ಶಾಸಕ ಸುಬ್ಬಾರೆಡ್ಡಿ ಮಾಲೀಕತ್ವದ ರೆಸ್ಟೋರೆಂಟ್ ನಲ್ಲಿ ಅಕ್ರಮ ಮದ್ಯ ಪೂರೈಕೆ

ಬಾಗೇಪಲ್ಲಿ, ಬುಧವಾರ, 17 ಜನವರಿ 2018 (11:11 IST)

ಬಾಗೇಪಲ್ಲಿ : ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಾಲೀಕತ್ವದ ರೆಸ್ಟೋರೆಂಟ್ ಒಂದರಲ್ಲಿ ಅಕ್ರಮವಾಗಿ ಮದ್ಯ ಪೂರೈಕೆ ಮಾಡುತ್ತಿರುವ ಮಾಹಿತಿ ತಿಳಿದುಬಂದಿದೆ.


ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಾಲೀಕತ್ವದ ಕೆ.ಎಲ್.ರಾಯಲ್ ಗಾರ್ಡೇನಿಯ ರೆಸ್ಟೋರೆಂಟ್ ಅನ್ನು ಗ್ರಾಮಪಂಚಾಯತ್ ನಿಂದ ಅನುಮತಿ ಪಡೆಯದೆ ಹಳೆ ಲೈಸನ್ಸ್ ನಲ್ಲೇ ಹೊಸದಾಗಿ ಶುರುಮಾಡಿದ್ದು,  ಉದ್ಘಾಟನೆಯಾದ 20 ದಿನದಲ್ಲೆ  ಅಕ್ರಮವಾಗಿ ಮದ್ಯ ಪೂರೈಕೆ ಮಾಡುತ್ತಿದೆ ಎಂಬ ಸುದ್ದಿ ಸ್ಥಳೀಯರಿಂದ ತಿಳಿದುಬಂದಿದೆ. ಮದ್ಯ ಪೂರೈಕೆಯ ದೃಶ್ಯ ಸಮೇತ ದಾಖಲೆಯನ್ನು ಸ್ಥಳೀಯರು ಸಂಗ್ರಹಿಸಿದ್ದು, ಈ ಕುರಿತು ಅಬಕಾರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

 
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಹೈವೇ ಪಕ್ಕವೇ ಮದ್ಯ ಮಾರಾಟ ಮಾಡುತ್ತಿದ್ದು, ಸಿಎಂ ದರ್ಬಾರಿನಲ್ಲಿ ಕಾಂಗ್ರೆಸ್ ಬೆಂಬಲಿತ ಶಾಸಕನ ಈ ರೀತಿಯಾದ ರಾಜ್ಯಭಾರ ನೋಡಿ ಜನಪ್ರತಿನಿಧಿಗಳಿಗೆ  ಕಾನೂನು ಅನ್ವಯವಾಗುದಿಲ್ಲವೇ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮಾಲೀಕತ್ವ ಅನುಮತಿ ಹೊಸ ಶುರು ಪೂರೈಕೆ ಕಾಂಗ್ರೆಸ್ Ownership Permission New Start Supply Congress

ಸುದ್ದಿಗಳು

news

ಶಿರಾಡಿಯಲ್ಲಿ ನಕ್ಸಲರಿಗಾಗಿ ತೀವ್ರ ಶೋಧ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮೂವರು ನಕ್ಸಲರು ಓಡಾಟ ನಡೆಸಿದ್ದಾರೆಂದು ಸ್ಥಳೀಯರು ನೀಡಿದ ಮಾಹಿತಿಯನ್ವಯ ...

news

‘ಹಜ್ ಯಾತ್ರೆಗೆ ಸಬ್ಸಿಡಿ ಕೊಡದಿದ್ದರೂ ಸಮಸ್ಯೆಯಿಲ್ಲ’

ಬೆಂಗಳೂರು: ಮುಸ್ಲಿಮರ ಪವಿತ್ರ ಧಾರ್ಮಿಕ ಸ್ಥಳ ಹಜ್ ಯಾತ್ರೆಗೆ ಕೇಂದ್ರ ಸರ್ಕಾರ ಇದುವರೆಗೆ ಕೊಡಮಾಡುತ್ತಿದ್ದ ...

news

ಹಜ್ ಯಾತ್ರೆಗೆ ಸಬ್ಸಿಡಿ ರದ್ದು-ಮುಕ್ತಾರ್ ಅಬ್ಬಾಸ್ ನಖ್ವಿ

ನವದೆಹಲಿ : ಹಜ್ ಯಾತ್ರೆಗೆ ನೀಡುವ ಸಹಾಯಧನವನ್ನು ಈ ವರ್ಷದಿಂದ ನಿಷೇಧಿಸಲಾಗಿದೆ. ಯಾತ್ರಿಗಳು ಸ್ವಂತ ...

news

ಕೊರಟಗೆರೆಯಲ್ಲಿ ಜಿ.ಪರಮೇಶ್ವರ್‌ ವಿರುದ್ಧ ಅಸಮಾಧಾನ

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ...

Widgets Magazine
Widgets Magazine