ರೈಗೆ ಗೃಹಸಚಿವ ಸ್ಥಾನ ನೀಡಿದ್ರೆ ರಾಜ್ಯ ಹೊತ್ತಿ ಉರಿಯುತ್ತದೆ: ಆರ್. ಅಶೋಕ್

ಬೆಂಗಳೂರು, ಬುಧವಾರ, 26 ಜುಲೈ 2017 (16:11 IST)

Widgets Magazine

ಮಂಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ರಮಾನಾಥ್ ರೈ ಅವರಿಗೆ ಗೃಹ ಸಚಿವ ಸ್ಥಾನ ನೀಡಿದಲ್ಲಿ ಜಿಲ್ಲೆ, ರಾಜ್ಯವೇ ಹೊತ್ತಿ ಉರಿಯುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಆರ್.ಅಶೋಕ್ ಗುಡುಗಿದ್ದಾರೆ.
 
ಕರಾವಳಿ ಜಿಲ್ಲೆಯಲ್ಲಿ ನಡೆದ ಗಲಭೆಯನ್ನು ನಿಗ್ರಹಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಸಚಿವ ರಮಾನಾಥ್ ರೈ, ಇನ್ನೂ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ.
 
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಸಚಿವ ರೈಗೆ ಗೃಹ ಸಚಿವ ಸ್ಥಾನ ನೀಡಿದಲ್ಲಿ ರಾಜ್ಯದ ಕಾನೂನು ವ್ಯವಸ್ಥೆ ಅಧೋಗತಿಯಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಸಚಿವ ರಮಾನಾಥ್ ರೈ ವಿರುದ್ಧ ಕೆಲ ಮತೀಯ ಸಂಘಟನೆಗಳು ಒಂದಾಗಿ ರೈ ಅವರನ್ನು ಸೋಲಿಸಿದರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದಂತೆ ಎಂದು ರಣತಂತ್ರ ರೂಪಿಸುತ್ತಿರುವ ಹಿನ್ನೆಲೆಯಲ್ಲಿ, ರೈ ಅವರಿಗೆ ಮತ್ತಷ್ಟು ಬಲವನ್ನು ತಂದುಕೊಡಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗುತ್ತಿದೆ.
 
ಬಂಟ್ವಾಳ ಘರ್ಷಣೆಯ ಬಳಿಕ ಸಚಿವ ರಮಾನಾಥ್ ಅವರನ್ನು ಆರೆಸ್ಸೆಸ್ ಸೇರಿದಂತೆ ಕೆಲ ಹಿಂದೂ ಸಂಘಟನೆಗಳು ಟಾರ್ಗೆಟ್‌ ಮಾಡುತ್ತಿವೆ. ಕೋಮುಘರ್ಷಣೆಗಳನ್ನು ಬಲವಾಗಿ ಹತ್ತಿಕುವಂತಾಗಲು ಕಠಿಣ ಕ್ರಮ ತೆಗೆದುಕೊಳ್ಳಲು ಸಚಿವರಿಗೆ ಫ್ರೀ ಹ್ಯಾಂಡ್‌ ನೀಡಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಮಾನಾಥ್ ರೈ ಆರ್.ಅಶೋಕ್ ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯ ಬಿಜೆಪಿ Congress Bjp Ramanath Rai Cm Siddaramaiah R.ashok

Widgets Magazine

ಸುದ್ದಿಗಳು

news

ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ ಯಾರೂ ಹೇಳಿದ್ದು? : ಸಿಎಂ

ಬೆಂಗಳೂರು: ಅರಣ್ಯ ಖಾತೆ ಸಚಿವ ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ ನೀಡಲಾಗುವುದು ಎನ್ನುವ ವರದಿಗಳನ್ನು ...

news

ನಿತೀಶ್ ಕುಮಾರ್‌ನನ್ನು ಸಿಎಂ ಮಾಡಿದ್ದು ನಾನು: ಲಾಲೂ ಗುಡುಗು

ಪಾಟ್ನಾ: ನಿತೀಶ್ ಕುಮಾರ್‌ನನ್ನು ಮುಖ್ಯಮಂತ್ರಿ ಮಾಡಿದ್ದು ನಾನು ಎಂದು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ...

news

ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ...

news

ಆರೆಸ್ಸೆಸ್ ವಿರುದ್ಧ ರಮಾನಾಥ್ ರೈ ಛೂ ಬಿಡಲು ಸಿಎಂ ನಿರ್ಧಾರ

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಸಚಿವ ರಮಾನಾಥ್ ರೈಗೆ ಕಾಂಗ್ರೆಸ್ ನಾಯಕತ್ವ ನೀಡಲು ನಿರ್ಧರಿಸಲಾಗಿದ್ದು, ...

Widgets Magazine