ಮಂಡ್ಯ ಲೋಕಸಭೆ ಕ್ಷೇತ್ರದ ಟಿಕೆಟ್ ಗಾಗಿ ಜೆಡಿಎಸ್ ನಲ್ಲೇ ಪೈಪೋಟಿ

ಬೆಂಗಳೂರು, ಮಂಗಳವಾರ, 9 ಅಕ್ಟೋಬರ್ 2018 (09:57 IST)

ಬೆಂಗಳೂರು: ಈ ವರ್ಷ ಅಂತ್ಯ ನಡೆಯಲಿರುವ ಲೋಕಸಭೆ ಚುನಾವಣೆಗೆ ಮೊದಲು ತೆರವಾದ ಸ್ಥಾನಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಟಿಕೆಟ್ ಗಾಗಿ ರಾಜಕೀಯ ಪಕ್ಷದಲ್ಲಿ ಪೈಪೋಟಿ ಶುರುವಾಗಿದೆ.
 
ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಗೆ ಪೈಪೋಟಿ ಹೆಚ್ಚಿದೆ. ಇದು ಜೆಡಿಎಸ್ ನ ಭದ್ರಕೋಟೆಯಾಗಿದ್ದು, ಇಲ್ಲಿ ನಿಂತ ಅಭ್ಯರ್ಥಿಗಳಿಗೆ ಗೆಲುವು ಸುಗಮ ಎನ್ನುವುದು ನಾಯಕರ ಲೆಕ್ಕಾಚಾರ. ಈ ಹಿನ್ನಲೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ಸಭೆ ನಡೆಸಲಿದ್ದು, ಅದಾದ ಬಳಿಕ ಮೂರು ದಿನಗಳೊಳಗೆ ಜೆಡಿಎಸ್ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲಿದ್ದಾರೆ.
 
ಇನ್ನೊಂದೆಡೆ ಕಾಂಗ್ರೆಸ್ ನಲ್ಲೂ ಉಪಚುನಾವಣೆ ಚಟುವಟಿಕೆಗಳು ಗರಿಗೆದರಿದ್ದು, ಇಂದು ಕೈ ನಾಯಕರು ಸಭೆ ಸೇರಿ ಶಿವಮೊಗ್ಗ ಕ್ಷೇತ್ರದ  ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲಿದ್ದಾರೆ. ಅತ್ತ ಬಿಜೆಪಿಗೂ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾಜಿ ಶಾಸಕ ಚೆಲುವನಾರಾಯಣ ಸ್ವಾಮಿಯನ್ನು ಡೆಡ್ ಹಾರ್ಸ್ ಎಂದು ಟೀಕಿಸಿದವರು ಯಾರು ಗೊತ್ತೇ?

ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರ ಉಪಚುನಾವಣೆಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ...

news

ಭಾರತದ ವಿರುದ್ಧ ವಿಧ್ವಂಸಕ ಕೃತ್ಯ ನಡೆಸುತ್ತಿದ್ದ ಉಗ್ರ ಅಝರ್ ಮಸೂದ್ ಗೆ ಯಾವ ಗತಿ ಬಂದಿದೆ ಗೊತ್ತಾ?!

ನವದೆಹಲಿ: ಭಾರತ ಮತ್ತು ಅಫ್ಘಾನಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ನಡೆಸುತ್ತಿದ್ದ ಜೆಇಎಂ ಉಗ್ರ ಅಝರ್ ಮಸೂದ್ ...

news

ದೈಹಿಕ ಸಂಬಂಧ ನಿರಾಕರಿಸಿದ್ದಕ್ಕೆ ಮಹಿಳೆಯನ್ನು ಕೊಂದ ವಾಚ್ ಮೆನ್!

ನವದೆಹಲಿ: ತನಗೆ ಮತ್ತು ಗೆಳೆಯನಿಗೆ ಸೆಕ್ಸ್ ಸುಖ ನೀಡಲು ನಿರಾಕರಿಸಿದ್ದಕ್ಕೆ ಗಾಝಿಯಾಬಾದ್ ನಲ್ಲಿ ...

news

ಲೈಂಗಿಕ ಅಶ್ಲೀಲ ಪ್ರಕಟಿಸುತ್ತಿದ್ದ ವೆಬ್ ಸೈಟ್ ಗಳು ಬಂದ್

ನವದೆಹಲಿ: ಲೈಂಗಿಕ ವಿಚಾರಗಳ ಬಗ್ಗೆ ಅಶ್ಲೀಲ ವಿಚಾರಗಳನ್ನು ಪ್ರಕಟಿಸುತ್ತಿದ್ದ ಐದು ವೆಬ್ ಸೈಟ್ ಗಳ ವಿರುದ್ಧ ...

Widgets Magazine