ಆಗಸ್ಟ್ 16ರಂದು ಇಂದಿರಾ ಕ್ಯಾಂಟೀನ್`ಗೆ ಚಾಲನೆ

ಬೆಂಗಳೂರು, ಶನಿವಾರ, 5 ಆಗಸ್ಟ್ 2017 (17:34 IST)

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್`ಗೆ ಆಗಸ್ಟ್ 16ರಂದು ಚಾಲನೆ ಸಿಗಲಿದೆ ಎಂದು ಸಿಎಂ ಹೇಳಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉದ್ಘಾಟನೆಗೆ ಆಗಮಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.


ಆಗಸ್ಟ್ 16ರಂದು ನಗರದ 125 ವಾರ್ಡ್`ಗಳಲ್ಲಿ 125 ಇಂದಿರಾ ಕ್ಯಾಂಟೀನ್ ಆರಂಭವಾಗಲಿದ್ದು, ಉಳಿದವು ಅಕ್ಟೋಬರ್ 2ಒ ಒಳಗೆ ಆರಂಭವಾಗಲಿವೆ. ಜೂನ್`ನಲ್ಲಿ ಯೋಜನೆ ಘೋಷಣೆಯಾದ ಬಳಿಕ ಅತ್ಯಂತ ವೇಗವಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ. ಉದ್ಘಾಟನೆಗೆ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ. ರಾಹುಲ್ ಗಾಂಧಿ ಬರುವ ಬಗ್ಗೆ ಇನ್ನೂ ಖಚಿತಪಡಿಸಿಲ್ಲ ಎಂದು ಹೇಳಿದ್ದಾರೆ.

ಈ ಯೋಜನೆ ಅನ್ವಯ ಪ್ರತಿನಿತ್ಯ 3 ಲಕ್ಷ ಜನರಿಗೆ ತಿಂಡಿ, ಊಟವನ್ನ ಕಡಿಮೆ ದರದಲ್ಲಿ ಅಂದರೆ 5 ರೂಪಾಯಿಗೆ ತಿಂಡಿ ಮತ್ತು 10 ರೂಪಾಯಿಗೆ ಊಟ ನೀಡಲಾಗುತ್ತದೆ. ಬಜೆಟ್`ನಲ್ಲಿ ಘೋಷಣೆಯಾಗಿದ್ದ ಈ ಯೋಜನೆಗೆ ಸರ್ಕಾರ ಭಾರೀ ಉತ್ಸುಕತೆಯಿಂದ ಜಾರಿಗೆ ತರುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಇದರಲ್ಲಿ ಇನ್ನಷ್ಟು ಓದಿ :  
ಇಂದಿರಾ ಕ್ಯಾಂಟೀನ್ ಸಿದ್ದರಾಮಯ್ಯ ರಾಹುಲ್ ಗಾಂಧಿ Indira Canteen Rahul Gandhi

ಸುದ್ದಿಗಳು

news

ಸೋನಿಯಾರಿಂದ ರಾಖಿ ಕಟ್ಟಿಸಿಕೊಳ್ಳಲಿರುವ ಗುಜರಾತ್ ಕಾಂಗ್ರೆಸ್ ಶಾಸಕರು

ಬೆಂಗಳೂರು: ಗುಜರಾತ್ ಕಾಂಗ್ರೆಸ್ ಶಾಸಕರು ನಾಳೆ ದೆಹಲಿಗೆ ತೆರಳುತ್ತಿದ್ದು, ನಾಡಿದ್ದು ರಕ್ಷ ಬಂಧನ ಅಂಗವಾಗಿ ...

news

ರಾಜರಾಜೇಶ್ವರಿ ನಗರದಿಂದ ಸ್ಪರ್ಧೆ: ಪ್ರಜ್ವಲ್ ರೇವಣ್ಣ ಇಂಗಿತ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ...

news

ಸಹೋದರಿಯ ಗೆಳತಿಯನ್ನೇ ರೇಪ್ ಮಾಡಿದ ಕಾಮುಕ ಸಹೋದರ

ಬೆಂಗಳೂರು: 19 ವರ್ಷದ ಅಂಗವಿಕಲ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

news

ಐಟಿ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಲ್ಲ: ಯಡಿಯೂರಪ್ಪ

ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಮನೆಯ ಮೇಲೆ ನಡೆದಿ ಐಟಿ ದಾಳಿಯ ಬಗ್ಗೆ ಯಾವುದೇ ...

Widgets Magazine