ಬಿಜೆಪಿ ಬಂದ್‌ಗೆ ಜೆಡಿಎಸ್‌ನಿಂದ ಗುಲಾಬಿ ಕೊಡುಗೆ

ಮೈಸೂರು, ಸೋಮವಾರ, 28 ಮೇ 2018 (14:56 IST)

ಬಿಜೆಪಿ ನೀಡಿದ್ದ ಬಂದ್ ಕರೆಗೆ ಪರ್ಯಾಯವಾಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ವ್ಯಾಪಾರಸ್ಥರಿಗೆ ಗುಲಾಬಿ ಹೂ ನೀಡಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡದಂತೆ ಮನವೊಲಿಸುತ್ತಿರುವ ಘಟನೆಗಳು ವರದಿಯಾಗಿವೆ.
ರೈತರ ಸಾಲಮನ್ನಾಗೆ ಆಗ್ರಹಿಸಿ ಕರೆಯಲಾಗಿದ್ದ ಬಂದ್‌ಗೆ ಜೆಡಿಎಸ್ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಕಾರ್ಯಕರ್ತರು ಅಂಗಡಿಗಳಿಗೆ ತೆರಳಿ ಗುಲಾಬಿ ನೀಡಿ ಧೈರ್ಯ ಹೇಳುತ್ತಿರುವುದು ಕಂಡು ಬಂದಿದೆ.
 
ರಾಜ್ಯದ ಬಹತೇಕ ಜಿಲ್ಲೆಗಳಲ್ಲಿ ಬಿಜೆಪಿ ನೀಡಿದ್ದ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ಬಂದ್‌ಗೆ ಹೆದರದೆ ಧೈರ್ಯವಾಗಿ ವ್ಯಾಪಾರ ನಡೆಸಿ ಎಂದು ಜೆಡಿಎಸ್ ಕಾರ್ಯಕರ್ತರು ವ್ಯಾಪಾರಸ್ಥರಿಗೆ ಬೆಂಬಲ ನೀಡಿದ್ದಾರೆ.
 
ಜೆಡಿಎಸ್ ವಿದ್ಯಾರ್ಥಿ ಘಟಕದಿಂದಲೂ ಸಾಥ್ ನೀಡಿದ್ದು, ಬಂದ್ ವಿರೋಧಿಸಿ ಗುಲಾಬಿ ದಿನ ಆಚರಣೆ ಮಾಡುತ್ತಿರೋ ವಿದ್ಯಾರ್ಥಿ ಘಟಕ.ಅಗ್ರಹಾರದ ಸುತ್ತಮುತ್ತ ಅಂಗಡಿಗಳಿಗೆ ಗುಲಾಬಿ ಹೂ ನೀಡಿ ಬಂದ್‌ಗೆ ವಿರೋಧ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಕುಮಾರಸ್ವಾಮಿ ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು-ಆರ್. ಅಶೋಕ್

ಬೆಂಗಳೂರು : ನಾನು ರಾಜ್ಯದ ಜನತೆ ಮುಲಾಜಿನಲ್ಲಿ ಇಲ್ಲ, ಬದಲಿಗೆ ಕಾಂಗ್ರೆಸ್ ನ ಮುಲಾಜಿನಲ್ಲಿದ್ದೇನೆ ಎಂಬ ...

news

ಖಾತೆ ಹಂಚಿಕೆಗಾಗಿ ಜೆಡಿಎಸ್-ಕಾಂಗ್ರೆಸ್ ನಡುವೆ ಕಿತ್ತಾಟ

ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಬಹುಮತದೊಂದಿಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ...

news

ಖಾತೆ ಹಂಚಿಕೆ ತಡವಾಗುತ್ತಿರುವುದರ ನಿಜ ಕಾರಣ ಏನು ಗೊತ್ತಾ?!

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಇಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ...

news

ಕಾಂಗ್ರೆಸ್ ನವರೇ ಸಿಎಂ ಆಗಬೇಕಿತ್ತು, ಆದರೆ ಕುಮಾರಸ್ವಾಮಿ ಸಿಎಂ ಆಗಲಿ ಎಂದಿದ್ದು ಯಾರು ಗೊತ್ತಾ?

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ತಯಾರಿ ನಡೆಸುವಾಗ ನೀವೇ ಸಿಎಂ ಆಗಿ ಎಂದು ಕಾಂಗ್ರೆಸ್ ...

Widgets Magazine