ಗೋಲ್‌ಮಾಲ್: ಪರಪ್ಪನ ಅಗ್ರಹಾರ ಜೈಲಿಗೆ ತನಿಖಾಧಿಕಾರಿ ಭೇಟಿ

ಬೆಂಗಳೂರು, ಬುಧವಾರ, 19 ಜುಲೈ 2017 (16:07 IST)

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಗೋಲ್‌ಮಾಲ್ ಬಗ್ಗೆ ತನಿಖೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಇಂದು ಜೈಲಿಗೆ ಭೇಟಿ ನೀಡಿದ್ದಾರೆ.
 
ತಮಿಳುನಾಡಿನ ಎಐಎಡಿಎಂಕೆ ನಾಯಕಿ ಶಶಿಕಲಾ ಮತ್ತು ಛಾಪಾ ಕಾಗದ ಹಗರಣ ರೂವಾರಿ ಕರೀಂಲಾಲ್ ತೆಲಗಿ ಕೋಟಿ ಕೋಟಿ ಹಣ ನೀಡಿ ವಿಐಪಿ ಆತಿಥ್ಯ ಪಡೆಯುತ್ತಿದ್ದಾರೆ ಎನ್ನುವ ಬಗ್ಗೆ ಕೆಲದಿನಗಳ ಹಿಂದೆ ಕಾರಾಗೃಹ ಡಿಐಜಿಯಾಗಿದ್ದ ರೂಪಾ ಸರಕಾರಕ್ಕೆ ವರದಿ ಸಲ್ಲಿಸಿದ್ದರು. 
 
ಪರಪ್ಪನ ಜೈಲಿನ ಅವ್ಯವಹಾರಗಳ ಬಗ್ಗೆ ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ವಾರದೊಳಗೆ ಪ್ರಾಥಮಿಕ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.
 
ಜೈಲಿನ ಕರ್ಮಕಾಂಡದ ತನಿಖೆ ಆರಂಭವಾಗಿದ್ದು, ತನಿಖೆಯಲ್ಲಿ ಸತ್ಯಾಂಶಗಳು ಬಹಿರಂಗವಾಗಲಿವೆಯೇ, ತಪ್ಪಿತಸ್ಥರಿಗೆ ಕಠಿಣೆ ಶಿಕ್ಷೆಯಾಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಪರಪ್ಪನ ಅಗ್ರಹಾರ ಜೈಲು ಅವ್ಯವಹಾರ ತನಿಖೆ ರೂಪಾ ಮೌಡ್ಗಿಲ್ Corruption Investigation Roopa Moudgil Parappana Agrahar Jail

ಸುದ್ದಿಗಳು

news

ರಾಜ್ಯದ ಶಿಕ್ಷಣ ಸಚಿವರಿಗೆ ಪ್ರತಿ ವರ್ಷ 5-10 ಕೋಟಿ ರೂ ಕಪ್ಪ.: ಗಂಭೀರ ಆರೋಪ

ಹೊಸಪೇಟೆ: ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ವಾರ್ಷಿಕವಾಗಿ 5-10 ಕೋಟಿ ರೂಪಾಯಿ ಕಪ್ಪವನ್ನು ಸಂದಾಯ ...

news

ವಿದ್ಯಾರ್ಥಿನಿಯರ ಜೊತೆ ಶಿಕ್ಷಕನ ರಾಸಲೀಲೆ ಬಯಲು ಮಾಡಿದ ವಿದ್ಯಾರ್ಥಿನಿ..!

ಶಿಕ್ಷಕ ವಿದ್ಯಾರ್ಥಿನಿಯರ ಜೊತೆ ನಡೆಸುತ್ತಿದ್ದ ರಾಸಲೀಲೆಯ ವಿಡಿಯೋವನ್ನ ವಿದ್ಯಾರ್ಥಿನಿಯೇ ಬಹಿರಂಗ ಮಾಡಿರುವ ...

news

ರಮಾನಾಥ್ ರೈ ಕೆಲ ಗುಂಪುಗಳ ಸಚಿವನಂತೆ ವರ್ತನೆ: ಸುರೇಶ್ ಕುಮಾರ್

ಬೆಂಗಳೂರು: ಸಚಿವ ರಮಾನಾಥ್ ರೈ ಕರಾವಳಿ ಪ್ರದೇಶದ ಕೆಲ ಗುಂಪುಗಳ ಸಚಿವನಂತೆ ವರ್ತಿಸುತ್ತಿದ್ದಾರೆ ಎಂದು ...

news

ಡಿಐಜಿ ರೂಪಾ ವರ್ಗಾವಣೆ ವಿರೋಧಿಸಿ ಬಿಎಸ್‌ವೈ ನೇತೃತ್ವದಲ್ಲಿ ಪ್ರತಿಭಟನೆ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಐಪಿಗಳಿಗೆ ಕಾನೂನುಬಾಹಿರವಾಗಿ ರಾಜಾತಿಥ್ಯ ನೀಡಲಾಗುತ್ತಿದೆ ...

Widgets Magazine