ತಾರಕಕ್ಕೇರಿದ ತಾರೆಗಳ ಜಗಳ: ನಶೆ ರಾಣಿ ರಮ್ಯಾ ಅಂದ್ರು ಶಿಲ್ಪಾ ಗಣೇಶ್, ಅರ್ಧಬೆಂದ ಮಡಕೆ ಎಂದರು ಜಗ್ಗೇಶ್! (ವಿಡಿಯೋ)

ಬೆಂಗಳೂರು, ಬುಧವಾರ, 7 ಫೆಬ್ರವರಿ 2018 (10:27 IST)

ಬೆಂಗಳೂರು: ನಟಿ ರಮ್ಯಾ ಮತ್ತು ಬಿಜೆಪಿ ನಾಯಕರ ನಡುವಿನ ಟ್ವಿಟರ್ ವಾರ್ ಇನ್ನೂ ಮುಂದುವರಿದಿದೆ. ರಮ್ಯಾ ಬಗ್ಗೆ ಬಂದಿರುವ ನಕಲಿ ಖಾತೆಗೆ ಆಹ್ವಾನ ನೀಡುವ ವಿಡಿಯೋ ಒಂದು ಇದೀಗ ಬಿಜೆಪಿ ನಾಯಕರಿಗೆ ಟೀಕಾಸ್ತ್ರವಾಗಿದೆ.
 

ವಿಡಿಯೋ ಬಗ್ಗೆ ಕಾಮೆಂಟ್ ಮಾಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ, ಬಿಜೆಪಿ ನಾಯಕಿ ಶಿಲ್ಪಾ ಗಣೇಶ್,  ‘ಯಾವಾಗಲೂ ಬೇರೆಯವರ ತಪ್ಪು ಹುಡುಕುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷೆ ನಶೆ ರಾಣಿ ರಮ್ ರವರ ನಿಜ ಬಣ್ಣ ಇದು. ತಾವೇ ಸ್ವತಃ ಹಲವು ನಕಲಿ ಸಾಮಾಜಿಕ ಜಾಲತಾಣದ ಖಾತೆ ಇಟ್ಟುಕೊಂಡಿರುವುದಲ್ಲದೆ, ಬೆಂಬಲಿಗರಿಗೂ ನಕಲಿ ಖಾತೆ ಮೂಲಕ ಬಿಜೆಪಿ ಬಗ್ಗೆ ತಪ್ಪು ಮಾಹಿತಿ ರವಾನಿಸಲು ಹೇಳುತ್ತಿದ್ದಾರೆ’ ಎಂದು ಶಿಲ್ಪಾ ಬರೆದುಕೊಂಡಿದ್ದಾರೆ.
 
ಇನ್ನೊಂದೆಡೆ ರಮ್ಯಾ ಬಗ್ಗೆ ಟ್ವಿಟರ್ ನಲ್ಲಿ ಕಿಡಿ ಕಾರಿರುವ ನವರಸನಾಯಕ ಜಗ್ಗೇಶ್ ‘ಫೇಕ್ ಅಕೌಂಟ್ ಬಗ್ಗೆ ಪಾಠ ಕಲಿಸುತ್ತಿರುವ ಸಭ್ಯಸ್ಥೆ. ಭಾರತದ ನಾಗರಿಕ ಕುಲವಂತರು! ಇವಳ ಪಾಠ ಕಲಿತು ನಿನ್ನೆಯಿಂದ ಸಾಮಾಜಿ ಜಾಲತಾಣದಲ್ಲಿ ವಾಂತಿ ಮಾಡುತ್ತಿರುವವರು ಇವರೆ! ಹೇಗೆ ತಯಾರು ಮಾಡುತ್ತಾರೆ ನೋಡಿ ಅರ್ದಬೆಂದ ಮಡಕೆಗಳ! ಪ್ರತಿ ವ್ಯಕ್ತಿ 15 ರೂ. ಪೇಮೆಂಟ್ ಬೇರೆ! ದೌರ್ಭಾಗ್ಯ’ ಎಂದು ಜಗ್ಗೇಶ್ ಟೀಕಾ ಪ್ರಹಾರ ನಡೆಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ..

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಕಲಿ ಖಾತೆ ಸೃಷ್ಟಿಸಲು ಕರೆ ಕೊಟ್ಟರೇ ರಮ್ಯಾ? ವೈರಲ್ ಆಗುತ್ತಿದೆ ವಿಡಿಯೋ!

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ಮಾತನಾಡುತ್ತಿರುವ ವಿಡಿಯೋವೊಂದು ...

news

‘ಭಾರತೀಯ ಮಸ್ಲಿಮರನ್ನು ಪಾಕಿಸ್ತಾನಿ ಎಂದರೆ ಸುಮ್ಮನೇ ಬಿಡಬೇಡಿ’

ಹೈದರಾಬಾದ್: ಭಾರತೀಯ ಮುಸ್ಲಿಮರನ್ನು ಇನ್ನು ಮುಂದೆ ಪಾಕಿಸ್ತಾನಿ ಎಂದು ಜರೆದರೆ ತಕ್ಕ ಶಾಸ್ತಿ ಮಾಡಿ ಎಂದು ...

news

ಶ್ರವಣಬೆಳಗೋಳದಲ್ಲಿ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ

ಹಾಸನ : ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೋಳದಲ್ಲಿ 88ನೇ ಮಹಾಮಸ್ತಕಾಭಿಷೇಕಕ್ಕೆ ...

news

ರಾಹುಲ್ ಗಾಂಧಿಗಾಗಿ ತೆರಿಗೆ ದುಡ್ಡು ಪೋಲಾದರೂ ‘ನಾಟ್ ಎ ಬಿಗ್ ಮ್ಯಾಟರ್’ ಎಂದ ಸಚಿವ!

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫೆಬ್ರವರಿ 10 ರಿಂದ ಮೂರು ದಿನಗಳ ಕಾಲ ರಾಜ್ಯ ಪ್ರವಾಸ ...

Widgets Magazine