ಕಳಸಾ ಬಂಡೂರಿ, ಮಹದಾಯಿ: ಸರ್ಕಾರಕ್ಕೆ ರೈತರ ಎಚ್ಚರಿಕೆ

ಗದಗ, ಭಾನುವಾರ, 15 ಜುಲೈ 2018 (17:11 IST)


ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿ ಸಂಬಂಧಿಸಿದಂತೆ ರೈತರ ಹೋರಾಟ ನಿರಂತರವಾಗಿ ಮೂರು ವರ್ಷ ಪೂರೈಸುತ್ತಾ ಬಂದ್ರೂ, ಸಮಸ್ಯೆ ಇತ್ಯರ್ಥಗೊಳ್ಳದ ಹಿನ್ನಲೆ ಹತ್ತಾರು ಸಾವಿರ ರೈತರು ದಯಾಮರಣಕ್ಕೆ ಮುಂದಾಗುವುದಾಗಿ ಎರಡೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಂಘಟಿಕರು ಗದಗನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ,  ನೀರಿಗಾಗಿ ರೈತರ ಹೋರಾಟಕ್ಕೆ ಸ್ಪಂದಿಸದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಕಿಡಿಕಾರಿದರು. ಕೇಂದ್ರ ಹಾಗೂ ರಾಜ್ಯ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಒಬ್ಬರ ಮೇಲೆ ಒಬ್ಬರು ಆರೋಪಮಾಡುತ್ತಾ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಇದರಿಂದ ರೈತ ಹೋರಾಟಗಾರರಿಗೆ ಸಾಕಷ್ಟು ನೋವುಂಟಾಗಿದ್ದು 10 ಸಾವಿರಕ್ಕೂ ಹೆಚ್ಚು ಜನರಿಂದ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರೈತ ಸಂಘಟನೆ, ಕನ್ನಡಪರ, ಹಿಂದೂಪರ, ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರು ಸ್ವಯಂ ಪ್ರೇರಣೆಯಿಂದ ದಯಾಮರಣಕ್ಕೆ ಅರ್ಜಿ ಸಲ್ಲಿಸುವುದಾಗಿ ಹೇಳಿದರು. ಈ ಸುದ್ಧಿಗೋಷ್ಠಿಯಲ್ಲಿ ಶ್ರೀರಾಮಸೇನೆ ಜಿಲ್ಲಾ ಅಧ್ಯಕ್ಷ ರಾಜು ಖಾನಪ್ಪನವರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಕೃತಜ್ಞತಾ ಸಲ್ಲಿಸಲಿರುವ ಸಚಿವ ಜಿಟಿಡಿ

ಇಂದು ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಕೃತಜ್ಞತಾ ಸಲ್ಲಿಸಲಿರುವ ಸಚಿವ ಜಿಟಿ ದೇವೇಗೌಡ. ಸಮಾವೇಶಕ್ಕೆ ...

news

25 ವರ್ಷ ರಾಜ್ಯ ಆಳಿದ ಲಿಂಗಾಯತರ ಕೊಡುಗೆ ಏನೆಂಬುದು ಗೊತ್ತು ಎಂದ ಹೆಚ್.ಡಿ.ದೇವೇಗೌಡರು

ಲಿಂಗಾಯತರು 25 ವರ್ಷಗಳ ಕಾಲ ರಾಜ್ಯವನ್ನು ಆಳ್ವಿಕೆ ಮಾಡಿದ್ದು, ಅವರು ಏನು ಮಾಡಿದ್ದಾರೆ? ಒಕ್ಕಲಿಗರು ಏನು ...

news

7 ಅಡಿ ಉದ್ದದ ಹಾವು ಪ್ರತ್ಯಕ್ಷ: ಜನರಲ್ಲಿ ಆತಂಕ

ಮನೆಯ ಬಳಿ ಬಾರಿ ಗಾತ್ರದ ಹಾವನ್ನು ಕಂಡು ಒಂದು ಕ್ಷಣ ಮನೆಯಲ್ಲಿದ್ದ ಜನರು ಗಾಬರಿಗೊಂಡ ಘಟನೆ ನಡೆದಿದೆ.

news

ಅತೀ ಹೆಚ್ಚು ಭಾರ ಎಳೆದವರಿಗೆ ಬಂಗಾರದ ಬಂಪರ್ ಬಹುಮಾನ

ಅತೀ ಹೆಚ್ಚು ಭಾರ ಎಳೆದವರಿಗೆ ಬಂಗಾರದ ಬಹುಮಾನ, ಬೆಳ್ಳಿಯ ಖಡ್ಗ ಹಾಗೂ ಬೆಳ್ಳಿಯ ಬಂಪರ್ ಬಹುಮಾನ ವಿತರಣೆ ...

Widgets Magazine