ಮೊದ್ಲು ನೀವು ಶಾಸಕರಾಗಿ ಆಯ್ಕೆಯಾಗ್ತೀರಾ ನೋಡಿ? : ಸಿಎಂಗೆ ಕುಮಾರಸ್ವಾಮಿ ಸವಾಲ್

ಬೆಂಗಳೂರು, ಶುಕ್ರವಾರ, 14 ಜುಲೈ 2017 (13:15 IST)

ಯಡಿಯೂರಪ್ಪ, ಕುಮಾರಸ್ವಾಮಿ ಅವರಪ್ಪನಾಣೆಗೂ ಮತ್ತೊಮ್ಮೆ ಮುಖ್ಯಮಂತ್ರಿ ಆಗಲ್ಲ ಎನ್ನುವ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಮೊದ್ಲು ನೀವು ಶಾಸಕರಾಗಿ ಆಯ್ಕೆಯಾಗ್ತೀರಾ ನೋಡಿ ಎಂದು ಸವಾಲ್ ಹಾಕಿದ್ದಾರೆ.
 
ಕೆಲ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿದ್ದಾರೆ. ಭ್ರಮೆಯಲ್ಲಿ ತೇಲಾಡಬೇಡಿ ನೀವಿಬ್ಬರು ನಮ್ಮಪ್ಪನಾಣೆಗೂ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.
 
ಪರಪ್ಪನ ಅಗ್ರಹಾರದ ಡಿಐಜಿ ರೂಪಾ ಮೌಡ್ಗಿಲ್ ಮತ್ತು ಡಿಜಿ ಸತ್ಯನಾರಾಯಣ ಜಟಾಪಟಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಇಷ್ಟು ವರ್ಷ ಸೇವೆ ಸಲ್ಲಿಸಿದ್ದಾರೆ. ಸರಕಾರಿ ಅಧಿಕಾರಿಗಳು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ತಪ್ಪು ಎಂದು ಗೊತ್ತಿಲ್ಲವೇ? ಎಂದು ಕಿಡಿಕಾರಿದ್ದಾರೆ.
 
ಸರಕಾರಕ್ಕೆ ಮಾನ ಮರ್ಯಾದೆ ಇದ್ರೆ ಇಬ್ಬರು ಅಧಿಕಾರಿಗಳನ್ನು ರಜೆಯ ಮೇಲೆ ಕಳುಹಿಸಿ ತನಿಖೆ ನಡೆಸಬೇಕು. ತನಿಖಾ ವರದಿ ಬಂದ ನಂತರ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದರು.
 
ಎರಡು ರಾಷ್ಟ್ರೀಯ ಪಕ್ಷಗಳ ಬಯಲಾಟ ನೋಡುತ್ತಿದ್ದೇವೆ. ಯಾರೊಬ್ಬರು ತಮ್ಮ ಸ್ಥಾನ, ಘನತೆ, ಗೌರವಕ್ಕೆ ತಕ್ಕಂತೆ ವರ್ತಿಸುತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪ ಜೆಡಿಎಸ್ ಕಾಂಗ್ರೆಸ್ Kumarswamy Yeddyurappa Jds Congress Cm Siddaramaiah

ಸುದ್ದಿಗಳು

news

ಭಾರತದಲ್ಲಿ ಮಿಸ್ ಮಾಡಿಕೊಳ್ಳುವಂತಹದ್ದು ಏನೂ ಇಲ್ಲ: ವಿಜಯ್ ಮಲ್ಯ ದರ್ಪದ ಹೇಳಿಕೆ

ಲಂಡನ್: ಭಾರತದಲ್ಲಿ ಸಾಲ ಮಾಡಿ ಬ್ರಿಟನ್ ಗೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಮತ್ತೊಮ್ಮೆ ತಮ್ಮ ...

news

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಪ್ರಬಲ ಸ್ಫೋಟಕ ಪತ್ತೆ: ಬೆಚ್ಚಿಬಿದ್ದ ಶಾಸಕರು

ಉತ್ತರ ಪ್ರದೇಶ ವಿಧಾನಸಭೆಯ ವಿಪಕ್ಷ ನಾಯಕ ರಾಮ್ ಗೋವಿಂದ್ ಚೌಧರಿ ಕುರ್ಚಿ ಬಳಿ ಕಸ ಗುಡಿಸುವ ವೇಳೆ ...

news

ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸಿದ್ರೆ ಹಜ್ ಯಾತ್ರೆ ಬಂದ್: ಬಿಜೆಪಿ ಶಾಸಕ

ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಪಕ್ಷದ ನಾಯಕರು ಕಟುವಾದ ಮಾತುಕತೆಗಳು ಮತ್ತು ಅನಗತ್ಯ ...

news

ಭ್ರಷ್ಟ ಲಾಲೂ ಯಾದವ್ ಪುತ್ರನನ್ನು ಪದಚ್ಯುತಗೊಳಿಸಲು ನಿತೀಶ್ ಸಜ್ಜು

ಪಾಟ್ನಾ: ಬಿಹಾರದಲ್ಲಿ ಆರ್ ಜೆಡಿ ಮತ್ತು ಜೆಡಿಯು ಮಧ್ಯೆ ಬಿರುಕು ಮೂಡುವಂತಹ ಮಹತ್ವದ ನಿರ್ಧಾರ ಕೈಗೊಳ್ಳಲು ...

Widgets Magazine