Widgets Magazine
Widgets Magazine

ಬಿಜೆಪಿ ವಿರುದ್ಧ ಹೋರಾಟ ಮುಂದುವರೆಸುವೆ– ಜಿಗ್ನೇಶ್

ಚಿಕ್ಕಮಗಳೂರು, ಶುಕ್ರವಾರ, 29 ಡಿಸೆಂಬರ್ 2017 (18:07 IST)

Widgets Magazine

ಮುಂಬರುವ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ದಲಿತರ ಪರ ಹೋರಾಟಗಾರ, ಗುಜರಾತಿನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಘೋಷಿಸಿದ್ದಾರೆ.
 
ಚಿಕ್ಕಮಗಳೂರಿನ ಕೋಮು ಸೌಹಾರ್ದ ವೇದಿಕೆಯ 15ನೇ ವರ್ಷದ ಕಾರ್ಯಕ್ರಮಕ್ಕೆ ಬಂದಿರುವ ಅವರು ಮಾತನಾಡಿ, ನನ್ನ ಹೋರಾಟ ದಲಿತ ಹಾಗೂ ಕೆಳಹಂತದ ಜನರ ಪರವಾಗಿರುತ್ತದೆ. ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.
 
ಗೌರಿಲಂಕೇಶ್ ಅವರೊಂದಿಗಿನ ಪರಿಚಯದ ಬಗ್ಗೆ ಪ್ರಸ್ತಾಪಿಸಿ ದಬ್ಬಾಳಿಕೆ ಹಾಗೂ ಕೋಮುವಾದ ಮಾಡುತ್ತಿರುವವರ ವಿರುದ್ಧವಾಗಿ ಹೋರಾಟ ನಡೆಸಲಾಗುವುದು. ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿದ್ದು, ಕರ್ನಾಟಕ ಹಾಗೂ ಕೇರಳಲ್ಲಿರುವವರು ಹಲವು ಜವಾಬ್ದಾರಿಗಳನ್ನು ನನಗೆ ನೀಡಿದ್ದಾರೆ. 2018ರ ವಿಧಾನ ಸಭಾ ಚುನಾವಣೆಯಲ್ಲೂ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತೇನೆ. ಆದರೆ ಯಾವುದೇ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ತ್ರಿವಳಿ ತಲಾಕ್ ಅಪರಾಧ– ಸಿಹಿ ತಿನಿಸಿ ಸಂಭ್ರಮಿಸಿದ ಮಾಜಿ ಶಾಸಕಿ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಪದ್ಧತಿಯ ವಿರುದ್ಧದ ...

news

ಕೋ–ಆಪರೇಟಿವ್ ಬ್ಯಾಂಕುಗಳಿಲ್ಲ ಐಟಿ ವಿನಾಯಿತಿ– ಜೇಟ್ಲಿ

ಕೋ-ಆಪರೇಟಿವ್ ಬ್ಯಾಂಕುಗಳಿಗೆ ಐಟಿ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರದ ಹಣಕಾಸು ಸಚಿವ ಅರುಣ್ ...

news

ಮಹಾದಾಯಿ: ಬಿಜೆಪಿಗೆ ಕಾಳಜಿಯಿದ್ದರೆ ಅಫಿಡವಿಟ್ ಸಲ್ಲಿಸಲಿ ಎಂದ ಸಿದ್ದರಾಮಯ್ಯ

ಮಹಾದಾಯಿ ವಿವಾದ ಇತ್ಯಾರ್ಥಪಡಿಸಲು ಬಿಜೆಪಿಗೆ ನಿಜಕ್ಕೂ ಕಾಳಜಿ ಇದ್ದರೆ ನ್ಯಾಯಾಧೀಕರಣಕ್ಕೆ ಅಫಿಡವಿಟ್ ...

news

'ಕುಮಾರಸ್ವಾಮಿ ಅವರು ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ' ಹೀಗ್ಯಾಕೆ ಹೇಳಿದ್ರು ಸಿದ್ದರಾಮಯ್ಯ!

ಚಿಕ್ಕಬಳಾಪುರ: ಸಿಎಂ ಸಿದ್ಧರಾಮಯ್ಯ ಅವರು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಸಮಾವೇಶದಲ್ಲಿ ...

Widgets Magazine Widgets Magazine Widgets Magazine