ಯೋಗೇಶ್ವರ್ ತೆಕ್ಕೆಯಲ್ಲಿದ್ದಾರಾ ಕಂಪ್ಲಿ ಶಾಸಕ ಗಣೇಶ್?

ಬೆಂಗಳೂರು, ಬುಧವಾರ, 30 ಜನವರಿ 2019 (10:56 IST)

ಬೆಂಗಳೂರು : ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ತಲೆಮೆರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್ ಅವರು ಮಾಜಿ ಶಾಸಕ ಯೋಗೇಶ್ವರ್ ತೆಕ್ಕೆಯಲ್ಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.


ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಅವರನ್ನು ಹುಡುಕಲು ಪೊಲೀಸರು ಒಟ್ಟು 4 ತಂಡಗಳನ್ನು ರಚಿಸಿ  ಸತತವಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಶಾಸಕ ಗಣೇಶ್‌ ನಾಪತ್ತೆಯಾಗಿ 10 ದಿನಗಳು ಕಳೆದರೂ, ಶಾಸಕರನ್ನು ಹುಡುಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.


ಆದರೆ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ. ಅಲ್ಲದೇ ಈ ಘಟನೆ ನಡೆದ ದಿನದಿಂದ ಯೋಗೇಶ್ವರ್‌ ಕೂಡ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಮೊಬೈಲ್‌ ಸ್ವಿಚ್‌ಆಫ್‌ ಆಗಿದೆ ಎನ್ನಲಾಗಿದೆ.


ಅಪರೇಷನ್ ಕಮಲ ಯಶಸ್ವಿಗೊಳಿಸಲು ಹಾಗೂ ತಮ್ಮ ಶತ್ರುಗಳಾದ ಡಿಕೆಶಿ ಸಹೋದರರಿಗೆ ಸರಿಯಾದ ಪಾಠ ಕಲಿಸಲು ಅವರು ಹೀಗೆ ಮಾಡಿರಬಹುದು ಎಂದು ಶಂಕಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನೋಟು ಎಸೆದ ಪೇದೆ; ವಿಡಿಯೋ ವೈರಲ್

ಮುಂಬೈ : ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಪೇದೆಯೊಬ್ಬ ...

news

ಗ್ರಾಹಕರೇ ಆನ್‍ಲೈನ್ ನಲ್ಲಿ ವಸ್ತುಗಳನ್ನು ಖರೀದಿಸುವ ಮುನ್ನ ಎಚ್ಚರ; ಮೊಬೈಲ್ ಆರ್ಡರ್ ಮಾಡಿದರೆ ಬಂದಿದ್ದೇನು ಗೊತ್ತಾ?

ಬೆಂಗಳೂರು : ಆನ್ ಲೈನ್ ನಲ್ಲಿ ಮೊಬೈಲ್ ಆರ್ಡರ್ ಮಾಡಿದ ಗ್ರಾಹಕನೊಬ್ಬನಿಗೆ ಸರ್ಫ್ ಎಕ್ಸೆಲ್ ಸೋಪ್ ಕೊಟ್ಟು ...

news

ಹೆಣ್ಣು ಮಕ್ಕಳು ಬೇಕೆಂಬ ಹಂಬಲದಿಂದ ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?

ನವದೆಹಲಿ : ಹೆಣ್ಣು ಮಕ್ಕಳು ಬೇಕೆಂಬ ಹಂಬಲದಿಂದ ವ್ಯಕ್ತಿಯೊಬ್ಬ ಇಬ್ಬರು ಅಪ್ರಾಪ್ತೆಯರನ್ನು ಕಿಡ್ನಾಪ್ ...

news

ಅನ್ನ ಹಾಕಿದ ಮಹಿಳೆಯ ಮಾನ ಕಾಪಾಡಿದ ಬೀದಿ ನಾಯಿ

ಭೋಪಾಲ್ : ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಅದಕ್ಕೆ ಒಂದು ಹಿಡಿ ಅನ್ನ ಹಾಕಿದರೆ ಅದು ಅನ್ನ ಹಾಕಿದವರ ...

Widgets Magazine