ಜೆಡಿಎಸ್‌ನಿಂದ ಕರ್ನಾಟಕ ವಿಕಾಸ ರಥಯಾತ್ರೆ: ಕುಮಾರಸ್ವಾಮಿ

ಬೆಂಗಳೂರು, ಶುಕ್ರವಾರ, 3 ನವೆಂಬರ್ 2017 (15:50 IST)

ಮುಂಬರುವ ನವೆಂಬರ್ 7 ರಿಂದ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಾಗುತ್ತಿದ್ದು, ಜೆಡಿಎಸ್‌ನಿಂದ ಕರ್ನಾಟಕ ವಿಕಾಸ ರಥಯಾತ್ರೆ ಹೊರಡಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ರಥಯಾತ್ರೆಯ ವಾಹನಕ್ಕೆ ಕರ್ನಾಟಕ ವಿಕಾಸ ವಾಹಿನಿ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದ್ದಾರೆ.
 
ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ನಂತರ ರಥಯಾತ್ರೆ ಚಿಕ್ಕಮಗಳೂರಿಗೆ ತೆರಳಲಿದ್ದು, ನಂತರ ತರಿಕೇರಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
 
ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಕೂಡಾ ಹಲವು ಜಿಲ್ಲೆಗಳಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಹಿರಿಯ ಮುಖಂಡರು ರಥಯಾತ್ರೆಗೆ ಸಾಥ್ ನೀಡಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಪೋಲೊ ಆಸ್ಪತ್ರೆಯಲ್ಲಿ ನಟಿ ಖುಷ್ಬೂಗೆ ಶಸ್ತ್ರಚಿಕಿತ್ಸೆ

ಚೆನ್ನೈ: ಖ್ಯಾತ ಚಿತ್ರ ನಟಿ ಖುಷ್ಬೂ ಸುಂದರ್ ಇಲ್ಲಿನ ಅಪೋಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ...

news

ನಕಲಿ ಮೇಲ್ ಐಡಿ ಬಳಸಿ ದುಬಾರಿ ವಸ್ತು ಖರೀದಿಸಿ ಅಮೆಜಾಗ್ ಗೇ ಪಂಗನಾಮ..!

ಮೈಸೂರು: ನಕಲಿ ಇ-ಮೇಲ್ ಬಳಸಿ ದುಬಾರಿ ಬೆಲೆ ವಸ್ತು ಖರೀದಿಸಿದ್ದವರು ಅಮೆಜಾನ್ ಕಂಪನಿಗೆ ಲಕ್ಷಾಂತರ ರೂ. ನಾಮ ...

news

ಬಿಜೆಪಿ ಯಾತ್ರೆ ಮಾಡಿದಷ್ಟು ನಮಗೆ ಲಾಭ: ಸಿಎಂ ಲೇವಡಿ

ಬೆಂಗಳೂರು: ಬಿಜೆಪಿ ನಾಯಕರು ಯಾತ್ರೆ ಮಾಡಿದಷ್ಟು ನಮಗೆ ಲಾಭವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ

news

ಖಾಸಗಿ ವೈದ್ಯರನ್ನು ನಿಮ್ಮ ಗುಲಾಮರು ಅಂದುಕೊಡಿದ್ದೀರಾ?: ಕುಮಾರಸ್ವಾಮಿ ಕಿಡಿ

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ವೈದ್ಯರ ವಿರುದ್ಧ ಮನಬಂದಂತೆ ಹೇಳಿಕೆ ನೀಡುವ ಸಚಿವ ರಮೇಶ್ ಕುಮಾರ್ ...

Widgets Magazine
Widgets Magazine