ಬಿಎಸ್‌ವೈ ಶಕ್ತಿ ಕುಂದಿಸಲು ಈಶ್ವರಪ್ಪರಿಂದ ಮತ್ತೆ ರಾಯಣ್ಣ ಬ್ರಿಗೇಡ್ ಜಪ?

ಬೆಂಗಳೂರು, ಸೋಮವಾರ, 17 ಏಪ್ರಿಲ್ 2017 (17:31 IST)

Widgets Magazine

ಉಪಚುನಾವಣೆ ಸಂದರ್ಭದಲ್ಲಿ ರಾಯಣ್ಣ ಬ್ರಿಗೇಡ್‌ನಿಂದ ದೂರವಾಗಿದ್ದ ಬಿಜೆಪಿ ಮುಖಂಡ ಇದೀಗ ಮತ್ತೆ ರಾಯಣ್ಣ ಜಪದಲ್ಲಿ ಬಿಜಿಯಾಗಿದ್ದಾರೆ.
 
ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಪ್ರಮುಖ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಅಸಮಧಾನ ಮೂಡಿಸಿದೆ ಎನ್ನಲಾಗಿದೆ. ಯಡಿಯೂರಪ್ಪಗೆ ಸೆಡ್ಡುಹೊಡೆದು ಅವರ ಶಕ್ತಿಯನ್ನು ಕಡಿಮೆಗೊಳಿಸಲು ಈಶ್ವರಪ್ಪ ಪ್ಲ್ಯಾನ್ ಹಾಕಿದ್ದಾರೆ ಎನ್ನಲಾಗುತ್ತಿದೆ. 
 
ಮೈಸೂರು ಮತ್ತು ಮಡಿಕೇರಿಯಲ್ಲಿ ರಾಯಣ್ಣ ಬ್ರಿಗೇಡ್‌ನ ಬೃಹತ್ ಸಮಾವೇಶ ನಡೆಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 
 
ರಾಜ್ಯದಾದ್ಯಂತ ಪ್ರತಿ ಜಿಲ್ಲೆಗೊಂದರಂತೆ ರಾಯಣ್ಣ ಯುವ ಬ್ರಿಗೇಡ್‌ ಆರಂಭಿಸಿ ಪ್ರತಿಯೊಂದು ಘಟಕದಲ್ಲೂ 25-30 ಉತ್ಸಾಹಿ ಅಹಿಂದ ಯುವಕರನ್ನು ಸೇರಿಸುವಂತೆ ಬ್ರಿಗೇಡ್ ಪ್ರಮುಖರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಯುವ ಘಟಕದಲ್ಲಿ ಬಿಜೆಪಿಯಲ್ಲಿ ಸ್ಥಾನ ದೊರೆಯದ ಅತೃಪ್ತ ಯುವಕರನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಏ.19 ರಂದು ಈಶ್ವರಪ್ಪ ಯುವ ಘಟಕದ ಪದಾಧಿಕಾರಿಗಳ ಹೆಸರುಗಳನ್ನು ಘೋಷಿಸಲಿದ್ದಾರೆ ಎಂದು ಬ್ರಿಗೇಡ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಜತೆ ಮೈತ್ರಿಯೆಂದರೆ ಬಿಜೆಪಿಗೆ ದಾರಿ ಮಾಡಿಕೊಟ್ಟಂತೆ: ಕುಮಾರಸ್ವಾಮಿ

ಬೆಂಗಳೂರು: ಮುಂಬರುವ ಚುನಾವಣೆಗಳಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜತೆ ಮೈತ್ರಿ ...

news

ಬೆಂಗಳೂರಲ್ಲಿ ಮತ್ತೆ ಕಾಮುಕರ ಅಟ್ಟಹಾಸ: ಯುವತಿಗೆ ಲೈಂಗಿಕ ಕಿರುಕುಳ

ಬೆಂಗಳೂರು: ನಗರದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ...

news

ತ್ರಿವಳಿ ತಲಾಖ್ ವಿರೋಧಿಗಳ ಬಗ್ಗೆ ಸಿಎಂ ಯೋಗಿ ವಿಶಿಷ್ಟ ಹೋಲಿಕೆ

ಲಕ್ನೊ: ದೇಶದಾದ್ಯಂತ ತ್ರಿವಳಿ ತಲಾಖ್ ಪದ್ಧತಿ ಬಗ್ಗೆ ಚರ್ಚೆಗಳಾಗುತ್ತಿರುವಾಗಲೇ ಉತ್ತರ ಪ್ರದೇಶ ಸಿಎಂ ...

news

ನಾಲ್ಕು ವರ್ಷದ ಬಾಲೆಯನ್ನು ತಬ್ಬಿಕೊಳ್ಳಲು ಪ್ರಧಾನಿ ಮೋದಿ ಮಾಡಿದ್ದೇನು?

ನವದೆಹಲಿ: ಪ್ರಧಾನಿ ಮೋದಿ ಆಗಾಗ ವಿಶೇಷ ಕೆಲಸಗಳಿಂದ ಗಮನ ಸೆಳೆಯುತ್ತಾರೆ. ಮಕ್ಕಳ ಮನವಿಗೆ ಬೇಗ ...

Widgets Magazine Widgets Magazine