Widgets Magazine
Widgets Magazine

ಪ್ರಭಾಕರ್ ಭಟ್ ಬಂಧಿಸಿದ್ರೆ ಇಡೀ ರಾಜ್ಯ ಬೆಂಕಿ ಹೊತ್ತಿ ಉರಿಯುತ್ತೆ: ಯಡಿಯೂರಪ್ಪ

ಮಂಗಳೂರು, ಗುರುವಾರ, 13 ಜುಲೈ 2017 (15:11 IST)

Widgets Magazine

ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್ ಬಂಧಿಸಿದ್ರೆ ಇಡೀ ರಾಜ್ಯ ಹೊತ್ತಿ ಉರಿಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಗುಡುಗಿದ್ದಾರೆ.
 
ಒಂದು ವೇಳೆ ಸರಕಾರ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಿದಲ್ಲಿ ಕಾರ್ಯಕರ್ತರು ರಾಜ್ಯಕ್ಕೆ ಬೆಂಕಿ ಬೀಳುವಂತೆ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
 
ಗೃಹ ಸಚಿವರ ಸಲಹೆಗಾರ, ಮಹಾನುಭಾವ ಕೆಂಪಯ್ಯನವರನ್ನು ಸರಕಾರ ವಾಪಸ್ ಕರೆಸಿಕೊಳ್ಳಲಿ. ಅವರು ಬೆಂಕಿ ಆರಿಸಲು ಬಂದಿಲ್ಲ. ಬೆಂಕಿ ಹಚ್ಚಲು ಬಂದಿದ್ದಾರೆ. ಉನ್ನತ ಹುದ್ದೆಯಲ್ಲಿರುವ ಪೊಲೀಸ್ ಅಧಿಕಾರಿಗೆ ಮಂಗಳೂರು ನಗರದ ಜವಾಬ್ದಾರಿ ನೀಡಿ ಎಂದು ತಿಳಿಸಿದ್ದಾರೆ.
 
ಸಚಿವರಾದ ರಮಾನಾಥ್ ರೈ, ಯು.ಟಿ.ಖಾದರ್ ಅವರು ಕೂಡಾ ಮಂಗಳೂರಿಗೆ ಹೋಗುವುದು ಬೇಡ. ನಾವು ಕೂಡಾ ಒಂದೆರೆಡು ತಿಂಗಳು ಮಂಗಳೂರಿಗೆ ಕಾಲಿಡುವುದಿಲ್ಲ. ಇದರಿಂದ ಶಾಂತಿ ನೆಲೆಸುವಂತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಇದು ಶಾಂತಿ ಸಭೆಯಲ್ಲ, ಶಾಂತಿ ಕದಡುವ ಸಭೆ: ಯಡಿಯೂರಪ್ಪ

ಮಂಗಳೂರು: ಇಂದು ನಗರದಲ್ಲಿ ನಡೆಯುತ್ತಿರುವ ಸಭೆ ಶಾಂತಿ ಸಭೆಯಲ್ಲ, ಶಾಂತಿ ಕದಡುವ ಸಭೆ ಎಂದು ಬಿಜೆಪಿ ...

news

‘ತಾಕತ್ತಿದ್ದರೆ ಭಟ್ಟರನ್ನು ಒಮ್ಮೆ ಬಂಧಿಸಿ ನೋಡಿ ಏನಾಗುತ್ತದೆಂದು’

ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಿನ ನಂತರ ಮತ್ತಷ್ಟು ಉದ್ವಿಗ್ನಗೊಂಡಿರುವ ದಕ್ಷಿಣ ...

news

ನಮ್ಮನ್ನು ಬಂಧಿಸಿದ್ರೆ ಕಾಂಗ್ರೆಸ್ ಶವದ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆದಂತೆ: ಕರಂದ್ಲಾಜೆ

ಶರತ್ ಮಡಿವಾಳ ಹತ್ಯೆಯ ಹಿಂದಿರುವ ವ್ಯಕ್ತಿಗಳನ್ನು ಬಂಧಿಸದಿದ್ದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು. ...

news

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಎಸ್ಎಸ್ಎಲ್`ಸಿ ಪೂರಕ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಇವತ್ತು ಬೆಳಗ್ಗೆ ವೆಬ್ ಸೈಟ್`ನಲ್ಲಿ ಪೂರಕ ...

Widgets Magazine Widgets Magazine Widgets Magazine