Widgets Magazine
Widgets Magazine

ಖರ್ಗೆ ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ನನಗೆ ತಿಳಿದಿಲ್ಲ: ಪರರಮೇಶ್ವರ್

ಬೆಂಗಳೂರು, ಬುಧವಾರ, 10 ಮೇ 2017 (11:44 IST)

Widgets Magazine

ಮುಂಬರುವ ವಿಧಾನಸಭಾ ಚುನಾವಣೆ ಮತ್ತು ಕೆಪಿಸಿಸಿ ಅಧ್ಯಕ್ಷರ ಕುರಿತಾದ ಚರ್ಚೆಗೆ ಸಿಎಂ ನಿವಾಸದಲ್ಲಿ ಕರೆದಿದ್ದ ಉಪಾಹಾರಕೂಟ ಮುಕ್ತಾಯಗೊಂಡಿದೆ. ಸಭೆಯಲ್ಲಿ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಭಾಗವಹಿಸಿದ್ದರು.


ಸಭೆ ಬಳಿಕ ಮಾತನಾಡಿದ ಪರಮೇಶ್ವರ್, ನನ್ನನ್ನ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಸುವ ಬಗ್ಗೆ ಚರ್ಚೆ ನಡೆದಿದೆ. ಹೊಸಬರನ್ನ ತರುವ ಕುರಿತಂತೆಯೂ ಅಭಿಪ್ರಾಯ ಸಂಗ್ರಹಿಸಿರಬಹುದು ಎಂದು ತಿಳಿಸಿದ್ದಾರೆ. ಇದೇವೇಳೆ, 2018ರ ಚುನಾವಣೆ ಮತ್ತು ಬರವಿರುವುದರಿಂದ ರಾಜ್ಯದಲ್ಲಿ ಸರ್ಕಾರ ಕೈಗೊಂಡ ಪರಿಹಾರ ಕಾರ್ಯಕ್ರಮದ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಪರಮೇಶ್ವರ್ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ನನಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ.
 
ಒಟ್ಟಿನಲ್ಲಿ ವಿಧಾನಸಭಾ ಚುನಾವಣೆಗೆ ಹಲವು ತಿಂಗಳುಗಳೇ ಬಾಕಿ ಉಳಿದಿದ್ದರೂ ಕಾಂಗ್ರೆಸ್`ನಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಬೆಂಗಳೂರಲ್ಲೇ ವಾಸ್ತವ್ಯ ಹೂಡಿದ್ದು, ರಾಜ್ಯ ಕಾಂಗ್ರೆಸ್`ಗೆ ಸರ್ಜರಿ ನಡೆಸಿದ್ದಾರೆ. ನಿನ್ನೆ ಮೊನ್ನೆ ಎರಡೂ ದಿನ ುಸ್ತುವಾರಿಯನ್ನ ಭೇಟಿ ಮಾಡಿದ್ದ ಕಾಂಗ್ರೆಸ್ ಮುಖಂಡರು ಸಿಎಂ ಮತ್ತು ಪರಮೇಶ್ವರ್ ವಿರುದ್ಧ ದೂರಿದ್ದರು. ಇದರ ಬೆನ್ನಲ್ಲೇ ಇಂದು ಉಪಾಹಾರಕೂಟದ ನೆಪದಲ್ಲಿ ಸಿಎಂ ಟೀಮ್ ಜೊತೆ ಸಭೆ ನಡೆಸಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಜಮ್ಮುವಿನಲ್ಲಿ ಸೇನಾಧಿಕಾರಿಯನ್ನ ಅಪಹರಿಸಿ ಹತ್ಯೆಗೈದ ಉಗ್ರರು

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಉಗ್ರರು ಸೇನಾಧಿಕಾರಿಯನ್ನ ಅಪಹರಿಸಿ ...

news

ಹೈದ್ರಾಬಾದ್`ನಲ್ಲಿ ಭೀಕರ ಅಪಘಾತ: ಸಚಿವರ ಪುತ್ರ ಸೇರಿ ಇಬ್ಬರ ಸಾವು

ಹೈದ್ರಾಬಾದ್`ನಲ್ಲಿ ಬೆಳ್ಳಂ ಬೆಳಗ್ಗೆ ನಡೆದ ಅಪಘಾತದಲ್ಲಿ ಆಂಧ್ರಪ್ರದೇಶದ ಹಿರಿಯ ಸಚಿವರೊಬ್ಬರ ಪುತ್ರ ...

news

ಆಸ್ಪತ್ರೆಗೆ ದಾಖಲಾದ ಸೋನಿಯಾ ಗಾಂಧಿ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ...

news

ಸತ್ತ ಹೆಂಡತಿಯೊಂದಿಗೆ ಆರು ದಿನ ಒಂದೇ ರೂಂನಲ್ಲಿ ಕಳೆದ!

ಲಂಡನ್: ಪ್ರೀತಿ ಪಾತ್ರರು ಸತ್ತಾಗ ನಮಗೆ ಅತೀವ ದುಃಖವಾಗುವುದು ಸಹಜ. ಅವರನ್ನು ಬೀಳ್ಕೊಡಲು ಮನಸ್ಸಾಗುವುದೇ ...

Widgets Magazine Widgets Magazine Widgets Magazine