ಡಿಕೆಶಿ ಮೇಲಿನ ಐಟಿ ದಾಳಿ ಹಿಂದಿನ ಸ್ಫೋಟಕ ರಹಸ್ಯ ಬಹಿರಂಗ

ಬೆಂಗಳೂರು, ಗುರುವಾರ, 3 ಆಗಸ್ಟ್ 2017 (09:16 IST)

ಅಂತೂ ಇಂತೂ ಕಾಂಗ್ರೆಸ್ ಸರ್ಕಾರದ ಪವರ್ ಫುಲ್ ಮಿನಿಸ್ಟರ್ ಡಿ.ಕೆ. ಶಿವಕುಮಾರ್ ಅವರನ್ನ ಐಟಿ ತನ್ನ ಖೆಡ್ಡಾಕ್ಕೆ ಕೆಡವಿಕೊಂಡಿದೆ. ನಿನ್ನೆ ಬೆಂಗಳೂರು, ರಾಮನಗರ, ಮೈಸೂರು, ನವದೆಹಲಿ ಸೇರಿ 70 ಕಡೆ ಡಿಕೆಶಿ ಮತ್ತವರ ಸಂಬಂಧಿಕರ ಮನೆಗಳ ಮೇಲೆ 70 ಕಡೆ ದಾಳಿ ನಡೆಸಿದ್ದಾರೆ. ಈ ದಾಳಿ ಹಿಂದೆ 6 ತಿಂಗಳ ಹಿಂದೆಯೇ ಕಾರ್ಯತಂತ್ರ ರೂಪಿಸಲಾಗಿದೆ.


ಹೌದು, ವರದಿಗಳ ಪ್ರಕಾರ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಮನೆ ಮೇಲೆ ಐಟಿ ದಾಳಿ ಮಾಡಿದ ಬಳಿಕ ಡೈರಿ ಸೇರಿದಂತೆ ಕೆಲ ದಾಖಲೆಗಳನ್ನ ವಶಪಡಿಸಿಕೊಂಡಿತ್ತು. ಇದರಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ದಾಖಲೆಗಳು ಸಿಕ್ಕಿದ್ದು, ಅದನ್ನ ಆಧರಿಸಿ 6 ತಿಂಗಳಿಂದ ಪರಿಶೀಲನೆ ನಡೆಸಿದ್ದ ಐಟಿ ಅಧಿಕಾರಿಗಳು ಸೂಕ್ತ ಸಂದರ್ಭ ನೋಡಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಇತ್ತ, ಮತ್ತೊಂದು ವರದಿಯ ಪ್ರಕಾರ, ಮೂರು ದಿನಗಳ ಹಿಂದೆಯೇ ದಾಳಿಗೆ ಐಟಿ ಇಲಾಖೆ ನಿರ್ಧರಿಸಿತ್ತು. ಆದರೆ, ನಿನ್ನೆ ರೆಸಾರ್ಟ್`ನಲ್ಲಿರುವ ಶಾಸಕರಿಗೆ ಏನಾದರು ಗಿಫ್ಟ್ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಸಿಕ್ಕಿತ್ತು ಎನ್ನಲಾಗಿದ್ದು, ಅದರ ಮಾಹಿತಿ ಮೇರೆಗೆ ದಾಳಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೋಡ್ ವರ್ಡ್ ಹೇಳದೇ ಸತಾಯಿಸುತ್ತಿರುವ ಡಿಕೆಶಿ?

ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ನಿವಾಸದಲ್ಲಿ ಮೊಕ್ಕಾಂ ಹೂಡಿರುವ ಐಟಿ ಅಧಿಕಾರಿಗಳು ರಹಸ್ಯ ಲಾಕರ್ ...

news

ವಿಶ್ವಬ್ಯಾಂಕ್`ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಬಹುದೊಡ್ಡ ಜಯ

ಜೇಲಬ್ ಮತ್ತು ಚೆನಬ್ ನದಿಗಳಲ್ಲಿ ಜಲವಿದ್ಯುತ್ ಸ್ಥಾವರ ನಿರ್ಮಾಣ ವಿಚಾರದಲ್ಲಿ ಪಾಕಿಸ್ತಾನ ವಿರುದ್ಧ ...

news

ಐಟಿ ದಾಳಿಗೂ, ಪ್ರಧಾನಿಗೂ, ಸಂಬಂಧ ಕಲ್ಪಿಸುವುದು ಬಾಲಿಶ: ಶ್ರೀನಿವಾಸ್ ಪ್ರಸಾದ್

ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ನಡೆದ ಐಟಿ ದಾಳಿಗೂ ಪ್ರಧಾನಿ ಮೋದಿಗೂ ಸಂಬಂಧ ...

news

ಐಟಿ ದಾಳಿ: ಕಾಂಗ್ರೆಸ್‌ನಿಂದ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ನೆರವು ಪಡೆಯದೆ ...

Widgets Magazine