Widgets Magazine
Widgets Magazine

ಸರಕಾರದಿಂದ ಜಿಲೇಬಿ, ನಾನ್‌ಜಿಲೇಬಿ ಫೈಲ್‌ಗಳಲ್ಲಿ ತಾರತಮ್ಯ: ಶೆಟ್ಟರ್

ಬೆಂಗಳೂರು, ಸೋಮವಾರ, 20 ಮಾರ್ಚ್ 2017 (16:27 IST)

Widgets Magazine

ಜಿಲೇಬಿ ಫೈಲ್‌ಗಳನ್ನು ನೆನೆಗುದಿಗೆ ಹಾಕಿ ನಾನ್ ಜಿಲೇಬಿ ಪೈಲ್‌ಗಳನ್ನು ಕ್ಲೀಯರ್ ಮಾಡಲಾಗುತ್ತಿದೆ. ಸರಕಾರದಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತಲಾಗ್ತಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.
 
ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲೇಬಿ ಫೈಲ್‌ ಅಂದರೆ, ಗೌಡರು, ಲಿಂಗಾಯುತರು ಮತ್ತು ಬ್ರಾಹ್ಮಣರ ಫೈಲ್‌ಗಳನ್ನು ನೆನೆಗುದಿಗೆ ಹಾಕಲಾಗುತ್ತಿದೆ. ಇತರ ಧರ್ಮದವರ ಫೈಲ್‌ಗಳಿಗೆ ಮುಕ್ತಿ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
 
ಈ ಹಿಂದೆ ಜೆಡಿಎಸ್ ಶಾಸಕ ಬಸವರಾಜ್ ಹೊರಟ್ಟಿ ಕೂಡಾ ಇಂತಹದೇ ಆರೋಪ ಮಾಡಿದ್ದರು. ಜಾತಿ- ಜಾತಿ, ಧರ್ಮ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದೀರಾ ಎಂದು ಕಿಡಿಕಾರಿದರು. 
 
ಅಲ್ಪಸಂಖ್ಯಾತ ರೈತರಿಗೆ ಹೊಸ ಯೋಜನೆ ಘೋಷಣೆ ಮಾಡಿದ್ದೀರಾ. ಯಾವುದೇ ಯೋಜನೆ ಘೋಷಿಸಬೇಕಾದಲ್ಲಿ ಎಲ್ಲಾ ಧರ್ಮದವರಿಗೆ ಅನ್ವಯವಾಗುವಂತೆ ಘೋಷಿಸಿ. ವೋಟ್ ಬ್ಯಾಂಕ್ ಮಾಡುವುದನ್ನು ಬಿಡಿ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
 
ಜಗದೀಶ್ ಶೆಟ್ಟರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ, ನೇತೃತ್ವದ ಸರಕಾರದಲ್ಲಿ ಜಿಲೇಬಿ, ನಾನ್ ಜಿಲೇಬಿ ಎನ್ನುವಂತೆ ಫೈಲ್‌ಗಳ ಪರಿಗಣನೆ ಮಾಡಿಲ್ಲ ಎಂದು ತಿರುಗೇಟು ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜಗದೀಶ್ ಶೆಟ್ಟರ್ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಬಿಜೆಪಿ ಬಜೆಟ್ Congress Bjp Budget Cm Siddaramayya Jagadish Shetter

Widgets Magazine

ಸುದ್ದಿಗಳು

news

ಡೈರಿಯಿಂದ ಬಿಜೆಪಿಯವರ ಬಂಡವಾಳ, ಸುಳ್ಳುಪ್ರಚಾರ ಬಹಿರಂಗವಾಗಿದೆ: ದಿನೇಶ್ ಗುಂಡೂರಾವ್

ಬೆಂಗಳೂರು: ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ನಿವಾಸದಲ್ಲಿ ದೊರೆತ ಡೈರಿ ...

news

ಉಪಚುನಾವಣೆ: ಕಳಲೆ ಕೃಷ್ಣಮೂರ್ತಿ, ಶ್ರೀನಿವಾಸ್ ಪ್ರಸಾದ್ ಆಸ್ತಿ ವಿವರ ಘೋಷಣೆ

ಮೈಸೂರು: ನಂಜನಗೂಡು ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕಳಲೆ ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆಯ ...

news

ಜೆಡಿಎಸ್ ಪಾಳಯದತ್ತ ಎಚ್.ವಿಶ್ವನಾಥ್ ಚಿತ್ತ?

ಬೆಂಗಳೂರು: ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳಿಂದ ಬೇಸತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಎಚ್.ವಿಶ್ವನಾಥ್ ...

news

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸಭೆ: ಉಪಚುನಾವಣೆ ರಣತಂತ್ರ

ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ...

Widgets Magazine Widgets Magazine Widgets Magazine