ಮೃತದೇಹ ಹುಡುಕಲು ಹೋಗಿದ್ದ ಜ್ಯೋತಿರಾಜ್ ಜೋಗ ಜಲಪಾತದಲ್ಲಿ ನಾಪತ್ತೆ!

ಶಿವಮೊಗ್ಗ, ಬುಧವಾರ, 28 ಫೆಬ್ರವರಿ 2018 (06:34 IST)

Widgets Magazine

ಶಿವಮೊಗ್ಗ: ಜಲಪಾತಕ್ಕೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಹುಡುಕಲು ಜಲಪಾತಕ್ಕೆ ಇಳಿದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಕತ್ತಲಾದರೂ ವಾಪಸ್ಸು ಬರದೆ ಆತಂಕ ಸೃಷ್ಟಿಯಾಗಿದೆ.


ಮೃತದೇಹ ಹುಡುಕಲೆಂದು ಮಂಗಳವಾರ ಮಧ್ಯಾಹ್ನ ಮೈಸೂರು ಬಂಗಲೆ ಬಳಿಯ ಮೆಟ್ಟಿಲುಗಳ ಮೂಲಕ ಜಲಪಾತದ ಗುಂಡಿಗೆ ಇಳಿದಿದ್ದ ಜ್ಯೋತಿರಾಜ್‌ ತಂಡ ತಟದಲ್ಲಿ ಶೋಧ ನಡೆಸಿತ್ತು. ನಂತರ ರಾಜ ಹಾಗೂ ರೋರರ್ ಜಲಪಾತದ ಮಧ್ಯೆ ಗುಹೆಯಂತಿರುವ ಪ್ರದೇಶದ ಬಳಿ ಹೋದ ಜ್ಯೋತಿರಾಜ್‌ ನಾಪತ್ತೆಯಾಗಿದ್ದಾರೆ.


ಬೆಂಗಳೂರಿನ ಮಂಜುನಾಥ್ ಮೂರು ದಿನಗಳ ಹಿಂದೆ ಬೈಕ್‌ನಲ್ಲಿ ಜೋಗಕ್ಕೆ ಬಂದು ಡೆತ್‌ನೋಟ್ ಬರೆದಿಟ್ಟು ಜಲಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಜಲಪಾತದ ಬಳಿ ಬೈಕ್ ಮತ್ತು ಡೆತ್‌ನೋಟ್ ಪತ್ತೆಯಾಗಿದೆ. ಜ್ಯೋತಿರಾಜ್ ಅವರು ಈ ಹಿಂದೆ ಜೋಗ ಜಲಪಾತದಲ್ಲಿ ಹಲವು ಮೃತದೇಹಗಳನ್ನು ಹುಡುಕಿ ತೆಗೆದಿದ್ದರು. ಇದನ್ನು ತಿಳಿದ ಮಂಜುನಾಥ್ ನ ಕುಟುಂಬದವರು ಮೃತದೇಹ ಹುಡುಕಿಕೊಡುವಂತೆ ಜ್ಯೋತಿರಾಜ್ ಬಳಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಜ್ಯೋತಿರಾಜ್ ಜೋಗಕ್ಕೆ ಬಂದಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿಗೆ ಯಡಿಯೂರಪ್ಪ ಕೊಟ್ಟ ಗಿಫ್ಟ್ ಏನು ಗೊತ್ತಾ?

ಹುಬ್ಬಳ್ಳಿ: ದಾವಣಗೆರೆಯಲ್ಲಿ ನಡೆದ ರೈತ ಸಮಾವೇಶಕ್ಕೆ ಬಂದ ಪ್ರಧಾನಿ ಮೋದಿಗೆ ಅದ್ಭುತ ಸ್ವಾಗತ ದೊರಕಿದೆ. ...

news

ಪ್ರಧಾನಿ ಮೋದಿಗೆ ಯಡಿಯೂರಪ್ಪ ಕೊಟ್ಟ ಗಿಫ್ಟ್ ಏನು ಗೊತ್ತಾ?

ಹುಬ್ಬಳ್ಳಿ: ದಾವಣಗೆರೆಯಲ್ಲಿ ನಡೆದ ರೈತ ಸಮಾವೇಶಕ್ಕೆ ಬಂದ ಪ್ರಧಾನಿ ಮೋದಿಗೆ ಅದ್ಭುತ ಸ್ವಾಗತ ದೊರಕಿದೆ. ...

news

ಕಾಲಿಗೆ ಬೀಳಲು ಬಂದ ನಾಯಕರಿಗೆ ಪ್ರಧಾನಿ ಮೋದಿ ಮಾಡಿದ್ದೇನು?

ಹುಬ್ಬಳ್ಳಿ: ದಾವಣಗೆರೆಯಲ್ಲಿ ಬಿಜೆಪಿಯ ಬೃಹತ್ ರೈತ ಸಮಾವೇಶದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಹುಬ್ಬಳ್ಳಿ ...

news

ಮನೋಹರ್ ಪರಿಕ್ಕರ್ ಆರೋಗ್ಯಯುತರಾಗಿದ್ದಾರೆ - ಗೋವಾ ಮಿನಿಸ್ಟರ್

ಪಣಜಿ : ಇತ್ತೀಚಿಗೆ ಗೋವಾ ರಾಜ್ಯದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ...

Widgets Magazine