Widgets Magazine
Widgets Magazine

‘ಚುನಾವಣೆಗೆ ನಿಂತು ಗಂಡಸ್ಸುತನ ತೋರು’ ಪ್ರಕಾಶ್ ರೈಗೆ ಜಗ್ಗೇಶ್ ಸವಾಲು!

ಬೆಂಗಳೂರು, ಶನಿವಾರ, 17 ಫೆಬ್ರವರಿ 2018 (10:01 IST)

Widgets Magazine

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸದಾ ಕಿಡಿ ಕಾರುವ ಬಹುಭಾಷಾ ತಾರೆ ಪ್ರಕಾಶ್ ರೈಗೆ ನವರಸನಾಯಕ ಜಗ್ಗೇಶ್ ತಿರುಗೇಟು ನೀಡಿದ್ದಾರೆ.
 

ಮೋದಿಗೆ ದೇಶ ಆಳುವ ಹಕ್ಕಿಲ್ಲ ಎಂಬ ಪ್ರಕಾಶ್ ರೈ ಹೇಳಿಕೆ ಉಲ್ಲೇಖಿಸಿ ಜಗ್ಗೇಶ್ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿ ಸವಾಲು ಹಾಕಿದ್ದಾರೆ. ಗಂಡಸ್ತನ ಇದ್ದರೆ ಚುನಾವಣೆಗೆ ಸ್ಪರ್ಧಿಸಿ ತಾಕತ್ತು ತೋರಿಸಿ ಎಂದು ಸವಾಲು ಹಾಕಿದ್ದಾರೆ.
 
‘ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮಾತಾಡುವ ಹಕ್ಕಿದೆ. ಆದರೆ ಪ್ರಚಾರಕ್ಕೆ, ಕೈ ನಾಯಕರ ಶಹಬಾಶ್ ಗಿರಿಗೆ ಬೇಕಿತ್ತಾ ಈ ತಳಮಟ್ಟದ ನಡೆ? ಮೋದಿ ತೆಗಳಿ ಯಾರೋ ಏನೋ ಆದರು ಅಂತ ಸಾಲಲ್ಲಿ ನಿಂತು ಯಾಕೆ ಚಪ್ಪಾಳೆ ಪ್ರಶಸ್ತಿ ಸ್ವೀಕರಿಸುತ್ತೀರಿ? ನಿಲ್ಲಿ ಚುನಾವಣೆಗೆ! ತಟ್ಟಿತೊಡೆ ಅದು ಗಂಡಸ್ಸುತನ! ಯಾಕೆ ಚುನಾವಣೆ ಹೊಸ್ತಿಲಲ್ಲಿ ಈ ಡ್ರಾಮಾ ಕಂಪನಿ?’ ಎಂದು ಜಗ್ಗೇಶ್ ಕಿಡಿ ಕಾರಿದ್ದಾರೆ.
 
‘ನಿಮಗೆ ಏನು ಅರ್ಹತೆ ಇದೆ? ರಾಜಕೀಯ ಅನುಭವ ಇಲ್ಲಾ? ಕಾನೂನು ವಿದ್ಯಾರ್ಥಿಯೇ? ಅಲ್ಲ!ಗ್ರಾಮ, ಜಿಲ್ಲೆ, ತಾಲೂಕ್, ವಿಧಾನಸಭೆ, ಸಂಘಟನೆ, ಸ್ಪರ್ಧೆ? ಪರಿಚಯ?  ಅದೃಷ್ಟ ಇತ್ತು, ಪ್ರತಿಭೆ ಇತ್ತು ಬಿಡುವಿಲ್ಲದ ನಟನಾದೆ. ತಮಿಳು ನಟನಾಗಿ ಕನ್ನಡಕ್ಕೆ ಸೊಲ್ಲಡಗಿತ್ತು! ಈಗ ಯಾಕೆ ಈ ಪೌರುಷ? ಪ್ರಚಾರ ತಾನೆ? ವ್ಯರ್ಥ ಬದುಕು!’ ಎಂದು ಮತ್ತೊಂದು ಟ್ವೀಟ್ ನಲ್ಲಿ ಜಗ್ಗೇಶ್ ವಾಗ್ದಾಳಿ ನಡೆಸಿದ್ದಾರೆ.
 
ಅಷ್ಟೇ ಅಲ್ಲದೆ ಇನ್ನೊಂದು ಟ್ವೀಟ್ ನಲ್ಲಿ ನಮ್ಮ ನಿಮ್ಮ ಪ್ರಯಾಣ ರಾಜಕಿಶೋರ್ ಜತೆ ಮೈಸೂರು ಜೈಲಿಂದ! ನಾನು ಮರೆತಿಲ್ಲ! ಹೆಮ್ಮೆ ಪಟ್ಟೆ ನಿಮ್ಮ ಬೆಳವಣಿಗೆಗೆ! ರಾತ್ರೋ ರಾತ್ರಿ ರಾಷ್ಟ್ರ ನಾಯಕನಾಗಲು ಮೋದಿ ತೆಗಳುವ ಆಯ್ಕೆ! ನೆನಪಿಡಿ ಮೋದಿ ತೆಗಳಿದ್ದಕ್ಕೆ ನಿಮಗೆ ಮಾತನಾಡಲು ವೇದಿಕೆ ಸಿಗುತ್ತಿದೆ ಎಂದು ಎಚ್ಚರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಚುನಾವಣೆಗೆ ಸ್ಪರ್ಧಿಸುವವರ ಆದಾಯ ಮೂಲ ಘೋಷಣೆಗೆ ಸುಪ್ರೀಂ ಆದೇಶ

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಹಾಗೂ ಅವರ ಕುಟುಂಬದ ಆದಾಯ ಹಾಗೂ ಸ್ವತ್ತುಗಳ ಮೂಲಗಳನ್ನು ಘೋಷಣೆ ...

news

ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಸೆಡ್ಡು, ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಂದು

ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಂದು ...

news

ಬಹಮನಿ ಸುಲ್ತಾನರ ಉತ್ಸವ ಮಾಡುವುದರಲ್ಲಿ ತಪ್ಪೇನಿಲ್ಲ ಎಂದ ಮಲ್ಲಿಕಾರ್ಜುನ ಖರ್ಗೆಗೆ ಶಿಲ್ಪಾ ಗಣೇಶ್ ಕೊಟ್ಟ ಉತ್ತರವೇನು?

ಬೆಂಗಳೂರು: ಬಹಮನಿ ಸುಲ್ತಾನರ ಉತ್ಸವ ಮಾಡುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಸಂಸದ ಮಲ್ಲಿಕಾರ್ಜುನ ...

news

ತಮಿಳುನಾಡು ಸರ್ಕಾರದಿಂದ ಸಿದ್ದರಾಮಯ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ; ಕೈ ಬಿಟ್ಟ ಸುಪ್ರೀಂ

ನವದೆಹಲಿ : ಕಾವೇರಿ ವಿವಾದದ ಕುರಿತು ಶುಕ್ರವಾರ ಅಂತಿಮ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ಜೊತೆಗೆ ...

Widgets Magazine Widgets Magazine Widgets Magazine