ಸಿಬಿಐನಿಂದ ರದ್ದಾದ ಗಣಿ ಕೇಸ್ ತನಿಖೆ ಎಸ್ಐಟಿ ಮಾಡುತ್ತಿರುವುದು ಸ್ವಾಗತಾರ್ಹ: ಡಿಕೆಶಿ

ಬೆಂಗಳೂರು, ಶನಿವಾರ, 4 ನವೆಂಬರ್ 2017 (19:32 IST)

ಬೆಂಗಳೂರು: ಗಣಿ ಅಕ್ರಮದ ವಿಷಯವಾಗಿ ಪ್ರಕರಣ ರದ್ದು ಮಾಡಿದ್ದರೂ ಈಗ ಸರ್ಕಾರ ಎಸ್ಐಟಿ ತನಿಖೆಗೆ ಮುಂದಾಗಿರುವುದು ಸ್ವಾಗತಿಸುತ್ತೇನೆ. ಪ್ರಾಕೃತಿಕ ಸಂಪತ್ತು ರಕ್ಷಣೆಗೆ ಇದು ಅಗತ್ಯ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಇಂಧನ ‌ಖರೀದಿ ಅವ್ಯವಹಾರ ತನಿಖೆಯ ಸದನ ಸಮಿತಿಗೆ ತಮ್ಮ ಅಭಿಪ್ರಾಯವನ್ನು‌ ಕೊಟ್ಟಾಗಿದೆ. ಈಗ ಕೊನೆಯ ಹಂತದಲ್ಲಿ ನ. 7 ರಂದು ಸಭೆಗೆ ಬರಬೇಕು. ಇಲ್ಲವಾದರೆ ಸಮಿತಿ ಯಾವ ಶಿಫಾರಸ್ಸು ಮಾಡಿದೆ. ಸಮಿತಿಯ ಅಂತಿಮ‌ ಅಭಿಪ್ರಾಯ ಏನು ಎಂದು ಅವರಿಗೆ ತಿಳಿಯುವುದಿಲ್ಲ ಎಂದರು.

ನನ್ನ ಹಾಗೂ ಆಪ್ತರ ಮೇಲೆ ಐಟಿ ದಾಳಿ ಆಗುತ್ತಿರುವುದು ನಿಜ. ಕಾನೂನಿಗೆ ತಲೆಬಾಗಿ ಐಟಿ ತನಿಖೆಗೆ ಸಹಕರಿಸಿದ್ದೇನೆ. ಅವರು ಕರೆದಾಗಲೆಲ್ಲಾ ಹೋಗಿ ಮಾಹಿತಿ ನೀಡಿದ್ದೇನೆ. ಮುಂದಿನ ವಾರ ವಿಚಾರಣೆಗೆ ಕರೆದಿದ್ದು, ಹೋಗುತ್ತೇನೆ. ಕಾನೂನಿನ‌ ವಿಷಯದಲ್ಲಿ ರಾಜಕೀಯ ಬೆರೆಸಬಾರದು ಎಂದು ಮೌನವಾಗಿದ್ದೇನೆ. ಒಂದೆರಡು ದಿನಗಳಾಗಲಿ. ನಂತರ ಎಲ್ಲವೂ ಬಹಿರಂಗವಾಗುತ್ತದೆ ಎಂದರು.ಇದರಲ್ಲಿ ಇನ್ನಷ್ಟು ಓದಿ :  
ಸಿಬಿಐ ಗಣಿ ಅಕ್ರಮ ಎಸ್ಐಟಿ ಡಿಕೆಶಿ ಶಿವಕುಮಾರ್ Dks Sit Investigation Cbi Probe Mining Case

ಸುದ್ದಿಗಳು

news

ಚಾಮುಂಡೇಶ್ವರಿಯಲ್ಲಿ ಸಿಎಂ ಪ್ರತಿಸ್ಪರ್ಧಿ ಡಾ.ವಿದ್ಯಾಭೂಷಣ: ಸಿಎಂ ಮಣಿಸಲು ಬಿಜೆಪಿ ಪ್ಲಾನ್

ಮೈಸೂರು: ಈ ಬಾರಿ ಸಿಎಂ ಸಿದ್ದರಾಮಯ್ಯ ವರುಣಾ ಬದಲು ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣೆಗೆ ...

news

ರಷ್ಯಾ ಯುವತಿಯ ಮೇಲೆ ಅತ್ಯಾಚಾರ: ಬ್ಯಾಂಕ್ ಮ್ಯಾನೇಜರ್ ಅರೆಸ್ಟ್

ಮಥುರಾ: ಕಳೆದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬಂದಾಗಿನಿಂದಲೂ ರಾಷ್ಟ್ರೀಕೃತ ಬ್ಯಾಂಕ್‌ನ ಮ್ಯಾನೇಜರ್ ...

news

ಹಸೆಮಣೆ ಏರಬೇಕಿದ್ದ ಜೋಡಿ ಮಸಣ ಸೇರಿತು…

ಬೀದರ್: ಕಾರು ಪಲ್ಟಿಯಾದ ಪರಿಣಾಮ ಹಸೆಮಣೆ ಏರಬೇಕಿದ್ದ ಜೋಡಿ ಸೇರಿ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ...

news

ಯುವತಿಯರ ಮೇಲೆ ಆ್ಯಸಿಡ್ ಎರಚುವವರು ಅಲ್ಲಾವುದ್ದೀನ್ ಖಿಲ್ಜಿಯಂತವರು: ಉಮಾಭಾರತಿ

ಜೈಪುರ್: ಯುವತಿಯರ ಮೇಲೆ ಆ್ಯಸಿಡ್ ಎರಚುವವರು ಅಲ್ಲಾವುದ್ದೀನ್ ಖಿಲ್ಜಿ ವಂಶಸ್ಥರು ಎಂದು ಕೇಂದ್ರ ಸಚಿವೆ ...

Widgets Magazine
Widgets Magazine