೋರ್ಟ್ ಎಂ,.ಕೆ. ಗಣಪತಿ ಪ್ರಕರಣನ್ನು ಸಿಬಿಐಗೆ ವಹಿಸಿದೆ. ಸಿಬಿಐ ಅಧಿಕಾರಿಗಳು ಮೂರು ತಿಂಗಳಲ್ಲಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಲಿದ್ದಾರೆ.ನಾನು ತಪ್ಪಿತಸ್ಥ ಎಂದು ಸಾಬೀತಾದಲ್ಲಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದ ಎಂದು ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ಘೋಷಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಡೀ ದೇಶದಲ್ಲಿಯೇ ಸಿಎಂ ಸಿದ್ದರಾಮಯ್ಯ ಬಡವರ ಸಿಎಂ: ಸಚಿವ ಲಾಡ್

ಬಳ್ಳಾರಿ: ಇಡೀ ದೇಶದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಸಿಎಂ ಎನ್ನುವ ಹೆಗ್ಗಳಿಕೆಗೆ ...

news

ಸಚಿವ ಎಂ.ಬಿ.ಪಾಟೀಲರನ್ನ ಮಂಪರು ಪರೀಕ್ಷೆಗೊಳಪಡಿಸಿ: ವಿ.ಸೋಮಣ್ಣ

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ವೀರಶೈವ ಲಿಂಗಾಯತರ ಮಧ್ಯೆ ಒಡಕು ಮೂಡಿಸಲು ಸಚಿವ ಎಂ.ಬಿ.ಪಾಟೀಲ್ ...

news

ಎಲ್ಲೆಂದರಲ್ಲಿ ಕಾರ್ಡ್ ಸ್ವೈಪ್ ಮಾಡ್ತೀರಾ..? ಹಾಗಿದ್ದರೆ ಈ ಸುದ್ದಿ ತಪ್ಪದೇ ನೋಡಿ

ಪುಣೆಯ ವ್ಯಕ್ತಿಯೊಬ್ಬ ಟೋಲ್ ಗೇಟ್`ನಲ್ಲಿ ಕಾರ್ಡ್ ಸ್ವೈಪ್ ಮಾಡಿ 87,000 ರೂ. ಕಳೆದುಕೊಂಡಿರುವ ಘಟನೆ ...

news

ಲಿಂಗಾಯುತ-ವೀರಶೈವ ಎರಡು ಪದಗಳ ಅರ್ಥ ಒಂದೇ: ಸಿದ್ದಗಂಗಾಮಠ

ಬೆಂಗಳೂರು: ವೀರಶೈವ ಪದವನ್ನು ವಿದ್ಯಾವಂತರು ಬಳಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಲಿಂಗಾಯುತ ಪದ ...

Widgets Magazine