ಸಿದ್ದರಾಮಯ್ಯ ಸರಕಾರದಿಂದ ಅಕ್ರಮ ಗಣಿಗಾರಿಕೆ ಅವಕಾಶ: ಎಸ್.ಆರ್ ಹಿರೇಮಠ

ಹುಬ್ಬಳ್ಳಿ, ಶುಕ್ರವಾರ, 13 ಜುಲೈ 2018 (20:43 IST)


ರಾಜ್ಯದಲ್ಲಿ   ಹಿಂದೆ ಅಧಿಕಾರದಲ್ಲಿದ್ದ ನೇತೃತ್ವದ  ಸರ್ಕಾರ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿ ಮಲೈ ಅರಣ್ಯ ಪ್ರದೇಶದಲ್ಲಿ ಖಾಸಗಿ ಗಣಿ ಕಂಪನಿಗಳಿಗೆ ಅಕ್ರಮ ಗಣಿಗಾರಿಕೆ ಮಾಡಲು ಕಾನೂನು ಬಾಹಿರವಾಗಿ ಅವಕಾಶ ಮಾಡಿಕೊಟ್ಟಿದೆ ಅಂತ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಗಂಭೀರ ಆರೋಪ ಮಾಡಿದ್ದಾರೆ.  

ಅಕ್ರಮ ಗಣಿಗಾರಿಕೆಯಿಂದ ಅಲ್ಲಿರುವ ಸಾವಿರಾರು ವರ್ಷಗಳ ಇತಿಹಾಸ ಇರುವ ಐತಿಹಾಸಿಕ ಸ್ಮಾರಕವಾದ ಪಾರ್ವತಿ - ಕಾರ್ತಿಕೆಯನ್ ದೇಗುಲವನ್ನು ಬಳ್ಳಾರಿ ಪ್ರಮುಖ ಗಣಿ ಕಂಪನಿಗಳಾದ ಜಿಂದಾಲ್ ಮತ್ತು ಬಲ್ಡೋಟಾ ಕಂಪನಿಗಳು ಅಪೋಸನ ಪಡೆಯುತ್ತಿವೆ ಎಂದುಕಳವಳ ವ್ಯಕ್ತಪಡಿಸಿರು. ಹೀಗಾಗಿ ದೇಗುಲವನ್ನು ರಕ್ಷಿಸಲು ಸಿಇಸಿ ಸಮಾಜ ಪರಿವರ್ತನಾ ಸಮುದಾಯ ಒತ್ತಾಯಿಸಿದೆ ಎಂದರು. ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಗಸ್ಟ್‌ 18, 2017 ರಂದು ಸ್ಮಾರಕಗಳ ಇರುವ ಜಾಗದಲ್ಲಿ ಕೇವಲ 300 ಮೀಟರ್ ಅಂತರದಲ್ಲಿ  ಗಣಿಗಾರಿಕೆ ನಡೆಸಲು ಕಾಯ್ದೆಗೆ ತಿದ್ದುಪಡಿ ಮಾಡಿದೆ.

ಇದು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಹುನ್ನಾರ ಅಡಗಿದೆ. ಹಾಗಿಲ್ಲದಿದ್ದರೆ, ಸುಪ್ರೀಂ ಕೋರ್ಟ್ ತೀರ್ಪು ಮತ್ತು ನಮ್ಮದೇ ರಾಜ್ಯ ಸರ್ಕಾರ ಹಿಂದೆ ಮಾಡಿದ ಕಾನೂನು ಮುರಿದು ರೀತಿಯ ಅವಕಾಶ ಮಾಡಿಕೊಡುತ್ತಿರಲಿಲ್ಲ ಎಂದು ಹಿರೇಮಠ ಆರೋಪಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು: ಲಾಕಪ್ ಡೆತ್ ಆರೋಪ

ಬೈಕ್ ಕಳ್ಳತನ ಆರೋಪದ ಮೇಲೆ ಪೊಲೀಸ್ ಠಾಣೆಯಲ್ಲಿ ಬಂಧಿತನಾಗಿದ್ದ ಆರೋಪಿ ಅನುಮಾನಾಸ್ಪದವಾಗಿ ...

news

ವಕ್ಫ್ ಆಸ್ತಿ ಭ್ರಷ್ಟಾಚಾರ: ತನಿಖೆಗೆ ಆಗ್ರಹ

ವಕ್ಫ್ ಇಲಾಖೆಗೆ ಸೇರಿದ ಆಸ್ತಿಯನ್ನ ಮುಸ್ಲೀಂ ಸಮುದಾಯದ ಸಾರ್ವಜನಿಕ ಕೆಲಸಗಳಿಗೆ ಮಾತ್ರ ಬಳಕೆ ಆಗಬೇಕು. ...

news

ರಾಜ್ಯಾದ್ಯಂತ ಮಣ್ಣೆತ್ತಿನ ಅಮಾವಾಸ್ಯೆ ಸಡಗರ

ನಾಡಿನಾದ್ಯಂತ ಇಂದು ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಸಡಗರದಿಂದ ನಡೆದಿದೆ. ಪಾರಂಪರಿಕವಾಗಿ ಈ ಹಬ್ಬದ ಆಚರಣೆ ...

news

ಜೋಡಿ ಕೊಲೆ ಪ್ರಕರಣ: ಪಾಲಿಕೆ ಮಾಜಿ ಸದಸ್ಯ ಕೋರ್ಟಗೆ ಹಾಜರ್

ಸಾಂಸ್ಕೃತಿಕ ನಗರಿಯನ್ನು ಬೆಚ್ಚಿ ಬೀಳಿಸಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಮಾಜಿ ಸದಸ್ಯ ...

Widgets Magazine
Widgets Magazine