ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧ ಐಟಿ ದಾಳಿ: ಅನಂತ್ ಕುಮಾರ್ ಸಮರ್ಥನೆ

ಬೆಂಗಳೂರು, ಗುರುವಾರ, 3 ಆಗಸ್ಟ್ 2017 (13:25 IST)

ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ಐಟಿ ದಾಳಿ ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧವಾಗಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಮತ್ತು ಕಪ್ಪುಹಣದ ವಿರುದ್ಧ ದಾಳಿ ನಡೆಸುತ್ತಿರುವುದರಿಂದ ಅದನ್ನು ಯಾರೂ ವಿರೋಧಿಸಬಾರದು ಎಂದು ತಿಳಿಸಿದ್ದಾರೆ.
 
ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ಆದಾಯ ತೆರಿಗೆ ದಾಳಿ ಅವರ ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದೆ. ಅವರ ನಿವಾಸದ ಮೇಲೆ ನಡೆದ ಐಟಿ ದಾಳಿಗೂ ರೆಸಾರ್ಟ್‌ನಲ್ಲಿರುವ ಗುಜರಾತ್ ಕಾಂಗ್ರೆಸ್ ಶಾಸಕರಿಗೂ ಯಾವುದೇ ಸಂಬಂಧವಿಲ್ಲ ಎಂದರು.
 
ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ಐಟಿ ದಾಳಿಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೈವಾಡವಿದೆ ಎನ್ನುವ ಕಾಂಗ್ರೆಸ್ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡಿಕೆಶಿ ಮನೆಯ 4 ಲಾಕರ್`ಗಳನ್ನ ಓಪನ್.. ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು..?

ಸತತ 2ನೇ ದಿನವೂ ಸಚಿವ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ 2 ನಿವಾಸಗಳಲ್ಲಿ ಐಟಿ ಅಧಿಕಾರಿಗಳ ತನಿಖೆ ...

news

ಡಿ.ಕೆ.ಶಿವಕುಮಾರ್ ಅಗರ್ಭ ಶ್ರೀಮಂತರು: ಯಡಿಯೂರಪ್ಪ

ಬೆಂಗಳೂರು: ಇಂಧನ ಖಾತೆ ಸಚಿವರಾದ ಡಿ.ಕೆ.ಶಿವಕುಮಾರ್ ಅಗರ್ಭ ಶ್ರೀಮಂತರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ...

news

ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮಾಹಿತಿ ನೀಡದ ಗುಪ್ತಚರ ಸಂಸ್ಥೆ ವಿರುದ್ಧ ಸಿಎಂ ಗರಂ

ಡಿ.ಕೆ. ಶಿವಕುಮಾರ್ ಮನೆ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮಾಹಿತಿ ನೀಡದ ಗುಪ್ತಚರ ಇಲಾಖೆ ಬಗ್ಗೆ ...

news

ಇನ್ನು 5, 8 ನೇ ತರಗತಿಯಲ್ಲಿ ಫೇಲ್ ಮಾಡಬಹುದು!

ನವದೆಹಲಿ: 10 ನೇ ತರಗತಿಯವರೆಗೆ ಫೇಲಾಗುವ ಭಯವಿಲ್ಲ ಎಂದು ಆರಾಮವಾಗಿದ್ದ ವಿದ್ಯಾರ್ಥಿಗಳು ಇನ್ನು ...

Widgets Magazine