ಬಿಎಸ್‌ವೈ ತಂಗಿ, ಕುಟುಂಬಸ್ಥರನ್ನು ನಿಂದಿಸಿದ ಕಾ.ಪು.ಸಿದ್ದಲಿಂಗಸ್ವಾಮಿ

ಮೈಸೂರು, ಶುಕ್ರವಾರ, 5 ಮೇ 2017 (11:27 IST)

Widgets Magazine

ಮಾಜಿ ಮುಖ್ಯಮಂತ್ರಿ ಬಿ.ಎಸ್.ಅವರ ತಂಗಿ, ಕುಟುಂಬಸ್ಥರನ್ನು ಅವರ ಆಪ್ತ ಕಾ.ಪು.ಸಿದ್ದಲಿಂಗಸ್ವಾಮಿ ನಿಂದಿಸಿದ ಆಡಿಯೋ ನಗರಾದ್ಯಂತ ಹರಿದಾಡುತ್ತಿದೆ.
 
ಯಡಿಯೂರಪ್ಪ ಅವರ ತಂಗಿಯ ಮಗ ರಾಜೇಶ್‌ನಿಗೆ ಮೊಬೈಲ್ ಫೋನ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ನೀನು ದುರಹಂಕಾರಿ, ನಗರಸಭೆ ಚುನಾವಣೆಯಲ್ಲೂ ಕೂಡಾ ಗೆಲ್ಲದ ನಿನಗೆ ಯಡಿಯೂರಪ್ಪ ಹೆಸರು ಹೇಳಿಕೊಂಡು ಯಾಕೆ ಬದುಕುತ್ತೀಯಾ ಎಂದು ಸಿದ್ದಲಿಂಗ ಸ್ವಾಮಿ ಟೀಕಿಸಿರುವುದು ವಾಟ್ಸಪ್‌ಗಳಲ್ಲಿ ಹರಿದಾಡುತ್ತಿದೆ.
 
ಸಿದ್ದಲಿಂಗಯ್ಯ ಸ್ವಾಮಿಗೆ ಪ್ರತಿಕ್ರಿಯೆ ನೀಡಿರುವ ರಾಜೇಶ್, ನೀವು ನಮ್ಮ ಮನೆಯಲ್ಲಿ ಬೆಳೆದು, ಶ್ರೀಮಂತರಾಗಿ ಇದೀಗ ನಮ್ಮ ಕುಟುಂಬದವರ ವಿರುದ್ಧವೇ ಹೇಳಿಕೆ ನೀಡುತ್ತಿದ್ದೀರಿ. ನಿಮ್ಮ ಸಾವು ಕೊನೆಗೆ ಬಂದಿದೆ. ಅಪಘಾತದಲ್ಲಿ ಸಾವನ್ನಪ್ಪುತ್ತೀಯಾ ಎಂದು ಎಚ್ಚರಿಕೆ ನೀಡಿದ ಆಡಿಯೋ ಕೂಡಾ ಬಹಿರಂಗವಾಗಿದೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಮಗೆ ದೇವರ ಸಮಾನ. ಅವರ ಹೆಸರು ಹೇಳಿ ಬದುಕುವುದಕ್ಕಿಂತ ನಿಮ್ಮ ಸಾಧನೆ ಏನು ಎನ್ನುವುದನ್ನು ತೋರಿಸಿ? ಅವರ ಹೆಸರಿನ ಮೇಲೆ ಜೀವನ ಮಾಡುವುದು ಬಿಡಿ ಎಂದು ಕಾ.ಪು.ಸಿದ್ದಲಿಂಗ ಸ್ವಾಮಿ ತಿರುಗೇಟು ನೀಡಿರುವುದು ಬಿಜೆಪಿ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಯಡಿಯೂರಪ್ಪ ಕಾ.ಪು.ಸಿದ್ದಲಿಂಗಸ್ವಾಮಿ ಬಿಜೆಪಿ Yeddyurappa Bjp Ka.pu.siddalingaswami

Widgets Magazine

ಸುದ್ದಿಗಳು

news

ಭೂವಿವಾದಗಳಿಂದ ದೂರವಿರಿ: ಪೊಲೀಸರಿಗೆ ಸಿಎಂ ವಾರ್ನಿಂಗ್

ಬೆಂಗಳೂರು: ಭೂ ವಿವಾದಗಳನ್ನು ಇತ್ಯರ್ಥಗೊಳಿಸುವಲ್ಲಿ ಪೊಲೀಸರು ನೇರವಾಗಿ ಅಥವಾ ಪರೋಕ್ಷವಾಗಿ ...

news

ಎಚ್.ವಿಶ್ವನಾಥ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲ್ಲ: ಎಚ್.ಎಂ.ರೇವಣ್ಣ

ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ...

news

ಶಾಸಕರ ಅಧ್ಯಯನ ವಿದೇಶ ಪ್ರವಾಸಕ್ಕೆ ಬ್ರೇಕ್: ಕೋಳಿವಾಡ

ಬೆಂಗಳೂರು: ಅಧ್ಯಯನಕ್ಕಾಗಿ ವಿದೇಶ ಪ್ರವಾಸಕ್ಕೆ ತೆರಳಲು ಸಜ್ಜಾಗಿದ್ದ ಶಾಸಕರ ಪ್ರವಾಸಕ್ಕೆ ಬ್ರೇಕ್ ...

news

ಜೆಡಿಎಸ್‌ನೊಂದಿಗೆ ಯಾವುದೇ ಮೈತ್ರಿಯಿಲ್ಲ: ಸಿಎಂ ಸ್ಪಷ್ಟನೆ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿಯಾಗುವುದಿಲ್ಲ ಎಂದು ಸಿಎಂ ...

Widgets Magazine